ನಗರಸಭೆ ಅಧ್ಯಕ್ಷ ರಾಗಿ  ಅಮ್ಜದ್ ಪಟೇಲ್, ಉಪಾಧ್ಯಕ್ಷರಾಗಿ  ಅಶ್ವಿನಿ ಗದುಗಿನಮಠ ಆಯ್ಕೆ

Get real time updates directly on you device, subscribe now.

 

ಕೊಪ್ಪಳ  :  ಕೊಪ್ಪಳ ನಗರಸಭೆ 14 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ  ನಡೆದ ಚುನಾವಣೆಯಲ್ಲಿ  ಕೊಪ್ಪಳ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ, ಕಾಂಗ್ರೆಸ್ಸಿನ ಅಮ್ಜದ್ ಪಟೇಲ್   ಆಯ್ಕೆಗೊಂಡರೆ, ಉಪಾಧ್ಯಕ್ಷರಾಗಿ ಬಿಜೆಪಿಯ ಅಶ್ವಿನಿ ಗದುಗಿನಮಠ ಆಯ್ಕೆಯಾಗಿದ್ದಾರೆ.

 

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ಸಿನ ಅಮ್ಜದ್ ಪಟೇಲ್ ಹಾಗೂ ಬಿಜೆಪಿಯ ಸೋಮಣ್ಣ ಹಳ್ಳಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬಿಜೆಪಿ ಸದಸ್ಯೆ ಅಶ್ವಿನಿ ಗದುಗಿನಮಠ, ಬಿಜೆಪಿಯಿಂದ   ದೇವಮ್ಮ ಕಂದಾರಿ ನಾಮಪತ್ರ ಸಲ್ಲಿಸಿದ್ದರು.

 

ಕೊಪ್ಪಳ ನಗರಸಭೆಯ ಒಟ್ಟು 31 ವಾರ್ಡ್ ಗಳಲ್ಲಿ ಇಬ್ಬರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  29 ಸದಸ್ಯರಲ್ಲಿ 23 ಸದಸ್ಯರು ಹಾಗೂ ಶಾಸಕ ಸಂಸದರೂ ಮತ ಚಲಾಯಿಸಿದ್ದರಿಂದ  ಕಾಂಗ್ರೆಸ್ ಅಭ್ಯರ್ಥಿ ಅಮ್ಜದ್ ಪಟೇಲ್ ರಿಗೆ 25 ಮತಗಳು ಲಭಿಸಿದವು.  ಬಿಜೆಪಿಯ ಸೋಮಣ್ಣ ಹಳ್ಳಿಯ಻ವರಿಗೆ  ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕರ ಒಂದು ಮತ ಸೇರಿ 7 ಮತಗಳು  ಲಭಿಸಿದವು.  ಅದೇ ರೀತಿ ಉಪಾಧ್ಯಕ್ಷ ಸ್ಥಾನ ಕ್ಕೆ ಸ್ಪರ್ಧಿಸಿದ ಅಶ್ವಿನಿ ಗದುಗಿನ ಮಠ  ರವರಿಗೆ 25 ಮತ ಲಭಿಸಿದರೆ ಬಿಜೆಪಿಯಿಂದ ಉಪಾಧ್ಯಕ್ಷ ಸ್ಥಾನಕ್ಕೆಸ್ಪರ್ಧಿಸಿದ ದೇವಮ್ಮ ಕಂದಾರಿಯವರಿಗೆಗೆ 07 ಮತ ದೊರೆತಿವೆ

 

ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ   ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಘೋಷಣೆ ಮಾಡಿದರು ,

 

35 ವರ್ಷಗಳ ಬಳಿಕ ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಬ್ಬರಿಗೆ ನಗರಸಭೆ ಅಧ್ಯಕ್ಷ ಸ್ಥಾನ ದೊರೆತಿದೆ, ಆಯ್ಕೆಯ ನಂತರ  ಻ಮ್ಜದ ಪಟೇಲ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು

 

Get real time updates directly on you device, subscribe now.

Comments are closed.

error: Content is protected !!