ಬರಹಗಾರರಿಗೆ ಕಾವ್ಯಲೋಕದಿಂದ ವೇದಿಕೆ : ಐಗೋಳ

Get real time updates directly on you device, subscribe now.

ಕಾವ್ಯಲೋಕದ ೧೦೪ನೇ ಕವಿಗೊ೦೦ಷ್ಠಿ

ಗಂಗಾವತಿ : ಕಾವ್ಯಲೋಕ ಸಂಘಟನೆ ಬರಹಗಾರರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಈ ಮೂಲಕ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ ಎಂದು ಸಾಹಿತಿ, ನಿವೃತ್ತ ಪ್ರಾಂಶುಪಾಲ ಬಸವರಾಜ ಐಗೋಳ ಹೇಳಿದರು.
ಭಾನುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕಾವ್ಯಲೋಕ, ಕನ್ನಡ ಜಾಗೃತಿ ಸಮಿತಿ ಹಾಗೂ ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ದಿ ಸಂಘ ಸಾಹಿತಿ ಹನಮಂತಪ್ಪ ಅಂಡಗಿ ಸ್ಮರಣಾರ್ಥ ಆಯೋಜಿಸಿದ್ದ ೧೦೪ನೇ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಕಾವ್ಯಲೋಕ ಸಂಘಟನೆಯು ೧೦೪ನೇ ಕವಿಗೋಷ್ಠಿ ಆಯೋಜಿಸುತ್ತಿರುವುದು ಸಾಮಾನ್ಯದ ಮಾತಲ್ಲ. ಕಾವ್ಯದ ಕೆಲಸ ಮಾಡಲು ತೊಂದರೆ ಎದುರಾದರೂ ಮೆಟ್ಟಿ ನಿಂತು ವೇದಿಕೆ ಸೃಷ್ಠಿ ಮಾಡುತ್ತಿರುವುದರಿಂದ ಬರಹಗಾರರು ಸಾಮರ್ಥ್ಯ ಹೆಚ್ಚಿಸಕೊಂಡಿದ್ದಾರೆ ಎಂದು ತಿಳಿಸಿದರು.
ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಕೊಪ್ಪಳದ ಸಾಹಿತಿ ಅರುಣಾ ನರೇಂದ್ರ ಮಾತನಾಡಿ, ಕಾವ್ಯವೆಂದರೆ ಸ್ವ್ವಗತ, ಹೃದಯದ ಜೊತೆ ಸಂವಾದ ನಡೆಸುವುದು. ಈ ಮೂಲಕ ಸಮುದಾಯಕ್ಕೆ ತೆರೆದುಕೊಳ್ಳುವುದು. ಗಂಗಾವತಿ ತಾಲೂಕು ಸಾಹಿತ್ಯಕವಾಗಿ ಹೆಸರು ಮಾಡಿದ್ದು ಇದು ಅತ್ಯಂತ ಹೆಮ್ಮೆಯ ವಿಷಯ. ಕಾವ್ಯಲೋಕ ವೇದಿಕೆ ಕಲ್ಪಿಸಿದ್ದರಿಂದ ಬರಹಗಾರರು ಬೆಳಕಿಗೆ ಬಂದಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಇಂಗಳಗಿ ಮಾತನಾಡಿ, ಜಾನಪದ, ಭಕ್ತಿಗೀತೆ, ಭಾವಗೀತೆ, ಪ್ರಬಂಧ ಸ್ಪರ್ಧೆಗಳನ್ನು ಸಂಘಟಿಸಿ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಇದೇ ಸಮಯದಲ್ಲಿ ಕವಯತ್ರಿ ಮಂಜುಳಾ ಶ್ಯಾವಿ ಅವರ ’ಬಾಗಿಲ ಬಾಯಲೋಳು’ ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಯು.ಆರ್.ಶಿವರುದ್ರಪ್ಪ, ಭೀಮನಗೌಡ, ಗೋಪಿನಾಥ ದಿನ್ನಿ, ತಾರಾ ಸಂತೋಷ, ಎಂ.ಎಸ್.ನಾರಾಯಣ, ನರ್ಮದಾಬಾಯಿ ಕುಲಕರ್ಣಿ, ಅವನಿ ಮೋಥಾ, ವಿರುಪಣ್ಣ ಢಣಾಪುರ, ಹುಸೇನಸಾಬ ಗುಂಡೂರು, ಕಲಾ ಮಾನ್ವಿ, ಶಾಮೀದ ಲಾಠಿ, ಬಸವರಾಜ ಹೇರೂರು, ಅಬ್ದುಲ್ ವಹಾಬ್ ಮುಲ್ಲ, ಶರಣಪ್ಪ ವಿದ್ಯಾನಗರ, ಶಕುಂತಲಾ ನಾಯಕ, ವಿಜಯಲಕ್ಷ್ಮಿ ಕಲಾಲ್, ಶೋಭಾಗೌಡರ, ರೇಣುಕಾ ಮರಕುಂಬಿ, ಮೈಲಾರಪ್ಪ ಬೂದಿಹಾಳ, ಮಹ್ಮದಮೀಯಾ, ನೀಲಮ್ಮ ಹಿರೇಮಠ, ಕೃಷ್ಣಸಿಂಗ್, ನಾಗರತ್ನ, ಮಂಜುಳಾ ಶ್ಯಾವಿ ಸೇರಿದಂತೆ ಮತ್ತಿತರರು ಕವನ ವಾಚಿಸಿದರು.
ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಅವರು ಹನುಮಂತಪ್ಪ ಅಂಗಡಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಮಾಜ ಸೇವಕ ಮಂಜುನಾಥ ಕಲಾಲ, ಸರಕಾರಿ ಭೂ ಮಾಪಕ ಚನ್ನಬಸವಯ್ಯ ಪಾಲ್ಗೊಂಡಿದ್ದರು. ಅರಳಹಳ್ಳಿಯ ಶರಣ ಬಸವ ದೇವರು ಸಾನಿಧ್ಯ ವಹಿಸಿದ್ದರು. ಕಾವ್ಯಲೋಕ ಗೌರವ ಅಧ್ಯಕ್ಷ ಡಾ.ಶಿವಕುಮಾರ ಮಾಲಿಪಾಟೀಲ್, ಅಧ್ಯಕ್ಷ ಎಂ.ಪರಶುರಾಮ ಪ್ರಿಂi, ಕೃಷ್ಣ ಆಶಿಷ ಉಪಸ್ಥಿತರಿದ್ದರು. ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ ನಿರ್ವಹಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: