ಕರ್ನಾಟಕ ರಾಜ್ಯ ಯುವ ಒಕ್ಕೂಟಕ್ಕೆ ನೇಮಕ
ಬಳ್ಳಾರಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಕ್ಕೆ ಬಳ್ಳಾರಿ ಜಿಲ್ಲಾ ಗೌರವ ಅಧ್ಯಕ್ಷರಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹೆಚ್. ಸಿ. ರಾಘವೇಂದ್ರ, ಅಧ್ಯಕ್ಷರಾಗಿ ಪಿ. ರಾಘವೇಂದ್ರ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಹನುಮಯ್ಯ ಯಾದವ ಅವರನ್ನು ನೇಮಕ ಮಾಡಲಾಗಿದೆ ಎಂದು ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅವರು ಕಲಬುರಗಿ ವಿಭಾಗೀಯ ಸಂಚಾಲಕರ ಶಿಫಾರಸ್ಸಿನಂತೆ ನೇಮಿಸಿ ಆದೇಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಯುವ ಸಂಘಗಳ ಪುನಶ್ಚೇತನಕ್ಕೆ ಹೊಸ ಮೈಲುಗಲ್ಲು ಸೃಷ್ಟಿಸುವ ಕಾರ್ಯ ನಡೆಯಲಿದೆ. ೨೦೦೮ ರಿಂದ ಯುವ ಸಂಘಗಳ ನೋಂದಣಿ ರದ್ದಾಗಿದ್ದು ಅವೆಲ್ಲವು ಜೀವ ಕಳೆದುಕೊಂಡಿವೆ, ಯುವಜನ ಮೇಳ ಮತ್ತು ಉತ್ಸವಗಳಲ್ಲಿ ಭಾಗವಹಿಸಲು ಸಹ ಸಂಘಗಳ ಸದಸ್ಯರಾಗುವದನ್ನು ಸಹ ತೆಗೆದು ಅವುಗಳಿಗೆ ಕೊಡುತ್ತಿದ್ದ ಆರ್ಥಿಕ ಸಹಾಯ ಎಲ್ಲವೂ ನಿಂತಿರುವದು ಸಮಾಜ ಸೇವೆ ಅನ್ನುವದು ಮೌಲ್ಯ ಕಳೆದುಕೊಂಡಿದೆ.
ಯುವ ಒಕ್ಕೂಟದಿಂದ ಕಲಬುರಗಿ ವಿಭಾಗ ಮಟ್ಟದಲ್ಲಿ ತಾಲೂಕ, ಜಿಲ್ಲೆ ಮತ್ತು ವಿಭಾಗೀಯ ಯುವಜನ ಸಾಂಸ್ಕೃತಿಕ ಮೇಳ, ಯುವ ಸಮಾವೇಶ, ಯುವ ಉದ್ಯೋಗ ಭರವಸೆ ತರಬೇತಿ, ಪ್ರತಿ ಗ್ರಾಮದಲ್ಲಿ ಯುವ ಸಂಘಗಳ ಮೂಲಕ ಯುವ ಸಮುದಾಯ ಭವನ, ನಿರಂತರ ಶ್ರಮದಾನ ಶಿಬಿರ, ಆರೋಗ್ಯ ಮೇಳ, ಯೋಗ, ಕರಾಟೆ ತರಬೇತಿ, ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸಲು ಸ್ಪಷ್ಟವಾದ ಯೋಜನೆ ರೂಪಿಸಲಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.
Comments are closed.