ನಾಳೆ ಶುಭೋದಯ ಕಾರ್ಯಕ್ರಮ; A M ಮದರಿ ಅವರ ಸಂದರ್ಶನ ಪ್ರಸಾರ
ಕೊಪ್ಪಳ: ಹಿರಿಯ ಲೇಖಕರಾದ ಎ.ಎಂ.ಮದರಿ ಅವರ ಸಂದರ್ಶನವು ದೂರದರ್ಶನದ ಚಂದನ ವಾಹಿನಿಯಲ್ಲಿ ಸೆಪ್ಟೆಂಬರ್ 11ರಂದು ಬೆಳಿಗ್ಗೆ 8ರಿಂದ 9 ಗಂಟೆಯವರೆಗೆ ನೇರ ಪ್ರಸಾರವಾಗಲಿದೆ.
ಭಾಗ್ಯನಗರದ ನಿವಾಸಿಯಾದ ಅವರು ‘ಗೊಂದಲಿಗ್ಯಾ’ ಕೃತಿಯ ಮೂಲಕ ತಮ್ಮ ಆತ್ಮಚರಿತ್ರೆ ದಾಖಲಿಸಿದ್ದಾರೆ. ಇದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತವಾಗಿದೆ. ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣ ಅವರು ‘ಗೊಂದಲಿಗ್ಯಾ’ ಕೃತಿಯನ್ನು ಪ್ರಕಟಿಸಿದ್ದು, ಈಗಾಗಲೇ ಮೂರು ಬಾರಿ ಮರುಮುದ್ರಣಗೊಂಡಿದೆ.
ಮದರಿ ಅವರು ಕಳೆದ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
Comments are closed.