ಮೇಜರ್ ಧ್ಯಾನಚಂದ್ 119ನೇ ಜನ್ಮ ದಿನಾಚರಣೆ, ರಾಷ್ಟ್ರೀಯ ಕ್ರೀಡಾ ದಿನಾಚರಣೆ

Get real time updates directly on you device, subscribe now.

ದೈನಂದಿನ ಹವ್ಯಾಸವಾಗಿ ಕ್ರೀಡೆಯನ್ನು ಅಳವಡಿಸಿಕೊಳ್ಳಿ: ರಾಹುಲ್ ರತ್ನಂ ಪಾಂಡೆಯ
 ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ದೈನಂದಿನ ಹವ್ಯಾಸವಾಗಿ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರು ಹೇಳಿದರು.
ಮೇಜರ್ ಧ್ಯಾನಚಂದ್‌ರವರ 119ನೇ ಜನ್ಮ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಗಸ್ಟ್ 29ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಕ್ರೀಡಾ ದಿನಾಚರಣೆ” ಕಾರ್ಯಕ್ರಮದಲ್ಲಿ ಧ್ಯಾನಚಂದ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ಮುಂದಿನ ಭಾವಿ ಪ್ರಜೆಗಳಾಗಿದ್ದು, ಮಕ್ಕಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕ್ರೀಡಾಸಕ್ತಿಯನ್ನು ಬೆಳಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಾಧನೆ ಮಾಡಿ, ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಲು ಶ್ರಮಿಸಬೇಕು. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಕ್ರೀಡಾ ಮೀಸಲಾತಿಯಡಿ ಉನ್ನತ ಮಟ್ಟದ ಸರಕಾರಿ ಹುದ್ದೆಗಳು ಲಭಿಸುತ್ತವೆ. ಕ್ರೀಡೆ ಮೂಲಕ ವಿವಿಧ ಅವಕಾಶಗಳಿದ್ದು, ಅವುಗಳನ್ನು ಉಪಯೋಗಿಸಿಕೊಳ್ಳಿ ಎಂದರು.
ಸನ್ಮಾನ: ಕೊಪ್ಪಳ ಜಿಲ್ಲೆಯ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟçಮಟ್ಟದಲ್ಲಿ ಸಾಧನೆಗೈದ ಪ್ರತಿಭಾವಂತ ಕ್ರೀಡಾಪಟುಗಳಾದ ವಾಲಿಬಾಲ್ ಕ್ರೀಡಾ ವಿಭಾಗದಲ್ಲಿ ರಾಷ್ಟçಮಟ್ಟದಲ್ಲಿ ಸಾಧನೆಗೈದ ಇಂದುಮತಿ ತಂದೆ ಯಂಕಪ್ಪ, ಶಿಲ್ಪಾ ತಂದೆ ದೇವಪ್ಪ, ಭೂಮಿಕಾ ತಂದೆ ರಾಮಣ್ಣ, ಕಾವೇರಿ ತಂದೆ ನಾಗಪ್ಪ, ದೀಕ್ಷಿತಾ ತಂದೆ ರಂಗಸ್ವಾಮಿ, ಪವಿತ್ರಾ ತಂದೆ ಆನಂದ ಹಾಗೂ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ವಿಭಾಗದಲ್ಲಿ ಸಾಧನೆಗೈದ ಪ್ರಮೀಳಾ ತಂದೆ ಪಕೀರಪ್ಪ, ಜಗದೀಶ ತಂದೆ ಯಲ್ಲಪ್ಪ, ನಂದನಕುಮಾರ ತಂದೆ ಬಸವರಾಜ, ಗೌತಮ ತಂದೆ ಬೆನಕಪ್ಪ, ಭರತ ತಂದೆ ಶರಣಬಸಪ್ಪ ಹಾಗೂ  ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ವಿಭಾಗದಲ್ಲಿ ಗಂಗವ್ವ ತಂದೆ ಈರಪ್ಪ,  ಹಾಗೂ ರಾಷ್ಟ್ರ ಮಟ್ಟದ ನೆಟ್‌ಬಾಲ್ ವಿಭಾಗದಲ್ಲಿ  ಸೌಜನ್ಯ ತಂದೆ ಸಿದ್ದಯ್ಯ,  ಶಿವಾನಿ ತಂದೆ ಕನಕಪ್ಪ ಹಾಗೂ ದಕ್ಷಿಣ ವಲಯ ವಿಶ್ವವಿದ್ಯಾಲಯಗಳ ಖೋ-ಖೋ ಕ್ರೀಡಾಕೂಟದಲ್ಲಿ ಚನ್ನಬಸ್ಸಪ್ಪ ತಂದೆ ಮುದುಕಪ್ಪ ಅಳ್ಳಳ್ಳಿ, ರಾಷ್ಟ್ರ ಮಟ್ಟದ ಕರಾಟೆ ವಿಭಾಗದಲ್ಲಿ ಭೂಮಿಕಾ ತಂದೆ ವಿರುಪಾಕ್ಷಪ್ಪ, ಈ ಎಲ್ಲಾ ಕ್ರೀಡಾಪಟುಳಿಗೆ ಹಾಗೂ ಕ್ರೀಡಾ ಇಲಾಖೆಯ ಖೋ-ಖೋ ತರಬೇತುದಾರರಾದ ಎ.ಎನ್.ಯತಿರಾಜ್,  ವಾಲಿಬಾಲ್ ತರಬೇತುದಾರರಾದ ದೀಪಾ ಮತ್ತು  ಸುರೇಶ, ಅಥ್ಲೆಟಿಕ್ಸ್ ತರಬೇತುದಾರರಾದ ವಿಶ್ವನಾಥ ಹಾಗೂ ವಾಲಿಬಾಲ್ ತರಬೇತುದಾರರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಠ್ಠಲ್ ಬಿ ಜಾಬಗೌಡರ್, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎ.ಬಸವರಾಜ, ತಾಲೂಕು ಕ್ರೀಡಾಧಿಕಾರಿಗಳಾದ ಶರಣಬಸವ ಬಂಡಿಹಾಳ, ಜಿಲ್ಲಾ ಕ್ರೀಡಾ ಇಲಾಖೆಯ ಅಧೀಕ್ಷರಾದ ಹೆಚ್.ನಾಗರಾಜ್, ವಿಷಯ ನಿರ್ವಾಹಕರಾದ ಬಿ.ಕೀರ್ತಿವರ್ಧನ ಸೇರಿದಂತೆ ತರಬೇತುದಾರರು ಮತ್ತು ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಹಾಗೂ ಕ್ರೀಡಾಪಟುಗಳು ಮತ್ತು ಇಲಾಖಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬಸವರಾಜ ಹನುಮಸಾಗರ ಅವರು ಕಾರ್ಯಕ್ರಮ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!