ಮಕ್ಕಳು ದೇಶ ಭಕ್ತಿ, ದೇಶಾಭಿಮಾನ ಬೆಳಿಸಿಕೊಳ್ಳಿ: ಎಡಿಸಿ ಸಿದ್ರಾಮೇಶ್ವರ

Get real time updates directly on you device, subscribe now.

ಹರ್ ಘರ್ ತಿರಂಗ ಅಭಿಯಾನದಡಿ ದೇಶ ಭಕ್ತಿ ಗೀತೆ ಗಾಯನ, ನೃತ್ಯ ಸಾಂಸ್ಕ್ರತಿಕ ಕಾರ್ಯಕ್ರಮ

: ದೇಶ ಭಕ್ತಿ, ದೇಶಾಭಿಮಾನ ಬೆಳಿಸಿಕೊಳ್ಳಿ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ಮಕ್ಕಳಿಗೆ ಸಲಹೆ ನೀಡಿದರು.
 ಹರ್ ಘರ್ ತಿರಂಗ ಅಭಿಯಾನದಡಿ ಕೊಪ್ಪಳ ಜಿಲ್ಲಾಡಾಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಾಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಆಗಸ್ಟ್ 14ರಂದು ಹಮ್ಮಿಕೊಳ್ಳಲಾಗಿದ ದೇಶ ಭಕ್ತಿ ಗೀತೆ ಗಾಯನ, ನೃತ್ಯ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
78ನೇ ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ನಿರ್ದೇಶನದಂತೆ ಪ್ರತಿ ಮನೆ ಮನೆಗೂ, ಕಚೇರಿಗೂ ಆಗಸ್ಟ್ 12 ರಿಂದ ಆ.15 ರವರೆಗೆ ಮೂರು ದಿನಗಳ ಕಾಲ ರಾಷ್ಟ್ರ ಧ್ವಜವನ್ನು ಹಾರಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುದೆ. ದೇಶ ಭಕ್ತಿ, ಸ್ವಾತಂತ್ರ‍್ಯ ಹೋರಾಟಗಾರರು, ದೇಶಾಭಿಮಾನ ಬೆಳಿಸಿಕೊಳ್ಳವಂತಹ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹರ್ ಘರ್ ತಿರಂಗ ಅಭಿಯಾನ ಅಡಿ ದೇಶ ಭಕ್ತಿ ಗೀತೆ ಗಾಯನ, ವಿವಿಧ ನೃತ್ಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ದೇಶ ಭಕ್ತಿ, ಸ್ವಾತಂತ್ರ‍್ಯ ಗೀತೆಗಳನ್ನು ಮನರಂಜಿಸಿ ಅದರೊಂದಿಗೆ ದೇಶ ಭಕ್ತಿಯನ್ನು ಬೆಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭರತನಾಟ್ಯ ಮತ್ತು ನೃತ್ಯದ ಮೂಲಕ ದೇಶ ಮತ್ತು ದೇಶಾಭಿಮಾನ ಕುರಿತು ವಿವಿದ ದೇಶ ಭಕ್ತಿ ಗೀತೆ ಗಾಯನ, ವಿವಿಧ ನೃತ್ಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ
ಮರಬನಳ್ಳಿ, ಜಿಲ್ಲಾ ದೈಹಿಕ ಶಿಕ್ಷಣಧಿಕಾರಿಗಳಾದ ಎ.ಬಸವರಾಜ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!