ಸಂಗೀತ ಕಲೆ ಪ್ರತಿಭೆ ಪೂರಕವಾಗಿದೆ-ಮೆಹಬೂಬ್ ಕಿಲ್ಲೇದಾರ
ಸಂಗೀತ ಸಂಜೆ: ಚಾಲನೆ
ಗಂಗಾವತಿ.
ನಮ್ಮ ಪ್ರತಿಭೆಗೆ ಪೂರಕವಾಗಿರುವ ಸಂಗಿತ ಕಲೆಯಲ್ಲಿ ಮಕ್ಕಳಿಗೆ ಹೆಚ್ಚು ಆಸಕ್ತಿ ಮೂಡಿಸಲು ಪಾಲಕರು ಮುಂದಾಗಬೇಕು ಎಂದು ಜನಪದ ಅಕಾಡೆಮಿ ಸದಸ್ಯ ಹಾಗೂ ಶಿಕ್ಷಕ ಮೆಹಬೂಬ್ ಕಿಲ್ಲೇದಾರ ಕರೆ ನೀಡಿದರು.
ಯುವ ಸಂಕಲ್ಪ ಗ್ರಾಮೀಣಾಭಿವೃದ್ಧಿ ಹಾಗೂ ಶೈಕ್ಷಣಿಕ ಸಾಂಸ್ಕೃತಿಕ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಅವರ ಸಹಯೋಗದಲ್ಲಿ ನಗರದ ಗದಿಗೇಪ್ಪ ಕಾಲೋನಿಯ ಶ್ರೀ ಗಣಪತಿ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಸಂಗೀತ ಸೇವೆಯಲ್ಲಿ ನಿರತರಾಗಿರುವ ರಾಜಾಸಾಬ್ ಮುದ್ದಾಬಳ್ಳಿ ಅವರು ಹಲವಾರು ಕಲಾವಿದರನ್ನು ಪ್ರೋತ್ಸಾಹಿಸಿದ್ದಾರೆ. ನಾನು ಕೂಡಾ ಇಂದು ಜನಪದ ಕಲಾವಿದನಾಗಲು ಅವರ ಹಾರೈಕೆ ಮತ್ತು ಪ್ರೋತ್ಸಾಹವಿದೆ. ಜಾತಿ, ಧರ್ಮವನ್ನು ಮೀರಿರುವ ಸಂಗೀತ ಕಲೆಗೆ ರಾಜಾಸಾಬ್ ಮುದ್ದಾಬಳ್ಳಿ ಮತ್ತು ಅವರ ಪುತ್ರ ರಿಜ್ವಾನ್ ಮುದ್ದಾಬಳ್ಳಿ ನಿರಂತರ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಅಕಾಡೆಮೆಯಿಂದ ಪ್ರಶಸ್ತಿ ನೀಡಲು ನಾನು ಬಯಿಸುತ್ತೇನೆ. ಜನಪದ ಕಲೆಯನ್ನು ಉಳಿಸಿ ಬೆಳೆಸಬೇಕಿದೆ. ಜಿಲ್ಲೆಯಲ್ಲಿ ಕಲಾವಿದರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸುವ ಚಿಂತನೆ ನಡೆಸಿದ್ದೇವೆ ಎಂದರು.
ರೈತ ಮುಖಂಡ ನಾರಾಯಣಪ್ಪ ನಾಯಕ, ಪತ್ರಕರ್ತ ಹರೀಶ ಕುಲಕರ್ಣಿ, ಶಿಕ್ಷಕ ರಮೇಶ, ನಾಗರಾಜ ನಾಗಲೀಕರ, ದರೋಜಿ, ರಿಜ್ವಾನ್ ಮುದ್ದಾಬಳ್ಳಿ ಅವರು ಅಕಾಡೆಮಿ ಸದಸ್ಯ ಮೆಹಬೂಬ್ ಕಿಲ್ಲಾದಾರ ಅವರನ್ನು ಸನ್ಮಾನಿಸಿ ಗೌರವಿಸಿದರು. ನಂತರ ರಾಜಾಸಾಬ್ ಮುದ್ದಾಬಳ್ಳಿಯಿಂದ ತಬಲಾ ಸೋಲು ನಡೆಯಿತು. ಸಂಗೀತ ಶಿಕ್ಷಕ ಪಂಚಾಕ್ಷರಿ ನಿರ್ವಹಿಸಿ ನಂತರ ಸಂಗೀತ ಕಾರ್ಯಕ್ರಮ ನಡೆಸಿದರು. ಸಂಗೀತ ಶಾಲೆ, ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.
Comments are closed.