ವಾಲ್ಮೀಕಿ ಸಮುದಾಯದ ಋಣ ತೀರಿಸುವೆ : ಅಮ್ಜದ್ ಪಟೇಲ್

0

Get real time updates directly on you device, subscribe now.


ಕೊಪ್ಪಳ: ನಾನು ನಾಲ್ಕು ಬಾರಿ ನಗರಸಭೆ ಸದಸ್ಯನಾಗಿದ್ದೇನೆ, ಸತತವಾಗಿ ಆಯ್ಕೆಯಾಗಲು ನನಗೆ ವಾಲ್ಮೀಕಿ ಸಮುದಾಯವೂ ಸಹಾಯ ಮಾಡಿದೆ, ಜೊತೆಗೆ ನಿಂತಿದೆ ಖಂಡಿತ ಅದರ ಋಣ ತೀರಿಸುವೆ ಎಂದು ನಗರಸಭೆ ನೂತನ ಅಧ್ಯಕ್ಷ ಅಮ್ಜದ್ ಪಟೇಲ್ ಮಾತು ನೀಡಿದರು.
ಅವರು ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ವಾಲ್ಮೀಕಿ ಸಮುದಾಯದ ಬೇಡಿಕೆಗಳು ಸಮಂಜಸವೂ ನ್ಯಾಯಬದ್ಧವೂ ಆಗಿದ್ದು ನಿಶ್ಚಿತವಾಗಿ ಇನ್ನೆರಡು ಮೂರು ತಿಂಗಳಲ್ಲಿ ಸರಿಪಡಿಸುವ ಜೊತೆಗೆ ವಿವಿಧ ವಾರ್ಡುಗಳಲ್ಲಿ ಬಾಕಿ ಇರುವ ಆಶ್ರಯ ನಿವೇಶನ ಹಕ್ಕು ಪತ್ರ ಕೊಡಲಾಗುವದು ಎಂದರು.
ಪ್ರತಿ ವಾರ್ಡಿನ ಸಮಸ್ಯೆ ವಿಭಿನ್ನವಾಗಿದ್ದು, ಅಧಿಕಾರಿಗಳ ಸಹಕಾರದೊಂದಿಗೆ ತಮಗೆ ಸಿಕ್ಕಿರುವ ೧೪ ತಿಂಗಳುಗಳನ್ನೇ ಹೆಚ್ಚು ಸಮಯ ಕೆಲಸ ಮಾಡಿ ೨೪ ತಿಂಗಳು ಎನ್ನುವ ರೀತಿ ಕೆಲಸ ಮಾಡುತ್ತೇನೆ, ಸಾರ್ವಜನಿಕರು ಸಹ ಸಹಕರ ನೀಡಬೇಕು ಎಂದರು.
ಈ ವೇಳೆ ಮಾತನಾಡಿದ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ ಅವರು, ಸಮಾಜದ ಆಸ್ತಿಯಗಿರುವ ವಾಲ್ಮೀಕಿ ಭವನದ ಅನುದಾನ ಮರಳಿ ಹೋಗಿದ್ದು ಅದನ್ನು ತರಿಸಿ ಸಂಪೂರ್ಣ ಅಭಿವೃದ್ಧಿಗೊಳಿಸುವದರ ಜೊತೆಗೆ ವಿವಿಧ ಬೇಡಿಕೆಗಳನ್ನು ಮಂಡಿಸಿ, ಶಾಸಕರು ಅಲ್ಪಸಂಖ್ಯಾತರಿಗೆ ಸಾಮಾನ್ಯ ಮೀಸಲಿನಲ್ಲಿ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದರು.
ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಜ್ಯೋತಿ ಎಂ. ಗೊಂಡಬಾಳ ಅವರು ಮತನಾಡಿ, ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಅನುಭವಿಗಳಾಗಿದ್ದು, ನಗರದ ೩೧ ವಾರ್ಡುಗಳ ಮಾಹಿತಿ ಇದೆ, ಅಭಿವೃದ್ಧಿಯ ಅವಶ್ಯಕತೆಯನ್ನು ಮನಗಂಡು ಆ ರೀತಿ ಕೆಲಸ ಮಾಡುವ ಭರವಸೆ ಇದೆ, ಶೋಷಿತ ಸಮುದಾಯಗಳ ಅನುದಾನ ಸರಿಯಾದ ರೀತಿಯಲ್ಲಿ ತಲುಪುವಂತೆ ಮಾಡಬೇಕಿದೆ ಅದರ ಬಗ್ಗೆ ಗಮನ ಹರಿಸಿರಿ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಮಣ್ಣ ಚೌಡ್ಕಿ ಅವರು ಮಾತನಡಿ, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಹುದ್ದೆಗೆ ಏರುವ ಅವಕಾಶ ಇದ್ದು, ವಿದ್ಯಾವಂತ ಬುದ್ಧಿವಂತ ಆಗಿರುವ ಅಮ್ಜದ್ ಪಟೇಲ್ ಅವರು ಎಲ್ಲಾ ಸಮುದಾಯಗಳ ಸಮಸ್ಯೆಗೆ ಸ್ಪಂದಿಸಿ ಎಲ್ಲರ ಜೊತೆಗೆ ಬೆರೆತು ಸಾಗಲಿ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಾರ್ಕಂಡೇಶ್ವರ ಕಲ್ಲನವರ, ಬಸವರಾಜ ಶಹಪೂರ, ಕೊಟೇಶ ದದೇಗಲ್, ಪ್ರಕಾಶ ಗುದಗಿ, ಈರಣ್ಣ ವಾಸ್ತೆ, ಚಿನ್ನಪ್ಪ ವಾಲ್ಮೀಕಿ, ವಿರುಪಾಕ್ಷಗೌಡರ, ಗವಿಸಿದ್ದಪ್ಪ ಕಲ್ಲನವರ ಇಒದ್ದರು. ರಾಮಣ್ಣ ಕುಣಕೇರಿ ನಿರೂಪಿಸಿದರು, ಮಂಜುನಾಥ ಜಿ. ಗೊಂಡಬಾಳ ವಂದಿಸಿದರು.

Get real time updates directly on you device, subscribe now.

Leave A Reply

Your email address will not be published.

error: Content is protected !!
%d bloggers like this: