ಕಬ್ಬರಗಿ ಜಲಪಾತದಲ್ಲಿ ಸಂಭ್ರಮಿಸಿದ ಬಯ್ಯಾಪುರ
ಕೊಪ್ಪಳ : ಮಾಜಿ ಸಚಿವ ಡಿಸಿಸಿ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಕಬ್ಬರಗಿ ಜಲಪಾತದಲ್ಲಿ ಸ್ನಾನ ಮಾಡಿ
ಸಂಭ್ರಮಿಸಿದರು . ಕೊಪ್ಪಳ ಜಿಲ್ಲೆಯ ಏಕೈಕ ಜಲಪಾತವಾಗಿರುವ ಕಬ್ಬರ್ಗಿ ಜಲಪಾತ ಧುಮ್ಮಿಕಿ ಹರಿಯುತ್ತಿದೆ ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ತಮ್ಮ ಬೆಂಬಲಿಗರೊಂದಿಗೆ ಜಲಪಾತದ ನೀರಿಗೆ ಮೈ ಒಡ್ಡಿ ಸಂಭ್ರಮಿಸಿದರು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿರುವ ಕಬ್ಬರಗಿ ಜಲಪಾತ ಸುರಿಯುತ್ತಿರುವ ಮಳೆಗೆ ಧುಮ್ಮಿಕ್ಕಿ ಹರಿಯುತ್ತಿದೆ . ಕಳೆದ ಹಲವಾರು ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವಮಳೆಯ ಕಾರಣಕ್ಕೆ ಮೈದುಂಬಿ ಹರಿಯುತ್ತಿರುವ ಕಬ್ಬರಗಿ ಜಲಪಾತ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಮಾಲ್ತಿ ನಾಯಕ್ ಮಂಜುನಾಥ್ ಹುಲ್ಲೂರ್ ಚಂದ್ರು ನಾಲಕ್ಕು ವಾರ್ಡ್ ಮಹಾಂತೇಶ್ ಅಗಸಿನ ಮನಿ ಲಾಡ್ಲೇಮಶಾಕ್ ಸೋಮಶೇಖರ್ ಈಶಣ್ಣ , ಸೂಚಪ್ಪ ಮೇಲಿನಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು
Comments are closed.