ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ ಕ್ರೀಡಾಪಟುಗಳ ಅಮೋಘ ಸಾಧನೆ
ಗಂಗಾವತಿಯ ಫ್ಲೈಯಿಂಗ್ ಫೆದರ್ ಬ್ಯಾಡ್ಮಿಂಟನ್ ಅಕಾಡೆಮಿ
ಗಂಗಾವತಿ: ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯು ಇತ್ತೀಚೆಗೆ ಬಳ್ಳಾರಿಯ ಮೋಕಾ ರಸ್ತೆಯಲ್ಲಿರುವ ಎಂ.ಆರ್.ವಿ ಲೇಔಟ್‌ನ ಎಂ.ಆರ್.ವಿ ಬ್ಯಾಡ್ಮಿಂಟನ್ ಅರೆನಾದಲ್ಲಿ ಜರುಗಿತು. ಈ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ ನೂರಾರು ಕ್ರೀಡಾಪಟುಗಳು ಭಾಗವಹಿಸಿದ್ದರು.
ಈ ಪಂದ್ಯಾವಳಿಯಲ್ಲಿ ಗಂಗಾವತಿಯ ಫ್ಲೈಯಿಂಗ್ ಫೆದರ‍್ಸ್ ಬ್ಯಾಡ್ಮಿಂಟನ್ ಅಕಾಡೆಮಿಯ ಕ್ರೀಡಾಪಟು ಜೀವನ್ ರವರು ಜಂಬಲ್ಡ್ ಡಬಲ್ ವಿಭಾಗದಲ್ಲಿ ವಿಜೇತರಾಗಿದ್ದು, ೧೫ ವರ್ಷದೊಳಗಿನ ವಿಭಾಗದಲ್ಲಿ ಆಯುಷ್ ರನ್ನರ್ ಅಪ್ ಆಗುವ ಮೂಲಕ ಗಂಗಾವತಿಗೆ ಹೆಮ್ಮೆಯನ್ನು ತಂದಿರುತ್ತಾರೆ. ಎಂದು ಫ್ಲೈಯಿಂಗ್ ಫೆದರ‍್ಸ್ ಬ್ಯಾಡ್ಮಿಂಟನ್ ಅಕಾಡೆಮಿಯ ಅಧ್ಯಕ್ಷರಾದ ಡಾ|| ಸತೀಶ ರಾಯಕರ್ ಅವರು ಸದರಿ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿ, ಅವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ.
Comments are closed.