ಮುಸ್ಲಿಮರ ಮೀಸಲಾತಿ ಬೆಂಗಳೂರಿಗೆ ಜಾಥ -ಅಬ್ದುಲ್ ಜಬ್ಬಾರ್ ಕಲಬುರ್ಗಿ

Get real time updates directly on you device, subscribe now.


ಕೊಪ್ಪಳ  :  ಮುಸ್ಲಿಮರ ಜನಸಂಖ್ಯೆ ಆಧರಿಸಿ ಶೇಕಡ 4 ರಷ್ಟಿರುವ ಮೀಸಲಾತಿಯನ್ನು ಶೇಕಡ 8 ರಷ್ಟು ಹೆಚ್ಚಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಲು  ಬೆಂಗಳೂರಿಗೆ ಜಾಥ ಹೊರಡಲಿದೆ ಎಂದು ಕರ್ನಾಟಕ ಮುಸ್ಲಿಂ ಯುನಿಟಿ ರಾಜ್ಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಕಲಬುರ್ಗಿ ಹೇಳಿದರು
ಅವರು ಬುಧವಾರ   ಪತ್ರಿಕಾ ಭವನ ದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾಧ್ಯಮದೊಂದಿಗೆ ಮಾತನಾಡಿ ಮುಸ್ಲಿಮರನ್ನು ಮುಖ್ಯ ವಾಹಿನಿಗೆ ತರಲು ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ರಾಜ್ಯದಲ್ಲಿ ಕರ್ನಾಟಕ ಮುಸ್ಲಿಂ ಯುನಿಟಿ ಎಂಬ ಒಂದು ಸಂಘ ಅಸ್ತಿತ್ವಕ್ಕೆ ಬಂದಿದೆ ಎಂದವರು ಹಿಂದುಳಿದ ಮುಸ್ಲಿಂ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ನಿರಂತರ ಹೋರಾಟ ಹಮ್ಮಿಕೊಂಡು ಸರಕಾರದ ಗಮನ ಸೆಳೆಯುವಂತಹ ಕೆಲಸ ನಮ್ಮ ಸಂಘ ಮಾಡುತ್ತಿದೆ ಎಂದು ಹೇಳಿದರು
ನಮ್ಮ ಈ ಕರ್ನಾಟಕ ಮುಸ್ಲಿಂ ಯುನಿಟಿ ಸಂಘ ಯಾವುದೇ ಪಕ್ಷಕ್ಕೆ ಸಂಬಂಧಿಸಿದ ಸಂಘಟನೆ ಅಲ್ಲ ಕೇವಲ ಸಮಾಜದ ಅಭಿವೃದ್ಧಿ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿವೆ ಸಮಾಜದ ಹಿರಿಯರ ಮತ್ತು ಜನಪ್ರತಿನಿಧಿಗಳ ಸಹಾಯ ಸಹಕಾರ ಪಡೆದು ಸರ್ಕಾರ ಕೆ ಮನವರಿಕೆ ಮಾಡಿ ಸಮಾಜದ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವ ಸದುದ್ದೇಶದಿಂದ ಈ ಸಂಘ ಕಾರ್ಯ ನಿರ್ವಹಿಸುತ್ತಿದೆ ಎಂದು ಕರ್ನಾಟಕ ಮುಸ್ಲಿಂ ಯುನಿಟಿ ರಾಜ್ಯ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಕಲಬುರ್ಗಿ ಹೇಳಿದರು
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಕಾರ್ಯಕಾರಣಿ ಸದಸ್ಯರಾದ ಕೆ ಎಂ ಸಯ್ಯದ್ ರಾಜ್ಯ ಸಂಚಾಲಕರಾದ ಮೆಹಬೂಬ್ ಸಾಬ್ ಸರಖವಸ್, ನೂರ್ ಅಹಮದ್, ಆಸಿಫ ಧಲಾಯತ್, ಜಿಲ್ಲಾಧ್ಯಕ್ಷ ಮೊಮ್ಮದ್ ಜಿಲಾನ್ ಕಿಲ್ಲೆದಾರ್ ಹಾಗೂ ಅಂಜುಮನ್ ಕಮಿಟಿ ಅಧ್ಯಕ್ಷ ಎಂಡಿ ಆಸಿಫ್ ಕರ್ಕಿಹಳ್ಳಿ ಅನೇಕರು ಪಾಲ್ಗೊಂಡಿದ್ದರು

Get real time updates directly on you device, subscribe now.

Comments are closed.

error: Content is protected !!