ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಕರಪತ್ರ ವಿತರಿಸಿ ಜನಜಾಗೃತಿ
ಸೆಪ್ಟೆಂಬರ್ 15ರಂದು ನಿಗದಿಯಾದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿ ರಚನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂದೇಶ ನೀಡಲು ಕರಪತ್ರ ವಿತರಣೆ ಮಾಡಿ ಜಾಗೃತಿ ಮೂಡಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಮಂಜುನಾಥ ಹೆಚ್.ಎಸ್.ಅವರು ಸೆಪ್ಟೆಂಬರ್ 11ರಂದು ಹೊಸಪೇಟೆ ನಗರ ಸೇರಿದಂತೆ ವಿವಿಧೆಡೆಯ ಕಚೇರಿಗಳು ಮತ್ತು ಇನ್ನೀತರ ಕಡೆಗಳಲ್ಲಿ ಸಂಚರಿಸಿ ಅಂತಾರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದ ಸರಪಳಿ ರಚಿಸುವ ಮಾರ್ಗ ನಕ್ಷೆ ಸೇರಿದಂತೆ ಇನ್ನೀತರ ಮಾಹಿತಿ ಒಳಗೊಂಡ ಕರಪತ್ರಗಳನ್ನು ವಿತರಿಸಿ ಜನಜಾಗೃತಿ ಮೂಡಿಸಿದರು.
ಮಾರ್ಗ ಮಧ್ಯೆ ಬಣ್ಣದ ಗುರುತು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಾಣದ ಕಾರ್ಯಕ್ಕಾಗಿ ಮಾರ್ಗ ಮಧ್ಯೆ ಬಣ್ಣದ ಗುರುತು ಮತ್ತು ಸಂಖ್ಯೆಗಳನ್ನು ಬರೆಯುವ ಕಾರ್ಯವು ಸಹ ವಿಜಯನಗರ ಜಿಲ್ಲೆಯಲ್ಲಿ ನಡೆಯಿತು.
Comments are closed.