೭೮ನೇ ಸ್ವಾತಂತ್ರ್ಯ ದಿನಾಚರಣೆ : ಸಚಿವ ಶಿವರಾಜ್ ತಂಗಡಗಿ ಭಾಷಣದ ಹೈಲೈಟ್
೭೮ನೇ ಸ್ವಾತಂತ್ರö್ಯ ದಿನಾಚರಣೆ
78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ
ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ
ಗೌರವ್ ವಂದನೆ ಸ್ವೀಕರಿಸಿ ಸಂಚಲನ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವರು
ಪೊಲೀಸ್ ಹೋಂ ಗಾರ್ಡ್ ಸ್ಕೌಟ್ಟ್ ಗೈಡ್ , ವಿದ್ಯಾರ್ಥಿಗಳ ೧೯ ತಂಡಗಳಿಂದ ಪಥಸಂಚಲನ
ವಿದ್ಯಾರ್ಥಿಗಳಿಂದ ಸಾರ್ವಜನಿಕರಿಂದ ತುಂಬಿರುವ ಕ್ರೀಡಾಂಗಣ
ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಜಿಲ್ಲಾಧಿಕಾರಿ ನಳಿನತುಲ್ ಸಿ ಇ ಓ ರಾಹುಲ್ ರತ್ನಮ್ ಪಾಂಡೆ, ಎಸ್ ಪಿ ರಾಮ್ ಅರಸಿದ್ದಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಗಣ್ಯರುಭಾಗಿ
ಯ ಅಂಗವಾಗಿ ಶಿವರಾಜ ಎಸ್.ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ
ಎಲ್ಲರಿಗೂ ನಮಸ್ಕಾರಗಳು.
ಮಹತ್ವದ ಈ ರಾಷ್ಟಿçÃಯ ಹಬ್ಬದ ಆಚರಣೆಗಾಗಿ ಇಲ್ಲಿ ಸೇರಿರುವ ಎಲ್ಲರಿಗೂ ಸ್ವಾತಂತ್ರೊö್ಯÃತ್ಸವದ ಶುಭಾಶಯಗಳು. ನಮಗೆಲ್ಲರಿಗೂ ಸಂತಸ ನೀಡುವ ಈ ಕಾರ್ಯಕ್ರಮದಲ್ಲಿ ಸೇರಿರುವ ಮುದ್ದು ಮಕ್ಕಳೆ.. ಪಾಲಕರೇ.. ನಾಗರಿಕರೇ.. ಮಾನ್ಯ ಸಂಸದರೆ.. ಶಾಸಕರೇ.. ಜನಪ್ರತಿನಿಧಿಗಳೇ.. ಅಧಿಕಾರಿ ಹಾಗೂ ನೌಕರ ವರ್ಗದವರೇ.. ರೈತ, ಕಾರ್ಮಿಕ ಬಂಧುಗಳೇ.. ಸಹೋದರ-ಸಹೋದರಿಯರೆ.. ಹಾಗೂ ಮಾಧ್ಯಮ ಮಿತ್ರರೆ…….
ನಮ್ಮ ದೇಶಕ್ಕೆ ಸ್ವಾತಂತ್ರö್ಯ ಸಿಕ್ಕ ಸಂಭ್ರಮದ ದಿನವಿದು. ಹೀಗಾಗಿ ಪ್ರತಿ ವರ್ಷ ನಾವು ಆಗಸ್ಟ್ ೧೫ರಂದು ರಾಷ್ಟಿçÃಯ ಹಬ್ಬವನ್ನಾಗಿ ಆಚರಿಸುತ್ತೇವೆ.
ನಮ್ಮ ದೇಶದ ಸ್ವಾತಂತ್ರö್ಯದ ಹೋರಾಟಗಾಥೆಯು ಸ್ಮರಣೀಯವಾಗಿದೆ. ಜವಾಹರಲಾಲ್ ನೆಹರು ಅವರು ೧೯೪೭ ಆಗಸ್ಟ್ ೧೪ರ ಮಧ್ಯರಾತ್ರಿ ಭಾರತೀಯ ರಾಜ್ಯಾಂಗದ ಕುರಿತು ಮಾಡಿದ ಭಾಷಣವನ್ನು ನಾವು ಮತ್ತೆ ಮತ್ತೆ ಸ್ಮರಿಸಬೇಕಿದೆ. ಸ್ವಾತಂತ್ರö್ಯವು ಭವಿಷ್ಯದೊಂದಿಗೆ ಅನುಸಂಧಾನ.. ನಾವು ಹೊಸ ಹಾದಿ ತುಳಿಯುತ್ತಿದ್ದೇವೆ. ಎಂದು ಆ ವೇಳೆ ನೆಹರೂ ಅವರು ಹೇಳಿದರು. ಆ ಘಳಿಗೆಯಿಂದ ಭಾರತಿಯರಲ್ಲಿ ಹೊಸ ಕನಸು ಹೊಸ ಭರವಸೆ ಚಿಗುರಿತು.
ಭಾರತದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಮಹನಿಯರು ಪ್ರತಿಯೊಬ್ಬ ಭಾರತೀಯರ ಮನದಲ್ಲೂ ಅಮರರಾಗಿ ಉಳಿದಿದ್ದಾರೆ. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ. ಜಾತಿ, ಧರ್ಮ, ಭೇದ-ಭಾವ ಹೊಂದದೆ ಎಲ್ಲರೂ ಸಮಾನರಾಗಿ ಶಾಂತಿಯಿAದ ಬಾಳೋಣ. ದೇಶಪ್ರೇಮ ಬೆಳೆಸಿಕೊಳ್ಳಲು ಪ್ರೇರಣೆಯಾದ ಈ ದಿನದಂದು ಸಮತಾ ಸಮಾಜ ಕಟ್ಟಲು ಸಂಕಲ್ಪ ಮಾಡೋಣ.
ಸ್ವಾತಂತ್ರö್ಯ ಹೋರಾಟದಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಹೋರಾಟಗಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸ್ವಾತಂತ್ರö್ಯ ಚಳುವಳಿಯಲ್ಲಿ ಭಾಗಿಯಾದ ಕೊಪ್ಪಳ ಜಿಲ್ಲೆಯ ಮುಂಡರಗಿ ಭೀಮರಾಯರು, ಹಮ್ಮಿಗೆ ಕೆಂಚನಗೌಡರು, ಇಟಗಿಯ ವೀರಭದ್ರಯ್ಯನವರು, ಶಿರೂರು ವೀರಭದ್ರಪ್ಪನವರು, ಶಿವಮೂರ್ತಿಸ್ವಾಮಿ ಅಳವಂಡಿಯವರು, ಜನಾರ್ಧನರಾಯ ದೇಸಾಯಿಯವರು, ಎಲ್.ಕೆ.ಷರಾಫ್‌ರವರು, ಬಿಂದು ಮಾಧವರಾವ್ ಅವರು, ಬಿ.ಕೆ. ಪ್ರಾಣೇಶಾಚಾರ್ಯರು, ಮುರಡಿ ಭೀಮಜ್ಜ ಮೊದಲಾದ ಧೀಮಂತರುಗಳು ಹೊಂದಿದ್ದ ದೇಶಪ್ರೇಮದ ಗುಣವು ನಮಗೆಲ್ಲ ಸ್ಪೂರ್ತಿಯಾಗಿದೆ. ಅವರ ಸೇವಾಗುಣವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಕಳೆದ ೧೪ ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಪಂಚ ಗ್ಯಾರಂಟಿ ಯೋಜನೆಯಡಿ ಸೌಲಭ್ಯಗಳನ್ನು ಒದಗಿಸಿದ್ದು, ಮಹಿಳೆಯರು, ಪಡಿತರ ಚೀಟಿದಾರರು, ಯುವಕರು ಸೇರಿದಂತೆ ರಾಜ್ಯದ ಜನತೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ರಾಜ್ಯ ಸರ್ಕಾರವು ಕಳೆದ ಮೇ-೨೦೨೩ ರಲ್ಲಿ ಅಸ್ವಿತ್ವಕ್ಕೆ ಬಂದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ೫೨,೦೦೦ ಕೋಟಿ ರೂ.ಮೊತ್ತ ಮೀಸಲಿಡಲಾಗಿದೆ.
ಗ್ಯಾರಂಟಿ ಯೋಜನೆಗಳು
ಜೆಸ್ಕಾಂ
ಕೊಪ್ಪಳ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿಯಲ್ಲಿ ೨೦೨೩ರ ಜುಲೈ ೧ ರಿಂದ ಜುಲೈ ೩೧, ೨೦೨೪ ರವರೆಗೆ ಕೊಪ್ಪಳ ಜೆಸ್ಕಾಂ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು ೧,೩೮,೭೩೨ ಅರ್ಹ ಗ್ರಾಹಕರಲ್ಲಿ ೧,೩೩,೬೦೧ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಗಂಗಾವತಿ ಜೆಸ್ಕಾಂ ವಿಭಾಗ ವ್ಯಾಪ್ತಿಯಲ್ಲಿ ೧,೪೪,೯೮೧ ಅರ್ಹ ಗ್ರಾಹಕರಲ್ಲಿ ೧,೩೯,೫೭೪ ಗ್ರಾಹಕರು ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಒಟ್ಟು ೨,೮೩,೭೧೩ ಅರ್ಹ ಗ್ರಾಹಕರಲ್ಲಿ ೨,೭೩,೧೭೫ ಗ್ರಾಹಕರು (ಶೇ.೯೬.೨೯) ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಯೋಜನೆ ಸದುಪಯೋಗ ಪಡೆದುಕೊಂಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ನಲ್ಲಿ ನಮೂದಿಸಿರುವಂತೆ ಕುಟುಂಬದ ಅರ್ಹ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ೨,೦೦೦ ರೂ. ಆರ್ಥಿಕ ಸೌಲಭ್ಯ ನೀಡುವ ಗೃಹಲಕ್ಷಿö್ಮÃ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ಲಕ್ಷಾಂತರ ಮಹಿಳೆಯರಿಗೆ ಅನುಕೂಲವಾಗುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೩,೩೧,೩೬೫ ಅರ್ಹ ಫಲಾನುಭವಿಗಳಿದ್ದು, ಜುಲೈ-೨೦೨೪ ರ ಅಂತ್ಯಕ್ಕೆ ೩,೨೦,೧೫೦ ಫಲಾನುಭವಿಗಳು ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಈವರೆಗೆ ೩,೦೮,೫೧೦ ಫಲಾನುಭವಿಗಳು ಮಾಹೆಯಾನ ರೂ.೨೦೦೦ ರಂತೆ ಧನಸಹಾಯ ಪಡೆದಿದ್ದು, ಆಗಸ್ಟ್ ೨೦೨೩ ರಿಂದ ಮೇ-೨೦೨೪ ರವರೆಗೆ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ೫೭೮.೦೮ ಕೋಟಿಗಳ ಧನಸಹಾಯ ಪಾವತಿ ಮಾಡಲಾಗಿದೆ. ಜೂನ್ ಮತ್ತು ಜುಲೈ-೨೦೨೪ ಮಾಹೆಗಳ ಧನಸಹಾಯ ಪಾವತಿಯು ಪ್ರಕ್ರಿಯೆ ಹಂತದಲ್ಲಿದೆ.
ಆಹಾರ ಇಲಾಖೆ
ಕೊಪ್ಪಳ ಜಿಲ್ಲೆಯಲ್ಲಿ ಅಂತ್ಯೋದಯ ೩೭,೩೭೭, ಬಿಪಿಎಲ್ ೨,೮೯,೭೪೧ ಸೇರಿದಂತೆ ಒಟ್ಟು ೩,೨೭,೧೧೮ ಪಡಿತರ ಚೀಟಿಗಳು ಇದ್ದು, ಈ ಪೈಕಿ ೧೧,೭೮,೦೧೮ ಸದಸ್ಯರಿಗೆ ಸರ್ಕಾರದ ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆಯಂತೆ ಪ್ರತಿ ಸದಸ್ಯರಿಗೆ ೫ ಕೆ.ಜಿ. ಆಹಾರಧಾನ್ಯವನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿಯಾಗಿ ನೀಡುವ ೫ ಕೆ.ಜಿ ಅಕ್ಕಿ ಬದಲಿಗೆ ಪ್ರತಿ ಸದಸ್ಯರಿಗೆ ೧೭೦/- ರೂ. ನೀಡಲು ಘೋಷಿಸಿದಂತೆ ನೇರ ನಗದು ವರ್ಗಾವಣೆ ಮೂಲಕ (ಡಿ.ಬಿ.ಟಿ) ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಈ ಯೋಜನೆಯು ಜುಲೈ-೨೦೨೩ ರಿಂದ ಜಾರಿಯಲ್ಲಿದ್ದು ಈವರೆಗೆ ಕೊಪ್ಪಳ ಜಿಲ್ಲೆಯಲ್ಲಿ ೨೦೯.೭೧ ಕೋಟಿ ರೂ. ಗಳನ್ನು ಈ ಯೋಜನೆಯಲ್ಲಿ ಕಾರ್ಡುದಾರರಿಗೆ ವಿತರಿಸಲಾಗಿದೆ.
ಭತ್ತ, ಬಿಳಿಜೋಳ, ಎಣ್ಣೆಕಾಳುಗಳನ್ನು ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ರೈತರಿಂದ ಖರೀದಿಸಲು ಸರ್ಕಾರವು ಅನುಮೋದನೆ ನೀಡಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಭತ್ತ ಮತ್ತು ಬಿಳಿಜೋಳ ಖರೀದಿ ಕೆಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ. ೩,೯೭೦.೫೦ ಕ್ವಿಂಟಲ್ ಜೋಳವನ್ನು ಕೊಪ್ಪಳ ಜಿಲ್ಲೆಯಲ್ಲಿ ಖರೀದಿಸಲಾಗಿದೆ.
ಯುವನಿಧಿ ಯೋಜನೆ
೨೦೨೪ ರ ಜನವರಿ ೧೨ ರಂದು ಮಾನ್ಯ ಮುಖ್ಯಮಂತ್ರಿಗಳಿAದ ವಿದ್ಯುಕ್ತವಾಗಿ ಯುವ ನಿಧಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿಯಲ್ಲಿ ಪದವೀಧರರಿಗೆ ಪ್ರತಿ ಮಾಹೆ ರೂ.೩,೦೦೦/- ಮತ್ತು ಡಿಪ್ಲೋಮಾ ಹೊಂದಿರುವವರಿಗೆ ರೂ.೧,೫೦೦/- ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತಿದ್ದು, ದಿನಾಂಕ: ೨೬.೧೨.೨೦೨೩ ರಿಂದ ಆಗಸ್ಟ್ ೦೫,೨೦೨೪ ರವರೆಗೆ ಸೇವಾಸಿಂಧು ಪೋರ್ಟಲ್ ಮೂಲಕ ಒಟ್ಟು ೪,೯೨೦ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಇಲ್ಲಿಯವರೆಗೆ ೩,೮೧೯ ಫಲಾನುಭವಿಗಳಿಗೆ ರೂ.೧,೧೪,೨೨,೫೦೦/- ಗಳ ನಿರುದ್ಯೋಗ ಭತ್ಯೆಯನ್ನು ಪಾವತಿ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಸಾರಿಗೆ ಅಭಿವೃದ್ಧಿ ನಿಗಮ
ಕೊಪ್ಪಳ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ ೨೦೨೪ ರ ಜೂನ್ ೧೧ ರಂದು ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಹಿಳಾ ಉಚಿತ ಪ್ರಯಾಣ ಯೋಜನೆ ಅನುಷ್ಠಾನಕ್ಕೆ ಬಂದಿತು. ೨೦೨೩ ರ ಜೂನ್ ೧೧ರಿಂದ ಜುಲೈ ೨೦೨೪ ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು ೪೪೨.೩೯ ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.
೨) ಕೃಷಿ ಇಲಾಖೆ
ಈ ವರ್ಷ ಜಿಲ್ಲೆಯಲ್ಲಿ ಶೇ.೨೦ ರಷ್ಟು ಅಧಿಕ ಮಳೆ ಆಗಿದೆ. ಮುಂಗಾರು ಹಂಗಾಮಿನಲ್ಲಿ ೨.೯೨ ಲಕ್ಷ ಹೆಕ್ಟರ್‌ನಲ್ಲಿ ಬಿತ್ತನೆಯಾಗಿದ್ದು, ಕಾಲುವೆಗೆ ನೀರು ಬಿಡಲಾಗಿದ್ದು ಭತ್ತದ ನಾಟಿಯು ಚುರುಕುಗೊಂಡಿದೆ.
ಜಿಲ್ಲೆಯಲ್ಲಿ ೮,೦೯೮ ಕ್ವಿಂಟಲ್ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ೧,೭೯೬ ಕ್ವಿಂಟಲ್ ದಾಸ್ತಾನಿದ್ದು, ಬಿತ್ತನೆ ಬೀಜಕ್ಕೆ ಯಾವುದೇ ತರಹದ ಕೊರತೆ ಇರುವುದಿಲ್ಲ.
ಮುಂಗಾರು ಹಂಗಾಮಿನ ಜಿಲ್ಲೆಯ ರಸಗೊಬ್ಬರ ಬೇಡಿಕೆ (ಏಪ್ರಿಲ್ ರಿಂದ ಆಗಸ್ಟ್) ೧.೦೮ ಲಕ್ಷ ಟನ್ ಇದ್ದು, ೧.೦೭ ಲಕ್ಷ ಟನ್ ದಾಸ್ತಾನು ಮಾಡಲಾಗಿದ್ದು, ೦.೫೨ ಲಕ್ಷ ಟನ್ ಮಾರಾಟವಾಗಿರುತ್ತದೆ. ಇನ್ನೂ ೦.೫೫ ಲಕ್ಷ ಟನ್ ರಸಗೊಬ್ಬರ ದಾಸ್ತಾನಿದ್ದು, ಜಿಲ್ಲೆಯಲ್ಲಿ ರಸಗೊಬ್ಬರದ ಯಾವುದೇ ತರಹದ ಕೊರತೆ ಇರುವುದಿಲ್ಲ.
ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಬರ ಘೋಷಿಸಿದ ಪ್ರಯುಕ್ತ ಬೆಳೆ ಪರಿಹಾರವಾಗಿ ೧,೦೫,೦೨೪ ಜನ ರೈತರಿಗೆ ರೂ. ೧೦೯.೦೮/- ಕೋಟಿ ಪರಿಹಾರಧನವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.
ಕಳೆದ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಜೀವನೋಪಾಯ ಪರಿಹಾರವಾಗಿ ಕೊಪ್ಪಳ ಜಿಲ್ಲೆಯಿಂದ ೫೧,೬೪೫ ಜನ ಸಣ್ಣ ಮತ್ತು ಅತೀ ಸಣ್ಣ ರೈತ ಕುಟುಂಬಗಳಿಗೆ ರೂ. ೧೪.೮೦/- ಕೋಟಿ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.
೨೦೨೩-೨೪ ನೇ ಸಾಲಿನಲ್ಲಿ ಒಟ್ಟು ಹಿಂಗಾರು ಮತ್ತು ಮುಂಗಾರು ಹಂಗಾಮಿನಲ್ಲಿ ೭೫,೫೧೯ ಫಲಾನುಭವಿಗಳಿಗೆ ರೂ. ೮೪.೧೪/- ಕೋಟಿ ಬೆಳೆವಿಮೆ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.
ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾರ್ಚ-೨೦೨೪ರ ಮಾಹೆಯ ಅಂತ್ಯಕ್ಕೆ ೨೬೪೯೦೩ ದಿನಗಳನ್ನು ಸೃಜಿಸಲಾಗಿದೆ. ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳ ೩೬೭೩ ಎಕರೆ ಹೆ. ಪ್ರದೇಶ ವಿಸ್ತರಣೆ ಮಾಡಲಾಗಿದೆ.
ಕರ್ನಾಟಕ ಸರ್ಕಾರದಿಂದ ೨೦೨೦-೨೧ನೇ ಸಾಲಿನ ಬಜೆಟ್ ನಲ್ಲಿ ಅನುಮೋದನೆಗೊಂಡಿರುವ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಸಿರಿವಾರ ಗ್ರಾಮದಲ್ಲಿ ೨೦೦ ಎಕರೆ ಪ್ರದೇಶದಲ್ಲಿ ಹೊಸದಾಗಿ ಅನುಷ್ಟಾನಗೊಳಿಸಲಾಗುತ್ತಿರುವ ತೋಟಗಾರಿಕೆ ತಂತ್ರಜ್ಞಾನ ಪಾರ್ಕನ ಪ್ರಸ್ತುತ ವಿಸ್ತçೃತ ಯೋಜನಾ ವರದಿಯನ್ನು ಸಲ್ಲಿಸಲಾಗಿದ್ದು, ಆರ್ಥಿಕ ಬಿಡ್ ಕರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ರೈತರಿಗೆ ತೋಟಗಾರಿಕೆ ತಂತ್ರಜ್ಞಾನ ಪಾರ್ಕ ಒಂದು ವರದಾನವಾಗಲಿದೆ.
೩) ಸಮಾಜ ಕಲ್ಯಾಣ ಇಲಾಖೆ
ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ೩೩ ಮೆಟ್ರಿಕ್ ಪೂರ್ವ, ೧೮ ಮೆಟ್ರಿಕ್ ನಂತರ, ೧೫ ಕ್ರೆöÊಸ್ತ್ ವಸತಿ ಶಾಲೆಗಳು, ೦೧ ಆಶ್ರಮ ವಸತಿ ಶಾಲೆಯಲ್ಲಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ೦೭ ಮೆಟ್ರಿಕ್ ಪೂರ್ವ, ೦೭ ಮೆಟ್ರಿಕ್ ನಂತರ, ೦೮ ಕ್ರೆöÊಸ್ತ್ ವಸತಿ ಶಾಲೆಗಳು, ೦೨ ಆಶ್ರಮ ವಸತಿ ಶಾಲೆಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಭೋಜನ, ಸಮವಸ್ತç, ಪಠ್ಯಪುಸ್ತಕ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
೪) ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
೨೦೨೪-೨೫ನೇ ಸಾಲಿನಲ್ಲಿ ಹೊಸದಾಗಿ ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ೨೫೦ ಸಂಖ್ಯಾಬಲದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಾರಂಭಿಸಲಾಗಿದೆ. ಹೊಸದಾಗಿ ೧೦೦ ಸಂಖ್ಯಾಬಲದೊAದಿಗೆ ಕೊಪ್ಪಳ ನಗರದಲ್ಲಿ ೦೨ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ೦೧ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಹಾಗೂ ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದಲ್ಲಿ ೦೧ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಒಟ್ಟು ೦೪ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಪ್ರಾರಂಭಿಸಲಾಗಿದೆ. ಕೊಪ್ಪಳ ಮತ್ತು ಗಂಗಾವತಿ ನಗರದಲ್ಲಿ ೦೨ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆಗಳನ್ನು ಪಿಯುಸಿ ಕಾಲೇಜುಗಳನ್ನಾಗಿ ಉನ್ನತೀಕರಿಸಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಗಳನ್ನು ಪ್ರಾರಂಭಿಸಲಾಗಿರುತ್ತದೆ.
೫) ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ೫೧ ಸ್ವಂತ ಕಟ್ಟಡಗಳನ್ನು ಹೊಂದಿದ್ದು, ೬ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪ್ರಸ್ತುತ ಸಾಲಿಗಾಗಿ ೮ ನಿಲಯಗಳಿಗೆ ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಅನುಮೋದನೆಗಾಗಿ ಕ್ರಮವಹಿಸಲಾಗಿದೆ. ಮತ್ತು ಇನ್ನು ೨ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ೭ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ, (೪) ವಸತಿ ಶಾಲೆಗಳು ಸ್ವಂತ ಕಟ್ಟಡದಲ್ಲಿ ನಿರ್ವಹಣೆಯಾಗುತ್ತಲಿದ್ದು, (೩)ಕಟ್ಟಡ ಕಾಮಗಾರಿ ಪ್ರಾರಂಭಿಸಲು ಸರಕಾರದಿಂದ ಅನುಮೋದನೆ ನೀಡುವುದು ಬಾಕಿ ಇರುತ್ತದೆ.
ಪ್ರಸ್ತುತ ಸಾಲಿಗಾಗಿ ಜಿಲ್ಲೆಗೆ ೫ ಬಾಲಕರ ೫ ಬಾಲಕಿಯರ ಒಟ್ಟು ೧೦ ಮೆಟ್ರಿಕ್ ನಂತರ ನಿಲಯಗಳು, ಮತ್ತು ಕನಕಗಿರಿ ಪಟ್ಟಣಕ್ಕೆ ಹೊಸದಾಗಿ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಮಂಜೂರಾಗಿದ್ದು, ಸದರಿ ಶಾಲೆಗಳನ್ನು ಪ್ರಸ್ತುತ ಸಾಲಿನಿಂದ ಪ್ರಾರಂಭಿಸಲಾಗುವುದು.
ಅಲೆಮಾರಿ/ಅರೆಅಲೆಮಾರಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ರೂ.೪೩.೧೯ ಲಕ್ಷಗಳನ್ನು ೧೨೪೨ ವಿದ್ಯಾರ್ಥಿಗಳಿಗೆ ನೇರವಾಗಿ ಡಿ.ಬಿ.ಟಿ. ಮುಖಾಂತರ ಹಣ ಪಾವತಿಸಲಾಗಿದೆ.
ಮೆಟ್ರಿಕ್ ನಂತರ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಕಾರ್ಯಕ್ರಮಕ್ಕೆ ರೂ.೭೪೮.೦೦ ಲಕ್ಷಗಳನ್ನು ೧೦೦೮೮ ವಿದ್ಯಾರ್ಥಿಗಳಿಗೆ ನೇರವಾಗಿ ಡಿ.ಬಿ.ಟಿ. ಮುಖಾಂತರ ಹಣ ಪಾವತಿಸಲಾಗಿದೆ.
೬) ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ :
ರಾಷ್ಟಿçÃಯ ಗುಣಮಟ್ಟ ಖಾತ್ರಿ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆಸ್ಪತ್ರೆ, ಉಪ-ವಿಭಾಗ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಗಿಣಿಗೇರಾ, ದೋಟಿಹಾಳ, ಚಳಗೇರಾ, ಹಿಟ್ನಾಳ, ಬೂದುಗುಂಪಾ, ಸಮುದಾಯ ಆರೋಗ್ಯ ಕೇಂದ್ರಗಳಾದ ಕಾರಟಗಿ, ಹಿರೇಸಿಂಧೋಗಿ, ಶ್ರೀರಾಮನಗರ ಮತ್ತು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾದ ಮರಳಿ, ಹಿರೇನಂದಿಹಾಳ ಸೇರಿದಂತೆ ಒಟ್ಟು ೧೨ ಆರೋಗ್ಯ ಸಂಸ್ಥೆಗಳು ರಾಷ್ಟçಮಟ್ಟದಲ್ಲಿ ಪ್ರಮಾಣೀಕೃತಗೊಂಡಿರುತ್ತವೆ.
ರಾಷ್ಟಿçÃಯ ಗುಣಮಟ್ಟ ಖಾತ್ರಿ ಕಾರ್ಯಕ್ರಮದಡಿಯಲ್ಲಿ ೨೦೨೪-೨೫ ನೇ ಸಾಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಬೂದಗುಂಪಾ, ಹಿಟ್ನಾಳ, ಇರಕಲ್‌ಗಡಾ, ಸಿದ್ದಾಪುರ, ಬನ್ನಿಕೊಪ್ಪ, ಸಮುದಾಯ ಆರೋಗ್ಯ ಕೇಂದ್ರಗಳಾದ ಶ್ರೀರಾಮನಗರ, ಹಿರೇಸಿಂಧೋಗಿ, ಮುನಿರಾಬಾದ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಪ್ಪಳ ಹಾಗೂ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಾದ ಹೀರೆನಂದಿಹಾಳ, ಚಳ್ಳೂರು, ಮುದ್ದಲಗುಂಡಿ, ಜಂಗಮರಕಲ್ಗುಡಿ, ಹಣವಾಳ, ಮೇಣೆದಾಳ ಸೇರಿದಂತೆ ಒಟ್ಟು ೧೫ ಆರೋಗ್ಯ ಸಂಸ್ಥೆಗಳು ರಾಜ್ಯಮಟ್ಟದಿಂದ ೧೫ ಪ್ರಮಾಣೀಕೃತಗೊಂಡಿರುತ್ತವೆ.
ಲಕ್ಷö್ಯ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ, ಉಪ-ವಿಭಾಗ ಆಸ್ಪತ್ರೆ, ಗಂಗಾವತಿ, ಸಮುದಾಯ ಆರೋಗ್ಯ ಕೇಂದ್ರ ಕಾರಟಗಿ ಆರೋಗ್ಯ ಸಂಸ್ಥೆಗಳು ರಾಷ್ಟçಮಟ್ಟದಲ್ಲಿ ಪ್ರಮಾಣೀಕೃತಗೊಂಡಿರುತ್ತವೆ.
೨೦೨೪-೨೫ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಚಿಕ್ಕ ಮ್ಯಾಗೇರಿ, ಬಂಡಿ ಹಾಗೂ ಕುಕನೂರು ತಾಲ್ಲೂಕಿನ ಬಳಗೇರಿ ಗ್ರಾಮಗಳಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರವು ಮಂಜೂರಾತಿ ಆದೇಶವನ್ನು ನೀಡಿರುತ್ತದೆ ಹಾಗೂ ಕನಕಗಿರಿ ತಾಲ್ಲೂಕಿನ ಜೀರಾಳ ಮತ್ತು ಗೌರೀಪುರದಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವ ಸಂಬAಧ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿರುತ್ತದೆ.
೬(i) ಜಿಲ್ಲಾ ಆಯುಷ್ ಇಲಾಖೆ
೨೦೨೩-೨೪ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ರೂ.೫೩ ಲಕ್ಷ ವೆಚ್ಚದಲ್ಲಿ ಜಿಲ್ಲಾ ಆಯುಷ್ ಕಚೇರಿ ಕಟ್ಟಡ ನಿರ್ಮಾಣ ಹಾಗೂ ಗಂಗಾವತಿ ತಾಲ್ಲೂಕಿನ ಆಗೋಲಿಯಲ್ಲಿ ರೂ.೫೦ ಲಕ್ಷ ವೆಚ್ಚದಲ್ಲಿ ಸರ್ಕಾರಿ ಆಯುರ್ವೇದಿಕ್ ಡಿಸ್ಪೆನ್ಸರಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದೆ.
೨೦೨೩-೨೪ ನೇ ಸಾಲಿನಲ್ಲಿ ಒಟ್ಟು ರೂ.೨೬ ಲಕ್ಷಗಳ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಗಳನ್ನು ಜಿಲ್ಲೆಯ ೦೪ ಆಯುರ್ವೇದ ಆಸ್ಪತ್ರೆಗಳು ಹಾಗೂ ೧೫ ಡಿಸ್ಪೆನ್ಸರಿಗಳ ಮೂಲಕ ರೋಗಿಗಳಿಗೆ ಉಚಿತವಾಗಿ ವಿತರಿಸಲಾಗಿದೆ.
೭) ಪ್ರವಾಸೋದ್ಯಮ ಇಲಾಖೆ
ಶ್ರೀ ಆಂಜನೇಯ ಸ್ವಾಮಿ ಜನ್ಮಸ್ಥಳವೆಂದು ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ೧೦೦ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ೬೦೦ ಕೊಠಡಿಗಳ ಪ್ರವಾಸಿ ಮಂದಿರ, ಊಟದ ಹಾಲ್ ಮತ್ತು ಅಡುಗೆಯ ಮನೆ, ಸಮುದಾಯ ಭವನ, ವಾಹನ ನಿಲುಗಡೆಯ ಸ್ಥಳ, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಸಾರ್ವಜನಿಕ ಶೌಚಾಲಯ, ದೇವಸ್ಥಾನ ಪ್ರವೇಶಕ್ಕೆ ಖಾಲಿ ಜಾಗ, ಪ್ರದಕ್ಷಣಾ ಪಥ, ಸ್ನಾನಘಟ್ಟ, ವಿಐಪಿ ಅತಿಥಿ ಗೃಹ, ಸಿಬ್ಬಂದಿ ವಸತಿ ಗೃಹಗಳು (೨೦ ಮನೆಗಳು), ವ್ಯಾಖ್ಯಾನ ಕೇಂದ್ರ ಮತ್ತು ೩೦ ಮೀಟರ್ ರಸ್ತೆ ವಿಸ್ತರಣೆ-೨.೧ ಕಿಮೀ. ಬಿಟಿ ರಸ್ತೆಯ ಕಾಮಗಾರಿಗಳನ್ನು ಪ್ರವಾಸಿಗರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯ ಒಳಗೊಂಡAತೆ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಯೋಜನೆ ಕಾಮಗಾರಿಯನ್ನು ಪ್ರಾರಂಭಿಸಲು ದಿನಾಂಕ ೧೯.೦೮.೨೦೨೨ ರ ಸರ್ಕಾರದ ಆದೇಶದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ (ಕೆ.ಟಿ.ಐ.ಎಲ್) ಬೆಂಗಳೂರು ಅವರಿಂದ ಈಗಾಗಲೇ ೨೧ ಕೋಟಿ ಕಾಮಗಾರಿಗಳ ಕೆಲಸ ಆರಂಭವಾಗಿದೆ.
೨೦೨೩-೨೪ನೇ ಸಾಲಿನ ಮಾರ್ಚ ಮಾಹೆಯಲ್ಲಿ ಜಿಲ್ಲೆಯಲ್ಲಿನ ಐತಿಹಾಸಿಕ ಕ್ಷೇತ್ರಗಳಾದ ಕನಕಗಿರಿ ಮತ್ತು ಆನೆಗೊಂದಿ ಪ್ರದೇಶಗಳಲ್ಲಿ ಘತ ವೈಭವವನ್ನು ಮರುಕಳಿಸುವಂತೆ ವಿಜೃಂಭಣೆಯಿAದ ಉತ್ಸವಗಳನ್ನು ಆಚರಣೆ ಮಾಡಲಾಗಿರುತ್ತದೆ.
ಮಾನ್ಯ ಮುಖ್ಯಮಂತ್ರಿಗಳು ದಿನಾಂಕ:೦೨-೦೩-೨೦೨೪ ಮತ್ತು ೦೩-೦೩-೨೦೨೪ರಂದು ಜರುಗಿದ ಕನಕಗಿರಿ ಉತ್ಸವ-೨೦೨೪ರ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಃಡಿಚಿಟಿಜ ಏoಠಿಠಿಚಿಟ ಟogo ವನ್ನು ಅನಾವರಣಗೊಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ರೂ.೦೨ ಕೋಟಿಗಳ ಅನುದಾನದಲ್ಲಿ ಜಿಲ್ಲೆಯ ಸಂಪೂರ್ಣ ಪ್ರವಾಸೋದ್ಯಮದ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
೮) ಜಿಲ್ಲಾ ಪಂಚಾಯತಿ
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ೨೦೨೪-೨೫ ನೇ ಸಾಲಿಗೆ ೮೨ ಲಕ್ಷ ಮಾನವ ದಿನಗಳ ಸೃಜನೆಯ ಗುರಿಯಿದ್ದು, ಆಗಸ್ಟ್ ೦೬ ರಂತೆ ೫೪.೯೯ ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.೬೭ ರಷ್ಟು ಪ್ರಗತಿ ಸಾಧಿಸಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಒಟ್ಟು ೭೨೨ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಅವುಗಳ ಪೈಕಿ ಈಗಾಗಲೇ ೬೪೬ ಕಾಮಗಾರಿಗಳು ಪೂರ್ಣಗೊಂಡಿದ್ದು, ೭೬ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಕೊಪ್ಪಳ ಜಿಲ್ಲೆಯಲ್ಲಿ ೧೬ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳ ಪೈಕಿ ೧೩ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಇನ್ನುಳಿದಂತೆ ೪೦೩ ಕೋಟಿ ಅಂದಾಜು ಮೊತ್ತದ ೦೩ ಹೊಸ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಾದ ೧) ಕೆರೆಹಳ್ಳಿ ಮತ್ತು ಇತರೆ ೧೦೩ ಡಿ.ಬಿ.ಓ.ಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ೨) ಚಿಕ್ಕ ಬೆಣಕಲ್ ಮತ್ತು ಇತರೆ ೬೧ ಗ್ರಾಮಗಳ ಡಿ.ಬಿ.ಓ.ಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಪ್ರಗತಿಯಲ್ಲಿರುತ್ತವೆ.
ಮುಂದುವರೆದು ಜೀರಾಳ ಮತ್ತು ಇತರೆ ೧೭ ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟೆಂಡರ್ ಪ್ರಕ್ರಿಯೆ, ಸರ್ವೆ ಕಾರ್ಯ ಪೂರ್ಣಗೊಂಡಿರುವುದರಿAದ ಸದರಿ ಯೋಜನೆಯ ವಿನ್ಯಾಸ (ಆesigಟಿ) ವನ್ನು ಎಸ್.ಟಿ.ಎ ಸಮಿತಿಯ ಅನುಮೋದನೆಗಾಗಿ ಸಲ್ಲಿಸಲಾಗಿದೆ.
೨೦೨೩-೨೪ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಗೆ ೦೯ ಕಾಮಗಾರಿಗಳು ಮಂಜೂರಾಗಿರುತ್ತವೆ. ಅದರಲ್ಲಿ ೦೧ ಕಾಮಗಾರಿ ಪೂರ್ಣಗೊಂಡಿದ್ದು, ೦೭ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ, ೨೦೨೩-೨೪ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು ೫೦೦೦ ವೈಯಕ್ತಿಕ ಶೌಚಾಲಯಗಳ ನಿರ್ಮಾಣದ ಗುರಿ ಹೊಂದಿದ್ದು, ಅದರಲ್ಲಿ ಈಗಾಗಲೇ ೩೯೮೮ ವೈಯಕ್ತಿಕ ಗೃಹ ಶೌಚಾಲಯಗಳು ಪೂರ್ಣಗೊಂಡಿರುತ್ತವೆ. ಬಾಕಿ ಉಳಿದ ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ.
೯) ಜಿಲ್ಲಾ ನಗರಾಭಿವೃದ್ಧಿ ಕೋಶ
ಕೊಪ್ಪಳ ಜಿಲ್ಲೆಯ ೭-ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಅಮೃತ ೨.೦ ಯೋಜನೆಯಡಿಯಲ್ಲಿ ೧) ಕೊಪ್ಪಳ-ಭಾಗ್ಯನಗರ ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.೧೩೯.೯೪ ಕೋಟಿ ೨) ಯಲಬುರ್ಗಾ-ಕುಕನೂರು ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.೨೪೨.೨೩ ಕೋಟಿ. ೩) ಕನಕಗಿರಿ-ಕಾರಟಗಿ ಸಂಯುಕ್ತ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.೧೯೫.೭೯ ಕೋಟಿ ಹಾಗೂ ೪) ಕುಷ್ಟಗಿ ಕುಡಿಯವ ನೀರಿನ ಯೋಜನೆಯ ಕಾಮಗಾರಿ ಮೊತ್ತ ರೂ.೨೮.೦೦ ಕೋಟಿ ಗಳಿಗೆ ಗುತ್ತಿಗೆದಾರರಿಗೆ ಕಾಮಗಾರಿ ಆದೇಶಗಳನ್ನು ನೀಡಲಾಗಿರುತ್ತದೆ.
ಕೊಪ್ಪಳ ನಗರದ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಅಂದಾಜು ಮೊತ್ತ ರೂ.೩೦.೦೦ ಕೋಟಿಗಳಿಗೆ ಗಂಗಾವತಿ ನಗರದ ವ್ಯಾಪ್ತಿಯಲ್ಲಿ ಅಂದಾಜು ಮೊತ್ತ ರೂ.೭೭.೪೮ ಕೋಟಿಗಳಿಗೆ ಯೋಜನೆ ರೂಪಿಸಲಾಗಿದ್ದು, ಈ ಸಂಬAಧ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಇನ್ನುಳಿದ ೭-ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲೂ ಸಹ ಯೋಜನೆ ರೂಪಿಸಲು ಡಿಪಿಆರ್ ತಯಾರಿಸುವ ಹಂತದಲ್ಲಿರುತ್ತದೆ.
ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ (ಹಂತ-೪) ರಡಿ ಜಿಲ್ಲೆಯಾದ್ಯಂತ ವೈಯಕ್ತಿಕ ಮತ್ತು ಸಮುದಾಯ ಕಾರ್ಯಕ್ರಮ ಆಧಾರಿತ ಮೊತ್ತ ರೂ.೧೦೫.೦೦ ಕೋಟಿಗಳ ೧೧೩-ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ.
೧೦) ಕಾರ್ಮಿಕ ಇಲಾಖೆ
ಕಾರ್ಮಿಕ ಇಲಾಖೆಯಲ್ಲಿ ಒಟ್ಟು ೨,೦೨,೧೯೮ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿಯಾಗಿದ್ದು, ನೋಂದಾಯಿತ ಕಟ್ಟಡ ಕಾರ್ಮಿಕರಿಗಾಗಿ ವಿವಿಧ ಸೌಲಭ್ಯಗಳಾದ ಮದುವೆ ಧನ ಸಹಾಯ, ಹೆರಿಗೆ ಧನ ಸಹಾಯ ಸೇರಿದಂತೆ ಇನ್ನಿತರ ಪ್ರಮುಖ ವೈದ್ಯಕೀಯ ಸಹಾಯಧನ ಸೌಲಭ್ಯ ನೀಡಲಾಗುತ್ತಿದೆ. ಇಲಾಖೆಯ ಎಲ್ಲ ಯೋಜನೆಗಳಡಿ ೨೦೨೩-೨೪ನೇ ಸಾಲಿನಲ್ಲಿ ಜಿಲ್ಲೆಯ ೨,೮೮೦ ಫಲಾನುಭವಿಗಳಿಗೆ ಒಟ್ಟು ೧೨,೮೫,೬೫,೫೪೩ ರೂ. ಮೊತ್ತವನ್ನು ಮಂಜೂರು ಮಾಡಲಾಗಿದೆ. ೨೦೨೪-೨೫ನೇ ಸಾಲಿನಲ್ಲಿ ೩೮೦ ಫಲಾನುಭವಿಗಳಿಗೆ ಒಟ್ಟು ೧೬,೮೪,೯೭,೫೪೬ ರೂ. ಮೊತ್ತವನ್ನು ಮಂಜೂರು ಮಾಡಲಾಗಿದೆ.
೧೧) ಶಿಕ್ಷಣ ಇಲಾಖೆ
೧೧(i) ಸಾರ್ವಜನಿಕ ಶಿಕ್ಷಣ ಇಲಾಖೆ
ಕೊಪ್ಪಳ ಜಿಲ್ಲೆಯಲ್ಲಿ ೨೦೨೩-೨೪ರಲ್ಲಿ ೨,೨೯೪ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿಯಿದ್ದವು. ಈ ಹುದ್ದೆಗಳಲ್ಲಿ ೫೫೭ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಗಜೆಟ್ ನೊಟಿಫಿಕೇಷನ್ ಹೊರಡಿಸಲಾಗಿತ್ತು. ಅಂತಿಮವಾಗಿ ೪೫೫ ಶಿಕ್ಷಕರು ನೇಮಕವಾಗಿ ಸೇವೆಗೆ ಹಾಜರಾಗಿರುತ್ತಾರೆ. ಈ ಶಿಕ್ಷಕರಿಗೆ ಎನ್.ಜಿ.ಓ. ರವರ ಮೂಲಕ ೦೫ ದಿನದ ತರಬೇತಿ ನೀಡಲಾಗಿದೆ. ಈ ೪೪೫ ಶಿಕ್ಷಕರನ್ನು ಶಿಕ್ಷಕರ ಬೇಡಿಕೆಯಿದ್ದ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗಿದೆ.
೧೧(ii) ಪದವಿ ಪೂರ್ವ ಶಿಕ್ಷಣ ಇಲಾಖೆ
೨೦೨೪-೨೫ನೇ ಸಾಲಿಗೆ ಜಿಲ್ಲೆಯ ರಾಜೂರ-ಆಡೂರ ಹಾಗೂ ಮುಧೋಳ-ಕರ್ಮುಡಿ ಗ್ರಾಮಗಳಿಗೆ ೦೨ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗಳನ್ನು ಏಏಖಆಃ ಅನುದಾನದಲ್ಲಿ ಮಂಜೂರು ಮಾಡಲಾಗಿದೆ.
೧೨) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
೨೦೨೩-೨೪ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ ೨೦೮.೧೪ ಕೋಟಿ ರೂ. ಹಾಗೂ ಮ್ಯಾಕ್ರೋ ವಲಯದಲ್ಲಿ ೮೯.೨೦ ಕೋಟಿ ರೂ. ಹೀಗೆ ಒಟ್ಟು ೨೯೭.೩೪ ಕ್ಕೆ ಕ್ರಿಯಾ ಯೋಜನೆ ಅನುಮೋದಿಸಲಾಗಿದ್ದು, ವಿವಿಧ ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸ್ಥಾಪನೆಯಿಂದ ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗಿದೆ. ೨೦೨೪-೨೫ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ ೨೩೮.೮೧ ಕೋಟಿ ರೂ. ಹಾಗೂ ಮ್ಯಾಕ್ರೋ ವಲಯದಲ್ಲಿ ೧೨೮.೫೯ ಕೋಟಿ ರೂ. ಹೀಗೆ ಒಟ್ಟು ೩೬೭.೪೦ ಕೋಟಿ ಅನುದಾನವನ್ನು ನಿಗದಿಪಡಿಸಲಾಗಿರುತ್ತದೆ. ಕ್ರಿಯಾಯೋಜನೆ ಅನುಮೋದನೆ ಪಕ್ರಿಯೆ ಹಂತದಲ್ಲಿದೆ.
೧೩) ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಹಾಗೂ ಕುಕನೂರ ತಾಲೂಕಿನ ೩೮ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ ಹೊಸ ಕೆರೆ ನಿರ್ಮಾಣ ಮತ್ತು ನೀರು ತುಂಬಿಸುವ ಯೋಜನೆಗೆ ಘನ ಸರ್ಕಾರವು ೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ರೂ ೯೭೦.೦೦ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಘೋಷಿಸಿದ್ದು, ಯೋಜನೆಯ ಅನುಷ್ಠಾನ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ.
ಹೀಗೆ ಸರ್ಕಾರ ಮತ್ತು ಸ್ಥಳೀಯ ಮೂಲಗಳಿಂದ ದೊರಕಿರುವ ಸಾವಿರಾರು ಕೋಟಿ ಅನುದಾನದಿಂದ ಜಿಲ್ಲೆಯ ಸಮಗ್ರ ಬೆಳವಣಿಗೆಗೆ ಎಲ್ಲಾ ಆಯಾಮಗಳಿಂದ ಕ್ರಿಯಾ ಯೋಜನೆ ರೂಪಿಸಿ, ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುತ್ತಿದೆ.
ಸಕಲ ಜಾತಿ, ಧರ್ಮ, ಭಾಷೆ, ಪ್ರದೇಶಗಳ ಜನರೆಲ್ಲಾ ಒಗ್ಗಟ್ಟಾಗಿ ಬೃಹತ್ ಪ್ರಜಾಪ್ರಭುತ್ವದ ಯಶಸ್ಸಿಗಾಗಿ ನಾವೆಲ್ಲರೂ ಸಾಮರಸ್ಯದಿಂದ ಬಾಳುತ್ತಿದ್ದೇವೆ. ಬಹುಜನರ ಒಳಿತಿಗಾಗಿ ಬಹುಜನರ ಕಲ್ಯಾಣಕ್ಕಾಗಿ ಎಂಬ ಮಂತ್ರವನ್ನು ಸಾರುತ್ತಾ ಭವ್ಯಭಾರತ ಕಟ್ಟುವ ಸಂಕಲ್ಪ ಮಾಡೋಣ, ಭಾರತಕ್ಕೊಂದು ಹೊಸ ಭಾಷ್ಯ ಬರೆಯೋಣ ಎಂಬ ಸಂದೇಶವನ್ನು ಸಾರುತ್ತಾ ನನ್ನ ಸಂದೇಶದ ನುಡಿಗಳನ್ನು ಮುಕ್ತಾಯಗೊಳಿಸುತ್ತೇನೆ.
———**********———
ಎಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರೊ
Comments are closed.