ಭಾಗ್ಯನಗರ ಪಟ್ಟಣ ಪಂಚಾಯತ್ ಕಾಂಗ್ರೆಸ್ ಮಡಿಲಿಗೆ

Get real time updates directly on you device, subscribe now.

 ಅಧ್ಯಕ್ಷರಾಗಿ ತುಕಾರಾಮಪ್ಪ ಗಡಾದ ಉಪಾಧ್ಯಕ್ಷರಾಗಿ ಹೊನ್ನುರಸಾಬ್ ಬೈರಾಪುರ ಆಯ್ಕೆ

ಭಾಗ್ಯನಗರ : ಸಾಕಷ್ಟು ಕುತೂಹಲ ಕೆರಳಿಸಿದ್ದ ಭಾಗ್ಯನಗರ ಪಟ್ಟಣ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ತುಕಾರಾಮಪ್ಪ ಗಡಾದ ಹಾಗೂ ಬಿಜೆಪಿಯಿಂದ ವಾಸುದೇವ್ ಮೇಘರಾಜ್ ನಾಮಪತ್ರ ಸಲ್ಲಿಸಿದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಹೊನ್ನೂರಸಾಬ್ ಬೈರಾಪುರ ಬಿಜೆಪಿಯಿಂದ ಪರಶುರಾಮ ನಾಯಕ್ ನಾಮಪತ್ರ ಸಲ್ಲಿಸಿದ್ದರು.
ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ತುಕಾರಾಮಪ್ಪ ಗಡಾದ 12 ಮತಗಳನ್ನು ಪಡೆದರೆ ಬಿಜೆಪಿಯ ವಾಸುದೇವ್ ಮೇಘರಾಜ್ 9 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನದ ಹೊನ್ನೂರಸಾಬ್ ಬೈರಾಪುರ 12 ಮತಗಳನ್ನು ಪಡೆದರೆ ಪರಶುರಾಮ್ ನಾಯಕ್ 9 ಮತಗಳನ್ನು ಪಡೆದರು ಕಾಂಗ್ರೆಸ್ನ ಎಂಟು ಸದಸ್ಯರು ಮತ್ತು ಶಾಸಕ ಹಾಗೂ ಸಂಸದರು ಜೊತೆಗೆ ಇಬ್ಬರು ಪಕ್ಷೇತರರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ. ಕೊಪ್ಪಳ ತಹಶೀಲ್ದಾರ್ ವಿಟ್ಟಲ್ ಚೌಗಲೆ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

 

ಕುಡಿಯೋ ನೀರು, ಆರೋಗ್ಯ, ನೈರ್ಮಲ್ಯ ಹಾಗೂ ಮೂಲಭೂತ ಸೌಲಭ್ಯಗಳು ನಮ್ಮ ಮೊದಲ ಆದ್ಯತೆಯಾಗಲಿವೆ ಎಂದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಹೇಳಿದ್ದಾರೆ ಭಾಗ್ಯನಗರ ಪಟ್ಟಣದ ಸರ್ವ ಮತದಾರರು ಹಾಗೂ ಸಂಸದರು ಹಾಗೂ ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಅವರು ಪಟ್ಟಣದಲ್ಲಿ ಹಲವಾರು ಕಡೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಜೊತೆಗೆ 24*7 ಕುಡಿಯುವ ನೀರಿನ ವ್ಯವಸ್ಥೆ ಮಾಡುವುದಕ್ಕಾಗಿ ವ್ಯವಸ್ಥೆ ಮಾಡಲಾಗುವುದು. ಜನತೆಯ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಹೆಚ್ಚಿನ ಮಟ್ಟದಲ್ಲಿ ಕೈಗೊಳ್ಳುವುದು ನಿವೇಶನ ರೈತರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚುನಾವಣೆ ನಡೆದು
ಎರಡು ವರ್ಷ ಎಂಟು ತಿಂಗಳ ಬಳಿಕ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿರುವುದು ವಿಶೇಷವಾಗಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: