ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ & ಒಣಗಿಸುವ ಘಟಕ, ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕಗಳ ಉದ್ಘಾಟನೆ

0

Get real time updates directly on you device, subscribe now.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಕೃಷಿ ತಾಂತ್ರಿಕ ಮಹಾವಿದ್ಯಾಲಯ ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ, ಐ.ಸಿ.ಐ.ಸಿ.ಐ. ಫೌಂಡೇಶನ್ ಬೆಂಗಳೂರು, ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಹೈದರಾಬಾದ್ ಹಾಗೂ ಕುಕನೂರು ಧರಣಿ ಸಿರಿಧಾನ್ಯ ಉತ್ಪಾದಕರ ಕಂಪನಿ ಕುದರಿಮೋತಿ ಇವರ ಸಹಯೋಗದಲ್ಲಿ “ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ ಮತ್ತು ಒಣಗಿಸುವ ಘಟಕ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕಗಳ ಉದ್ಘಾಟನಾ ಕಾರ್ಯಕ್ರಮ”ವು ಸೆಪ್ಟೆಂಬರ್ 10ರಂದು ಕುಕನೂರು ತಾಲ್ಲೂಕಿನ ಕುದರಿಮೋತಿ ಗ್ರಾಮದಲ್ಲಿ ನೆಡೆಯಿತು.
ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ ಮತ್ತು ಒಣಗಿಸುವ ಘಟಕ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕಗಳನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರೈತರು ಆದಾಯವನ್ನು ಹೆಚ್ಚಿಸಿಕೊಳ್ಳಲು ದ್ವಿತೀಯ ಕೃಷಿಯನ್ನು ಹೆಚ್ಚಾಗಿ ಅವಲಂಬಿಸಬೇಕು. ಕೃಷಿ ಉದ್ಯೋಗವಾಗದೆ ಉದ್ಯಮವಾಗಬೇಕೆಂದು ಎಂದರು. ಗ್ರಾಮಕ್ಕೆ ರೂ.50 ಲಕ್ಷ ವೆಚ್ಚದಲ್ಲಿ ಪಶು ಆಸ್ಪತ್ರೆಯನ್ನು ಈಗಾಗಲೇ ಮಂಜೂರಾತಿಯಾಗಿದ್ದು, ರೈತ ಭವನಕ್ಕೆ ಬೇಕಾಗುವ ಜಮೀನನ್ನು ನೀಡಿದ್ದಲ್ಲಿ ಆದಷ್ಟು ಬೇಗ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರೈತರಿಗೆ ನೀರಾವರಿಗೆ ಬೇಕಾಗುವ ಕೆರೆಗಳು ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕುಗಳಿಗೆ ಮಂಜೂರಾತಿಯಾಗಿದ್ದು, ಮುಂದಿನ ದಿನಗಳಲ್ಲಿ 1100 ಎಕರೆಗಳಿಗೆ ಅನುಕೂಲವಾಗುವುದು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಕಾರ್ಯವನ್ನು ರಾಯರಡ್ಡಿಯವರು ಪ್ರಶಂಸಿ, ಇನ್ನೂ ಹೆಚ್ಚಿನ ಸಂಶೋಧನಾ ಕಾರ್ಯವನ್ನು ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಕುದರಿಮೋತಿ ಮೈಸೂರು ಮಠದ ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮಾತನಾಡಿ, ಸಿರಿಧಾನ್ಯಗಳನ್ನು ದಿನನಿತ್ಯ ಆಹಾರದಲ್ಲಿ ಹೆಚ್ಚುಹೆಚ್ಚಾಗಿ ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಪ್ರಾಧ್ಯಾಪಕರು ಹಾಗೂ ವಿಸ್ತರಣಾ ಮುಂದಾಳುಗಳಾದ ಡಾ ಎಂ.ವಿ.ರವಿ ಅವರು ಮಾತನಾಡಿ, ಸೌರಶಕ್ತಿ ಚಾಲಿತ ಈರುಳ್ಳಿ ಸಂಗ್ರಹಣೆ ಮತ್ತು ಒಣಗಿಸುವ ಘಟಕ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಗೊಳಿಸುವ ಘಟಕಗಳನ್ನು ಉಪಯೋಗಿಸಿಕೊಂಡು, ಮುಂದಿನ ದಿವಸಗಳಲ್ಲಿ ರೈತರು ಆರ್ಥಿಕವಾಗಿ ಸಧೃಢವಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ಯಲಬುರ್ಗಾದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಲಿಂಗನಗೌಡ ಪಾಟೀಲ, ಬೆಂಗಳೂರು ಐ.ಸಿ.ಐ.ಸಿ.ಐ. ಫೌಂಡೇಶನ್ ಯೋಜನಾ ವ್ಯವಸ್ಥಾಪಕರಾದ ವೇಣುಗೋಪಾಲ ರಾವ್, ಎಫ್.ಪಿ.ಒ. ಸಂಯೋಜಕರಾದ ಅಶೋಕ ಸಜ್ಜನ್, ಕೊಪ್ಪಳ ಹಾಪ್‌ಕಾಮ್ಸ್ ಸಂಸ್ಥೆಯ ಅಧ್ಯಕ್ಷರಾದ ಯಂಕಣ್ಣಾ ಯರಾಶಿ, ಕ್ಷೇತ್ರ ಅಧೀಕ್ಷಕರಾದ ಡಾ.ಹನುಮಂತಪ್ಪ ದಾಸನಳ್ಳಿ, ಕುಕನೂರು ಧರಣಿ ಸಿರಿಧಾನ್ಯ ಉತ್ಪಾದಕರ ಕಂಪನಿ ಕುದರಿಮೋತಿ ಅಧ್ಯಕ್ಷರಾದ ಫಕೀರಪ್ಪ ಲಿಂಗದಳ್ಳಿ ಸೇರಿದಂತೆ ಕುದರೆಮೋತಿ ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಗ್ರಾಮದ ಪ್ರಗತಿಪರ ರೈತರು ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: