ಕೊಪ್ಪಳ ನಗರಸಭೆ ಅಧ್ಯಕ್ಷ,ಉಪಾಧ್ಯಕ್ಷರ ಚುನಾವಣೆ : BJPಯ ನಗರಸಭಾ ಸದಸ್ಯರಿಗೆ ವಿಪ್ ಜಾರಿ
Koppal 21 ರಂದು ಕೊಪ್ಪಳದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯುವ ಸಂಬಂಧಪಟ್ಟಂತೆ ಸೋಮವಾರ ದಿವಸ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದಂತ ಸಭೆಯಲ್ಲಿ ಬಿಜೆಪಿ ನಗರಸಭೆ ಸದಸ್ಯರ ಅಭಿಪ್ರಾಯ ಪಡೆದು ಜಿಲ್ಲಾಧ್ಯಕ್ಷರು ನವೀನ್ ಕುಮಾರ್ ಗುಳಗಣ್ಣವರು, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ ಬಸವರಾಜ ಕ್ಯಾವಟರ್,ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್.ಚಂದ್ರಶೇಖರ ಕವಲೂರು,ಅಪ್ಪಣ್ಣ ಪದಕಿ, ನೀಲಕಂಠಯ್ಯ ಹಿರೇಮಠ, ನಗರ ಅಧ್ಯಕ್ಷ ರಮೇಶ್ ಕವಲೂರು . ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಹೆಸರೂರ,ಮಹೇಶ್ ಅಂಗಡಿ,ಪುಟ್ಟರಾಜ ಚಕ್ಕಿ,ದೇವರಾಜ್ ಹಾಲ ಸಮುದ್ರ, ಬಿಜೆಪಿ ಮುಖಂಡರು ಪದಾಧಿಕಾರಿಗಳು ಸಭೆಯಲ್ಲಿ ಮಾತನಾಡಿ ಅಂತಿಮವಾಗಿ
ನಗರಸಭಾ ಅಧ್ಯಕ್ಷರಾಗಿ ಸೋಮಣ್ಣ ಹಳ್ಳಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ದೇವಕ್ಕ ಲಕ್ಷ್ಮಣ್ಣ ಕಂದಾರಿ ರನ್ನು ಚುನಾವಣೆಗೆ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ
ಮತ್ತು ಭಾರತೀಯ ಜನತಾ ಪಾರ್ಟಿಯ ನಗರಸಭಾ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ
Comments are closed.