ದ್ರಾವಿಡ ರಕ್ಷಣಾ ವೇದಿಕೆ ಶೀಘ್ರದಲ್ಲಿ ಪ್ರಾರಂಭ-ಭಾರಧ್ವಾಜ್
ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ದ್ರಾವಿಡ ರಕ್ಷಣಾ ವೇದಿಕೆಯನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಅದರ ಪೂರ್ವಭಾವಿ ಸಭೆಯನ್ನು ದಿ ೧೭.೦೭.೨೦೨೩ ಸೋಮವಾರ ಕರೆಯಲಾಗಿದೆ ಎಂದು ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಿನ ಪೀಳಿಗೆ ಜನರಿಗೆ ನಾವು ಮೂಲ ದ್ರಾವಿಡರು ಎಂಬುವುದು ಗೊತ್ತಿಲ್ಲ. ಅದರಿಂದಾಗಿ ಅವರುಗಳು ಸನಾತನ ಆರ್ಯ ಸಂಘಟನೆಗಳ ಜೊತೆಗೆ ಹೋಗಿ ದ್ರಾವಿಡರ ಮೇಲೆಯೇ ದಾಳಿ ಮಾಡುತ್ತಿದ್ದಾರೆ. ದ್ರಾವಿಡರ ಬಗ್ಗೆ ಮೂಲ ದ್ರಾವಿಡರಿಗೆ ತಿಳಿಸಿ, ದ್ರಾವಿಡ ರಕ್ಷಣಾ ಸಂಘಟನೆಯನ್ನು ಗಟ್ಟಿಗೊಳಿಸುವುದು ನಮ್ಮ ಉದ್ದೇಶವಾಗಿದೆ. ಇದರ ಅಂಗವಾಗಿ ದಿನಾಂಕ: ೧೭.೦೭.೨೦೨೩ ರಂದು ಬೆಳಿಗ್ಗೆ ೧೧:೦೦ ಗಂಟೆಗೆ ರಾಯಚೂರು ರಸ್ತೆಯ ಆಟೋನಗರದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಭಾರಧ್ವಾಜ್ ತಿಳಿಸಿದ್ದಾರೆ.
Comments are closed.