ಕೊಪ್ಪಳ ಆರ್‌ಟಿಒ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೆಆರ್‌ಎಸ್ ಡಿಸಿಗೆ ಮನವಿ
ಗಂಗಾವತಿ: ಕೊಪ್ಪಳದ ಹಾಲವರ್ತಿ ಕ್ರಾಸ್ ಬಳಿ ವಾಹನ ಪಲ್ಟಿಯಾಗಿ
ಅನೇಕ ವಿದ್ಯಾರ್ಥಿಗಳ ಮೂಳೆ ಮುರಿದಿದ್ದು, ಹಲವಾರು ಮಕ್ಕಳು
ಗಾಯಗೊಂಡಿದ್ದಾರೆ ಇದಕ್ಕೆ ಕಾರಣರಾದ ಆರ್‌ಟಿಒ ಹಾಗು ವಾಹನ
ತಡೆಗೆ ಯತ್ನಿಸಿ ಅವಘಡ ನಡೆಯಲು ಗೃಹರಕ್ಷಕದಳದ
ಸಿಬ್ಬಂದಿ ವಿರುದ್ಧ ಕೂಡಲೆ ಕಾನೂನು ಕ್ರಮ
ತೆಗೆದುಕೊಳ್ಳಬೇಕೆಂದು ಕೆಆರ್‌ಎಸ್ ಪಕ್ಷದ ಕೊಪ್ಪಳ
ಜಿಲ್ಲಾಧ್ಯಕ್ಷರಾದ ಆಶಾ ವಿರೇಶ್ ಇತರೆ ಪದಾಧಿಕಾರಿಗಳು
ಜಿಲ್ಲಾಡಳಿತ ಭವನದ ಎದುರು ಪ್ರತಿಭಟಸಿ ಜಿಲ್ಲಾಧಿಕಾರಿಗಳಿಗೆ
ಮನವಿ ಸಲ್ಲಿಸಿದರು.
ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದ ಸುಮಾರು ೩೦ಕ್ಕು
ಹೆಚ್ಚು ಮಕ್ಕಳನ್ನು ಕ್ಲಷ್ಟರ್ ಮಟ್ಟದ ಕ್ರೀಡಾ ಕೂಟ ಮುಗಿಸಿ
ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ಜರುಗಿದ್ದು, ಸಂಪೂರ್ಣ
ತನಿಖೆ ನಡೆಸಬೇಕು, ಆರ್‌ಟಿಒ ಮೇಲಾಧಿಕಾರಿಗಳ ನಿರ್ಲಕ್ಷ್ಯಕ್ಕೂ
ಸರಿಯಾದ ಶಾಸ್ತಿಯಾಗಬೇಕು, ಆರ್‌ಟಿಒ, ಗೃಹರಕ್ಷಕದಳದ
ಸಿಬ್ಬಂದಿಯನ್ನು ಕೂಡಲೆ ಬಂಧಿಸಬೇಕು, ಆರ್‌ಟಿಓ ಅಧಿಕಾರಿಗಳು
ಹೋಂ ಗಾರ್ಡ್ ತಮ್ಮ ಕಾರ್ಯಕ್ಕೆ ಬಳಕೆ ಮಾಡುವುದನ್ನು
ನಿಬಂಧಿಸಬೇಕು, ಗಾಯಗೊಂಡ ಮಕ್ಕಳ ಕುಟುಂಬಗಳಿಗೆ
ಪರಿಹಾರ ಸರಕಾರ ಒದಗಿಸಬೇಕು, ಜಿಲ್ಲೆಯ ಎಲ್ಲಾ ಶಾಲಾ
ವಾಹನಗಳನ್ನು ತಪಾಸಣೆ ನಡೆಸಿ ದಾಖಲಾತಿ ಸೇರಿದಂತೆ ವಾಹನದ
ಸಂಚಾರಕ್ಕೆ ಯೋಗ್ಯವಾಗಿದೆ ಎಂಬುದನ್ನು ಕೂಡಲೆ ಖಚಿತ
ಪಡಿಸಿಕೊಳ್ಳಬೇಕು ಇಲ್ಲದಿದ್ದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿ
ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ
ಕ್ರಮ ವಹಿಸಬೇಕೆಂದು ಅವರು ಈ ಸಂದರ್ಭದಲ್ಲಿ ಅಗ್ರಹಿಸಿದರು.
ಜಿಲ್ಲಾ ಕಾರ್ಯದಿರ್ಶಿ ಗಣೇಶ್ ಪದಾಧಿಕಾರಿಗಳಾದ ಮೆಹಬೂಬ್,
ಬಸವರಾಜ್, ಗಂಗಾಧರ ಹಾಗು ಕನಕಪ್ಪ ಇತರರಿದ್ದರು.