ಪ್ರತಿ ವರ್ಷ ವಿಎಸ್ಎಸ್ಎನ್ ಲಾಭದಾಯದತ್ತ-ರಾಜಶೇಖರಗೌಡ ಆಡೂರು

Get real time updates directly on you device, subscribe now.

ಕೊಪ್ಪಳ : ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘ ಪ್ರತಿ ವರ್ಷ ಲಾಭದಾಯದತ್ತ  ನಡೆದಿದ್ದು ಸಂತಸ ಎನ್ನಿಸುತ್ತದೆ ಎಂದು ಕೊಪ್ಪಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರಗೌಡ ಆಡೂರು ಹೇಳಿದರು
ಅವರು ಸೋಮವಾರ ನಗರದ ಶ್ರೀಕೇತೇಶ್ವರ  ಕಲ್ಯಾಣ ಮಂಟಪದಲ್ಲಿ 2023-24 ನೇ ಸಾಲಿನ 48 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ 1976-77 ರಿಂದ ಇಲ್ಲಿಯವರೆಗೆ 48 ವಸಂತಗಳನ್ನು ಪೂರೈಸಿ ಸರ್ವ ಸದಸ್ಯರ ಬಾಳಿಗೆ ಕಣ್ಣಾಗಿ ನಿಂತಿರುವ  ಕೊಪ್ಪಳದ ವಿಎಸ್ಎಸ್ಎನ್ ಎಂದು ಹೇಳಲು ಹೆಮ್ಮೆ ಅನಿಸುತ್ತದೆ, 2631 ಸದಸ್ಯರಿದ್ದು ,65.34ಲಕ್ಷ ರೂ ಷೇರು ಬಂಡವಾಳ, 62.59 ಲಕ್ಷ ಠೇವುಗಳು,17.44 ನಿಧಿಗಳು,5.42 ಕೋಟಿ ಸಾಲಗಳು,60.42 ಕೋಟಿ ದುಡಿಯುವ ಬಂಡವಾಳ,7.61 ಲಕ್ಷ ಲಾಭ,ಸಂಘದ ನೂತನ  ಕಟ್ಟಡ ನಿರ್ಮಾಣಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಬೆೇಳೆ ಸಾಲ, ಹೈನುಗಾರಿಕೆ ,ಜಮೀನು ಸಾಲ,ನಗದು ಪತ್ರ ಆಧಾರಿ ,ವಾಹನಸಾಲ,ಮಹಿಳಾ ಗುಂಪುಗಳಿಗೆ ಸಾಲ ನೀಡುತ್ತಿದ್ದು ಎಲ್ಲಾ ರೀತಿಯಿಂದ ಲಾಭದಾಯಕ ಸಾಗಿದ್ದು ಈ ಬಾರಿ 7.61ಲಕ್ಷ ರೂ  ಲಾಭದಾಯವಾಗಿದೆ, ಸರ್ವ ಸದಸ್ಯರ ಸಹಕಾರದೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರತಿ ವರ್ಷ ಮುನ್ನಡೆಯುತ್ತಿದ್ದು ಇದು ಎಲ್ಲರಿಗೂ ಸಲ್ಲುವ ಶ್ರೇಯಸ್ಸು ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮರ್ದಾನಲಿ ಮುಜಾವರ,ಕೆ.ಆರ್ ಡಿ ಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರಶೆಟ್ಟರ್ , ನಿರ್ದೇಶಕರಾದ ಮುಕ್ಕಣ್ಣ ಹೊಸಗೇರಿ, ಗವಿಸಿದ್ದನಗೌಡ ಅಂಗಡಿ, ಲೋಕನಗೌಡ ಮಾಲಿ ಪಾಟೀಲ,ಗಾಳೆಪ್ಪ ಗಂಟಿ,ಗವಿಸಿದ್ದಪ್ಪ ಕರ್ಕಿಹಳ್ಳಿ,ಅಣ್ಣಪ್ಪ ಅಂಗಡಿ,ಶಿವಮೂರ್ತಪ್ಪ ಬಿಡನಾಳ,ಪವಿತ್ರ ಹಿರೇಮಠ,ಚೈತ್ರ ಹುಡೇ ಜಾಲಿ,ಗಂಗಮ್ಮ ಚಿಕೇನ  ಕೊಪ್ಪ,ಬ್ಯಾಂಕ್ ಪ್ರತಿನಿಧಿ ಶಿವಕುಮಾರ್ ಮೆಳ್ಳಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ವಿ.ಹಿರೇಮಠ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!