ವಿಪ್ ಉಲ್ಲಂಘನೆ ಕಾನೂನು ಕ್ರಮ ಒತ್ತಾಯಿಸಿ ಬಿಜೆಪಿ ದೂರು
ಕೊಪ್ಪಳ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟಂತೆ ಪಕ್ಷದ ವೀಪ್ ಉಲ್ಲಂಘನೆ ಮಾಡಿದ ಮೂರು ಸದಸ್ಯರ ವಿರುದ್ಧ ನಗರಸಭಾ ಸದಸ್ಯತ್ವ ಅನರ್ಹಾರ್ತಿಗಾಗಿ ಜಿಲ್ಲಾ ಅಧ್ಯಕ್ಷರಾದ ನವೀನ್ ಕುಮಾರ್ ಗುಳ್ಳಗಣನವರು ನೇತೃತ್ವದಲ್ಲಿ ಕೊಪ್ಪಳ ನಗರಸಭೆಯ ಕಮಿಷನರ್ ಗಣಪತಿ ಪಾಟೀಲ್ ಅವರಿಗೆ ಅರ್ಜಿ ಸಲ್ಲಿಸಲಾಯಿತು.
ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ( ಪಕ್ಷಾಂತರ ನಿಷೇಧ ) ಅಧಿನಿಯಮ 2012ರ
3 sub sec 1B ಅಡಿಯಲ್ಲಿ ಬಿಜೆಪಿ ವಿಪ್ ಉಲ್ಲಂಘಿಸಿದ ಮೂರು ನಗರಸಭಾ ಸದಸ್ಯರಾದ
ಶ್ರೀಮತಿ ಅಶ್ವಿನಿ ಬಿ ಗದಗಿನಮಠ, ಶ್ರೀಮತಿ ಬಸಮ್ಮ ದಿ ವಟೂರು, ಶ್ರೀಮತಿ ಅನ್ನಪೂರ್ಣಮ್ಮ ಬಳಗೇರಿ
ಇವರು ಮೂರು ನಗರ ಸಭಾ ಸದಸ್ಯರಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರ ಸಭೆ ಪೌರಾಯುಕ್ತರಿಗೆ ದೂರು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಡಿಗೇರ ಸುನಿಲ್ ಕುಮಾರ್ ಹೇಸರೂರು, ನಗರ ಸಭೆ ಸದಸ್ಯರಾದ ಸೋಮಣ್ಣ ಹಳ್ಳಿ ಬಿಜೆಪಿ ಮುಖಂಡರಾದ ವಕಿಲರಾದ ರಾಘವೇಂದ್ರ ಪಾನಘಂಟಿ, ವಿ ಏಮ್ ಬೋಸನೂರ ಮಠ ವಕಿಲರು , ವಕಿಲಾರಾದ ಶಂಕರ್ ಸೀಂಗ್ರಿ ಜಿಲ್ಲಾ ಎಸ್ಸಿ ಮೂರ್ಚಾ ಅಧ್ಯಕ್ಷ ಗಣೇಶ್ ಹೋರತಾಟ್ನಾಳ ಮತ್ತು ಶ್ರೀಮತಿ ಮಹಾಲಕ್ಷ್ಮೀ ಕಂದಾರಿ ರಾಜು ಬಾಕಳೇ ಮಹೇಶ್ ಅಂಗಡಿ ರಮೇಶ್ ಕವಲೂರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು
Comments are closed.