ಗಮನ ಸೆಳೆದ ಸಸ್ಯಸಂತೆ, ತೋಟಗಾರಿಕೆ ಅಭಿಯಾನ
ಒಂದೇ ಸೂರಿನಡಿ ಸಸಿ-ಕಸಿಗಳ ಬೃಹತ್ ಪ್ರದರ್ಶನ, ಮಾರಾಟ ಮೇಳ
—
: ಕೊಪ್ಪಳ ತೋಟಗಾರಿಕೆ ಇಲಾಖೆಯಿಂದ ಕೊಪ್ಪಳ ನಗರದಲ್ಲಿ ಆಗಸ್ಟ್ 15ರಿಂದ ಆ.20ರ ವರೆಗೆ 6 ದಿನಗಳ ಕಾಲ ಹಮ್ಮಿಕೊಳ್ಳಲಾದ “ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2024” ಕಾರ್ಯಕ್ರಮವು ಸಾರ್ವಜನಿಕರ ಗಮನ ಸೆಳೆಯುವಂತಿದೆ.
78ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ತೋಟಗಾರಿಕೆ ಪಿತಾಮಹ ಡಾ ಎಮ್.ಎಚ್.ಮರೀಗೌಡ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದ ತೋಟಗಾರಿಕೆ ಉಪನಿರ್ದೇಶಕರ ಕಛೇರಿ (ಜಿಪಂ) ಕೊಪ್ಪಳ ಆವರಣದಲ್ಲಿ ರೈತರಿಗಾಗಿ ಹಾಗೂ ಸಾರ್ವಜನಿಕರಾಗಿ ಏರ್ಪಡಿಸಲಾದ ಈ ವಿನೂತನ ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಗುರುವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ರಾಜಶೇಖರ ಹಿಟ್ನಾಳ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಹೇಮಲತಾ ನಾಯಕ, ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ರಾಮ್ ಎಲ್ ಅರಸಿದ್ದಿ, ಕೊಪ್ಪಳದ ತೋಟಗಾರಿಕೆ ಉಪ ನಿರ್ದೇಶಕರಾದ ಕೃಷ್ಣ ಸಿ ಉಕ್ಕುಂದ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಜೆ.ಶಂಕರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನದ ಮುಖ್ಯ ಉದ್ದೇಶಗಳು: ಈ ಸಸ್ಯಸಂತೆ ಕಾರ್ಯಕ್ರಮದಲ್ಲಿ ರೈತರಿಗಾಗಿ ವಿದೇಶಿ ಹಣ್ಣಿನ ಸಸಿಗಳನ್ನು ಪರಿಚಯಿಸುವುದು ಮತ್ತು ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ಈ ಸಸ್ಯಸಂತೆಯಲ್ಲಿ 77ಕ್ಕೂ ಹೆಚ್ಚಿನ ವಿದೇಶಿ ಹಣ್ಣಿನ ಸಸಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಅವುಗಳಲ್ಲಿ ಮುಖ್ಯವಾಗಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ಹಣ್ಣಿನ ಗಿಡ, ಅವಕಾಡೋ, ಮೆಕಡೋಮಿಯಾ, ಲಿಚ್ಚಿ, ರಾಮಭೂತಾನ, ಡ್ಯುರಿಯನ್, ಫ್ಲಮ್, ಕೆಂಪು ನಿಂಬೆ, ಮಲಬರಿ, ಸ್ವೀಟ್ ಚರ‍್ರಿ, ಬ್ಲೂö್ಯಬೇರಿ, ಮ್ಯಾಂಗೋಸ್ಟೀನ್, ಸ್ಟಾರ್ ಫ್ರೂಟ್, ಮಿರಾಕಲ್ ಫ್ರೂಟ್, ಕೆಂಪು ಪೇರಲ ಹಾಗೂ ಮುಂತಾದ ವಿದೇಶಿ ಹಣ್ಣಿನ ಸಸಿಗಳ ಗಿಡಗಳು ಲಭ್ಯವಿರುತ್ತವೆ.
ತೋಟಗಾರಿಕೆ ಇಲಾಖಾ ಸಸ್ಯಾಗಾರದಲ್ಲಿ ಉತ್ಪಾದಿಸಿದ ಹಣ್ಣು, ತರಕಾರಿ, ಪುಷ್ಪ ಅಲ್ಲದೇ ಅಲಂಕಾರಿಕ ಗಿಡಗಳು ಮತ್ತು ಪುಸ್ಪ ಸಸ್ಯಗಳು ಪ್ರದರ್ಶನ ಮತ್ತು ಇಲಾಖಾ ದರದಲ್ಲಿ ಮಾರಾಟ ವ್ಯವಸ್ಥೆಯನ್ನು ಕಲ್ಪಿಸಿಲಾಗಿದೆ. ಈ ಕಾರ್ಯಕ್ರಮದಲ್ಲಿ ಬಣ್ಣ ಬಣ್ಣದ ವಿವಿಧ ಮಾದರಿಯ ಅಳತೆಯ ಕುಂಡಲುಗಳು ಸಹ ಮಾರಾಟಕ್ಕೆ ಇದ್ದು ಜೊತೆಗೆ ಎರೆಹುಳು ಗೊಬ್ಬರ ಕುಂಡಲಿನಲ್ಲಿ ನೇರವಾಗಿ ಗಿಡ ನಾಟಿ ಮಾಡಲು ಮಣ್ಣು ಮತ್ತು ಗೊಬ್ಬರದ ಮಿಶ್ರಣ ಸಿಗುತ್ತದೆ ಹಾಗೂ ನಿಮಾಸ್ತç, ಬ್ರಹ್ಮಾಸ್ತç, ಗೋಕೃಪಾಮೃತ ಸಹ ಸಿಗುತ್ತವೆ.
ಈ ಅಭಿಯಾನದಲ್ಲಿ ತೋಟಗಾರಿಕೆ ಇಲಾಖೆ ಕೊಪ್ಪಳ ಜಿಲ್ಲೆಯಲ್ಲಿರುವ 9 ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ತೋಟಗಾರಿಕೆ ಸಸಿ, ಕಸಿಗಳು ಲಭ್ಯವಿರುತ್ತವೆ. ವಿಶೇಷವಾಗಿ ಜಗತ್ತಿನ ದುಬಾರಿ ಮಾವಿನ ತಳಿ ಮಿಯಾಜಾಕಿಯ ಸಸಿಗಳನ್ನು ಜೊತೆಗೆ ಹೊಸ ತಳಿಗಳಾದ ಮೆಕಡೋಮಿಯಾ ಜಗತ್ತಿನ ದುಬಾರಿ ಬೀಜ (Costilest Nut) ಸಸಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ ಹಾಗೂ ಹೊಸ ಹೊಸ ಹಣ್ಣಿನ, ಹೂವಿನ, ತರಕಾರಿ ಸಸಿಗಳನ್ನು ಯೋಗ್ಯ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ.
15 ಕ್ಕೂ ಹೆಚ್ಚಿನ ಪ್ರಧಾನ ಮತ್ತು ಅಪ್ರಧಾನ ಹಣ್ಣುಗಳ 100 ಕ್ಕೂ ಹೆಚ್ಚಿನ ಅಲಂಕಾರಿಕ ವಿವಿಧ ತಳಿಗಳ ಸಸಿ, ಕಸಿಗಳ ಸಸ್ಯಗಳು ಇಲಾಖಾ ದರದಲ್ಲಿ ಲಭ್ಯವಿರುತ್ತವೆ. ಅಲ್ಲದೇ ವಿಶೇಷ ಹಣ್ಣಿನ ಬೆಳೆಗಳಾದ ವಾಟರ್ ಆಪಲ್, ಲಿಚ್ಚಿ, ಬೀಜ ರಹಿತ ಲಿಂಬೆ, ರಾಮ್‌ಫಲ, ಲಕ್ಷö್ಮಣ್‌ಫಲ, ಹಲಸು ಇತ್ಯಾದಿ ಲಭ್ಯವಿವೆ.
ತರಕಾರಿ ಬೆಳೆಗಳಾದ ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ನುಗ್ಗೆ, ಕರಿಬೇವು, ಕುಂಬಳ ಜಾತಿಯ ತರಕಾರಿ ಬೆಳೆಗಳ ವಿವಿಧ ಹೈಬ್ರಿಡ ಸಸಿಗಳನ್ನು ಪಾಲಿಮನೆಯಲ್ಲಿ ಉತ್ಪಾದಿಸಿದ್ದು 5 ಲಕ್ಷಕ್ಕೂ ಹೆಚ್ಚಿನ ಸಸಿಗಳು ನೇರ ನಾಟಿ ಮಾಡಲು ಲಭ್ಯವಿವೆ. ಪುಷ್ಪ ಬೆಳೆಗಳಾದ ವಿವಿಧ ಬಣ್ಣದ ಗುಲಾಬಿ ಮತ್ತು ದಾಸವಾಳ ಗಿಡಗಳು, ಮಲ್ಲಿಗೆ, ಪಾರಿಜಾತ, ಕನಕಾಂಬರ, ಮುಂತಾದ ಬಹುವಾರ್ಷಿಕ ಬೆಳೆಗಳಲ್ಲದೇ ಅಲ್ಪಾವಧಿ ಬೆಳೆಗಳಾದ ಚೆಂಡು ಹೂ, ಗಡ್ಡೆ ಬೆಳೆಗಳಾದ ಸುಗಂಧರಾಜ ಮತ್ತು ದಾಲಿಯಾದಂತಹ ಗಡ್ಡೆ ಹೂ ಗಳು ಲಭ್ಯವಿರುತ್ತವೆ.
ಇದಲ್ಲದೇ ಕುಂಡಲಗಳಲ್ಲಿ ಬೆಳೆಬಹುದಾದ ಪೆಟೊನಿಯಾ, ಅಡಕೆ ಹೂ, ದೇಹಲಿಯಾ ಅಲ್ಲದೇ ಸಂಪಿಗೆ ದಾಸವಾಳಗಳಂತಹ ಹೂವಿನ ಬೆಳೆಗಳ 100 ಕ್ಕೂ ಹೆಚ್ಚಿನ ಅಲಂಕಾರಿಕ ಹೂವಿನ ಸಸ್ಯಗಳು ಲಭ್ಯವಿದೆ. ಔಷಧಿ ಸಸ್ಯಗಳಾದ ತುಳಸಿ, ವಿಂಕಾರೋಸಿ ಎನ್ಸಿಸ್, ರೋಸ್ ಮೇರಿ ಅಲ್ಲದೇ ಸಾಂಪ್ರಾದಾಯಕ ಸಸ್ಯಗಳಾದ ಅಶೋಕ, ಕದಂಬ, ಸಿಂಗಾಪೂರ ಚರ‍್ರಿ, ಗುಲ್ ಮೋರ್ ಇತ್ಯಾದಿ ಮಾರಾಟಕ್ಕಿಡಲಾಗಿದೆ.
ವಿವಿಧ ಮಾದರಿ ಕೈತೋಟ, ತಾರಸಿ ತೋಟದ ವಿನ್ಯಾಸಗಳಾದ ವರ್ಟಿಕಲ್ ಗಾರ್ಡನ್, ಹೈಡ್ರೋಪೊನಿಕ್ಸ್, ಬೊನ್ಸಾಯಿ ಕಲ್ಚರ್, ಸೊಕ್ಯುಲೇಂಟ್ಸ್, ರಾಕ್ ಗಾರ್ಡನ್ ಮಾದರಿ ಅಲ್ಲದೇ ಅಂತಹ ಸಸಿಗಳು ಮತ್ತು ಸೊಪ್ಪಿನ ತರಕಾರಿ ಸಸಿಗಳು ಅಸಂಖ್ಯಾತ ಸಂಖ್ಯೆಯಲ್ಲಿ ಲಭ್ಯವಿರುತ್ತವೆ. ಹುಲ್ಲಿನ ಹಾಸಿಗೆ (ಲಾನ್) ಬೆಳೆಸಲು ರಿಬ್ಬನ್ ಗ್ರಾಸ್, ಬರ್ಮೊಡಾ ಗ್ರಾಸ್ ಲಭ್ಯವಿದ್ದು ಇದರ ಬಗ್ಗೆ ಮಾದರಿಗಳು ಮತ್ತು ಪ್ರಾತ್ಯಾಕ್ಷಿಕೆಗಳ ಮೂಲಕ ರೈತರಿಗೆ ಮತ್ತು ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡಲು ಅಧಿಕಾರಿಗಳು, ತಜ್ಞರು ಲಭ್ಯರಿದ್ದಾರೆ.
ಈ ಅಭಿಯಾನದಲ್ಲಿ ರೈತರಷ್ಟೆ ಅಲ್ಲದೇ ಸಾರ್ವಜನಿಕ ಆಸಕ್ತಿ, ಅಭಿರುಚಿಗೆ ತಕ್ಕಂತೆ ಎಲ್ಲಾ ಸಸಿ-ಕಸಿಗಳು ಲಭ್ಯವಿದ್ದು, ರೈತರು ಮತ್ತು ಗ್ರಾಹಕರು ಈ ಅಭಿಯಾನ, ಸಸ್ಯಸಂತೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಇಲ್ಲಿಗೆ ಬಂದ ರೈತರು, ಗ್ರಾಹಕರು ಖಾಲಿ ಕೈಯಲ್ಲಿ ಹೋಗುವಂತೆಯೇ ಇಲ್ಲಾ. ಇದು ತೋಟಗಾರಿಕೆಯಲ್ಲಿ ಆಸಕ್ತಿ ಅಭಿರುಚಿ ಇರುವ ಎಲ್ಲಾ ವರ್ಗದ ನಾಗರೀಕರಿಗೆ ಒಂದೇ ಸೂರಿನಡಿ ದೊರೆಯಬಲ್ಲ ಸಸಿ-ಕಸಿಗಳು ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವಾಗಿದೆ.
ತೋಟಗಾರಿಕೆಯಲ್ಲಿ ನವೀನ ತಾಂತ್ರಿಕತೆಗಳಾದ ಯಾಂತ್ರೀಕರಣ, ಹನಿ ನೀರಾವರಿ, ಮಳೆ ನೀರು ಕೊಯ್ಲು, ಬಗ್ಗೆಯೂ ಮಾಹಿತಿ ಹಾಗೂ ಪ್ರಾತ್ಯಾಕ್ಷಿಕೆಗಳನ್ನು ಆಯೋಜಿಸಲಾಗಿದೆ. ಇಸ್ರೇಲ್ ಕೃಷಿ ಮಾದರಿ ಖುಷ್ಕಿ ತೋಟಗಾರಿಕೆ ಬಗ್ಗೆಯೂ ಪ್ರಾತ್ಯಕ್ಷಿಕೆ ಹಾಗೂ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಸಾವಯವ ತೋಟಗಾರಿಕೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ. ವಿವಿಧ ಹಣ್ಣಿಗಳು, ತರಕಾರಿ. ಔಷಧೀ ಬೆಳೆಗಳ ಬಗ್ಗೆ ಮಾಹಿತಿ ಲಭ್ಯವಿದ್ದು ಚಿಕ್ಕ ಮಕ್ಕಳು ಮಹಿಳೆಯರು ತೋಟಗಾರಿಕೆಯಲ್ಲಿ ಆಸಕ್ತಿ ಮೂಡಿಸುವ ವಿವಿಧ ಪ್ರಾತ್ಯಾಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ರೈತರಿಗೆ ತಾವು ಬೆಳೆದ ಬೆಳೆ ಬಗ್ಗೆ ಕಾರ್ಬನ್ ಕ್ರೆಡಿಟ್ ಬಗ್ಗೆ ಹಾಗೂ ಸಾವಯವ ದೃಢೀಕರಣ ಕುರಿತು ಸಹ ಮಾಹಿತಿ ನೀಡಲಾಗುತ್ತಿದೆ. ವಿವಿಧ ಕಂಪನಿಯ ಡ್ರೋನ್ ಸಹ ಇಡಲಾಗಿದ್ದು, ಡ್ರೋನ್ ಬಗ್ಗೆ ಮಾಹಿತಿಯನ್ನು ಸಹ ನೀಡಲಾಗುತ್ತಿದೆ ಹಾಗೂ ಮಣ್ಣು, ನೀರು ಪರೀಕ್ಷೆ ಮತ್ತು ಎಲೆ ವಿಶ್ಲೇಷಣಾ ಕುರಿತು ಈ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ.
ಅಣಬೆ ಬೆಳೆಯುವ ಮತ್ತು ಜೇನು ಸಾಕಾಣಿಕೆಗೆ ಆಸಕ್ತ ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ, ತೋಟಗಾರಿಕೆಯಲ್ಲಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಇಂದಿನ ಅವಶ್ಯಕವಾಗಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಸಮಗ್ರ ಮಾಹಿತಿ ಲಭ್ಯವಿದೆ. ಒಂದು ಜಿಲ್ಲೆ ಒಂದು ಬೆಳೆ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಇದರ ಜೊತೆಗೆ ಬೆಳೆ ವಿಮೆ, ಬ್ಯಾಂಕಿನಿಂದ ತೋಟಗಾರಿಕೆ ಆರಂಭಿಸಲು ಸಾಲ ಪಡೆಯುವ ಬಗ್ಗೆ ವಿವಿಧ ಬ್ಯಾಂಕಿನಿಂದ ಅಧಿಕಾರಿಗಳು ಆಗಮಿಸಿ ಮಾಹಿತಿ ನೀಡುವ ಕಾರ್ಯಕ್ರಮವನ್ನ ಸಹ ಆಯೋಜಿಸಿದೆ.
ಒಟ್ಟಾರೆ 6 ದಿನಗಳ ಈ ತೋಟಗಾರಿಕೆ ಅಭಿಯಾನವು ರೈತರಿಗೆ, ಸಾರ್ವಜನಿಕರಿಗೆ ಗ್ರಾಹಕರಿಗೆ ಮಹಿಳೆಯರು ಹಾಗೂ ಮಕ್ಕಳಿಗೂ ಸಹ ಆಸಕ್ತಿ ಮೂಡಿಸಬಹುದಾಗಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಗೊಳಿಸಬೇಕೆಂದು ಕೊಪ್ಪಳ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
****

Comments are closed.