ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆ: ಶಿಕ್ಷಕರಿಗಾಗಿ ಮನೋಯೋಗ ಶಿಬಿರ

Get real time updates directly on you device, subscribe now.

): ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಆಧ್ಯಾತ್ಮಿಕ ಪರಿಹಾರ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಆಗಸ್ಟ್ 21ರಂದು ಶಿಕ್ಷಕರಿಗಾಗಿ ಮನೋಯೋಗ ಶಿಬಿರ ಕಾರ್ಯಾಗಾರ ನೆಡೆಯಿತು.

 ಮನಸ್ಸಿನ ತರಬೇತುದಾರರು ಹಾಗೂ ಮಕ್ಕಳ ಚಿಕಿತ್ಸಾ ತಜ್ಞರಾದ ಡಾ.ವಿಶ್ವನಾಥ ಗುರುಜಿ ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ, ಯೋಗ ಎಂದರೆ ಕೇವಲ ಆಸನ ಪ್ರಾಣಾಯಾಮಗಳಲ್ಲ, ಮನಸ್ಸನ್ನು ನಿಯಂತ್ರಿಸುವುದೇ ನಿಜವಾದ ಯೋಗ. ಆದ್ದರಿಂದ, ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ದಿನ ನಿತ್ಯ ಮನೋಯೋಗಗಳನ್ನು ಮಾಡಿಸುವುದರ ಮೂಲಕ ಅವರಿಗೆ ಓದು ಬರಹದಲ್ಲಿ ಸಂಪೂರ್ಣವಾಗಿ ಏಕಾಗ್ರತೆಯನ್ನು ಬೆಳಸಬೇಕು. ಮಕ್ಕಳ ಮನಸ್ಸು ಮತ್ತು ಭಾವನೆಗಳನ್ನು ನಿರ್ವಹಿಸುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದ್ದು, ಎಲ್ಲಾ ಶಿಕ್ಷಕರು ಮನೋವಿಜ್ಞಾನ ಮತ್ತು ಭಾವನಾವಿಜ್ಞಾನದ ಬಗ್ಗೆ ಮಕ್ಕಳಿಗೆ ಅರ್ಥ ಮಾಡಿಸಬೇಕು. ದಿನ ನಿತ್ಯ ಮಕ್ಕಳಿಗೆ ಶಾಲೆಯಲ್ಲಿ ಮನೋಯೋಗ ಮಾಡಿಸುವುದರಿಂದ ಮಕ್ಕಳಲ್ಲಿ ಓದು ಬರಹದಲ್ಲಿ ಆಸಕ್ತಿ, ಗಮನ ಮತ್ತು ಏಕಾಗ್ರತೆ ಬೆಳೆಯುತ್ತಾ ಹೋಗುತ್ತದೆ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಬಳಿಕ ಡಾ.ವಿಶ್ವನಾಥ ಗುರುಜಿ ಅವರು ಕೆಲವು ಮನೋಯೋಗಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳ ಮನಸ್ಸು ಮತ್ತು ಏಕಾಗ್ರತೆಯನ್ನು ಹೇಗೆ ಹತೋಟಿಯಲ್ಲಿ ಇಡಬಹುದು ಎಂಬುದನ್ನು ಶಿಕ್ಷಕರಿಗೆ ತಿಳಿಸಿದರು. ಕೆಲವು ಸರಳ ಮನೋಯೋಗಗಳನ್ನು ಮಾಡುವುದರ ಮೂಲಕ ಮಕ್ಕಳನ್ನು ಓದು ಬರಹದ ಕಡೆ ಗಮನ ಹರಿಸುವಂತೆ ಹಾಗೂ ಮಕ್ಕಳು ಓದು ಬರದ ಬಗ್ಗೆ ಹೆಚ್ಚು ಒಲವು ತೋರುವಂತೆ ಅವರ ಮನಸ್ಸನ್ನು ಪರಿವರ್ತನೆ ಮಾಡಲು ಹಲವಾರು ಮನೋಯೋಗಗಳನ್ನು ಪ್ರಾತ್ಯಕ್ಷಿಕೆ ಮೂಲಕ ಶಿಕ್ಷಕರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾದ ಶ್ರೀಶೈಲ ಬಿರಾದಾರ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಲಕ್ಷ್ಮಿಕಾಂತ ಬಿ ನಾಲ್ವಾರ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: