’ಅಶೋಕ ವೀರಸ್ಥಂಭ’ -ಕೊಪ್ಪಳ ಸ್ವಾತಂತ್ರ್ಯ ಹೋರಾಟ

Get real time updates directly on you device, subscribe now.

ಕೊಪ್ಪಳ ಸ್ವಾತಂತ್ರ್ಯ ಹೋರಾಟದ ಹೆಗ್ಗುರುತಾಗಿ’ಅಶೋಕ ವೀರಸ್ಥಂಭ’
ಕೊಪ್ಪಳ ನಗರದ ಹೃದಯ ಭಾಗದಲ್ಲಿರುವ’ಅಶೋಕ ವೃತ’ಅಥವಾ’ಅಶೋಕ ವೀರಸ್ಥಂಭ’ವನ್ನು ನೋಡದವರೇಇಲ್ಲ. ಅನಕರ‍್ಷಸ್ಥರಿಂದ ಹಿಡಿದುಮುದುಕರು, ಹಿರಿಯರು, ಹೆಂಗsಸರು, ಯುವಕರು, ಮಕ್ಕಳು ಹೀಗೆ ಅನೇಕರು ಈ ವೃತ್ತದ ಮೂಲಕ ಹಾದುಹೋಗುತ್ತಾರೆ.ಮತ್ತು ಅನೇಕ ಬೇರೆ-ಬೇರೆ ಊರುಗಳಿಂದ ಕೊಪ್ಪಳಕ್ಕೆ ಬರುವವರು ಈ ವೃತ್ತದಲ್ಲಿ ಇಳಿದು, ನಗರದ ಬೇರೆ-ಬೇರೆ ಪ್ರದೇಶಗಳಿಗೆ ತೆರಳುತ್ತಾರೆ.ಮತ್ತೆ ಪುನಃ ತಮ್ಮ-ತಮ್ಮ ಊರುಗಳಿಗೆ ತೆರಳುವಾಗಲೂ ಸಹ ಇದೇವೃತ್ತದ ಮೂಲಕ ದಾಟಿಹೋಗುತ್ತಾರೆ.ಆದರೆಅಲ್ಲಿರುವ’ಅಶೋಕ ವೀರಸ್ಥಂಭ’ದ ಹಿನ್ನೆಲೆಅಥವಾಅದರ ಸ್ಥಾಪನೆಗೆಕಾರಣವೇನುಎಂಬುದು ಬಹುತೇಕರಿಗೆಗೊತ್ತಿಲ್ಲ.ಈ ವೀರಸ್ಥಂಭ ಸ್ಥಾಪನೆ ಹಿಂದೆ ವಿರೋಚಿತ ಹೋರಾಟದ ಬಗ್ಗೆ ಒಮ್ಮೆ ತಿಳಿದಾಗ ಮೈ ರೋಮಾಂಚನದಜೊತೆಗೆಒಂದನಿ ಕಣ್ಣೀರು ಬಂದರೂಅಶ್ಛರ್ಯವಿಲ್ಲ. ಆ ಸ್ಥಂಭದಸುತ್ತಲೂನಾಲ್ಕು ದಿಕ್ಕಿನಲ್ಲಿಅದರ ಸ್ಥಾಪನೆಯಉದ್ಧೇಶವನ್ನೂಕೂಡಕನ್ನಡ ಮತ್ತುಇಂಗ್ಲೀಷ್‌ಎರಡೂಭಾಷೆಯಲ್ಲಿ ಶಾಸನವನ್ನೂಸಹ ಬರೆಸಲಾಗಿದೆ.ಆದರೂಸಹ ಅದರ ಹಿನ್ನೆಲೆ ಬಹುತೇಕರಿಗೆ ತಿಳಿದಿರುವುಲ್ಲ.
ಈ’ಅಶೋಕ ವೀರಸ್ಥಂಭ’ದಲ್ಲಿ ಬರೆದಿರುವಕನ್ನಡದ ಪಠ್ಯವನ್ನುಯಥಾವತ್ತಾಗಿ ನೋಡುವುದಾದರೆ; ಸ್ವತ್ತಿ ಶ್ರೀ ಕ್ರಿಸ್ತಶಕ ೧೮೫೭ರ ಭಾರತದ ಪ್ರಥಮ ಸ್ವಾತಂತ್ರಸಮರದವೀರಸೇನಾನಿಗಳಾಗಿ ಈ ಸಮರವನ್ನುಕನ್ನಡ ನಾಡಿನಲ್ಲಿ ಮುಂದುವರೆಸಿ ಬ್ರಿಟಿಷರನ್ನು ಪ್ರತಿಭಟಿಸಿ ಯುದ್ಧಮಾಡಿ ೧-೭-೧೮೫೮ ನೆಯ ದಿನ ಈ ಕೋಟೆಯರಣಭೂಮಿಯಲ್ಲಿ ವೀರಸ್ವರ್ಗವಾಸಿಗಳಾದ ಕನ್ನಡ ನಾಡಿನ ವೀರಪುತ್ರರಾದಮುಂಡರಗಿ ಭೀಮರಾಯ ನಾಡಗೌಡ ಮತ್ತುಹಮ್ಮಗಿಕೆಂಚನಗೌಡದೇಶಾಯಿಇವರಿಬ್ಬರ ಮತ್ತುಅವರೊಂದಿಗೆಕಾದು ಮಡಿದು ಸ್ವರ್ಗಾಲಯಕ್ಕೇರಿದ ಹುತಾತ್ಮರಗೌರವಪೂರಿತ ಸ್ಮರಣಾರ್ಥವಾಗಿ ಸ್ಥಾಪಿಸಲಾದ ವೀರಸ್ಥಂಭ ಎಂದು ಬರೆಸಿ ಕೊನೆಗೆ ಕೊಪ್ಪಳ, ೧೫-೮-೧೯೫೭ಎಂದುಬರೆದುವೀರಸ್ಥಂಭ ಸ್ಥಾಪಿಸಿದ ದಿನಾಂಕ ಮತ್ತು ಸ್ಥಳವನ್ನು ನಮೂದಿಸಲಾಗಿದೆ.ಅಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ನಿಮಿತ್ಯವಾಗಿ ಈ ಸ್ಥಂಭ ಸ್ಥಾಪಿಸಲಾಗಿದೆ. ಅಂದರೆಬ್ರಿಟಿಷರ ವಿರುದ್ಧಹೋರಾಡಿ ಮಡಿದವೀರ ಸೇನಾನಿಗಳಒಂದುನೂರು ವರ್ಷದ ಸ್ಮರಣಾರ್ಥವಾಗಿ ಸ್ಥಾಪಿಸಲಾದ ವೀರಸ್ಥಂಭವನ್ನುಇದಾಗಿದೆ.
ಕೊಪ್ಪಳ ಕೋಟೆಯಲ್ಲಿಬ್ರಿಟಿಷ್ ಮತ್ತು ಮುಂಡರಗಿಭೀಮರಾಯತಂಡದವರ ಮಧ್ಯೆ೧೮೫೮ರ ಮೇ ೩೧ ಹಾಗೂಜೂನ್ ೧ರಎರಡು ದಿನಗಳಕಾಲ ಘನಘೋರವಾದಯುದ್ಧನಡೆಯುತ್ತದೆ. ಆಯುದ್ಧದಲ್ಲಿ ಮುಂಡರಗಿ ಭೀಮರಾಯರ ಮತ್ತು ಹಮ್ಮಗಿಕೆಂಚನಗೌಡದೇಸಾಯಿಯವರುವಾಸ್ತವದಲ್ಲಿ೧೮೫೮ರ ಜೂನ್೧ರಂದುಹುತಾತ್ಮಾರಾಗುತ್ತಾರೆ.ಆದರೆ ಕೊಪ್ಪಳ ವೃತ್ತದಲ್ಲಿ ಸ್ಥಾಪಿತವಾದ ಈ ವೀರಸ್ಥಂಭದಕನ್ನಡ ಭಾಷೆಯ ಶಾಸನದಲ್ಲಿ ೧೮೫೮ರಜುಲೈ೧ರಂದು ಹುತಾತ್ಮರಾದರೆಂದು ಬರೆಯಲಾಗಿದೆ.ಇದುತಪ್ಪಾದ ಮಾಹಿತಿಯಾಗಿದೆ.ಆದರೆಇಂಗ್ಲೀಷ್ ಭಾಷೆಯ ಶಾಸನದಲ್ಲಿ೧೮೫೮ರ ಜೂನ್ ೧ರಂದುವೀರಮರಣ ಹೊಂದಿದರೆಂದುಸರಿಯಾದ ಮಾಹಿತಿಯನ್ನು ಬರೆಯಲಾಗಿದೆ.ಇದು ಬಹುತೇಕಜನರಿಗೆ ತಿಳಿಯದಿರುವ ಮಾಹಿತಿಯಾಗಿದೆ.
೧೯೫೭ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಚಳುವಳಿ ಇಡೀ ಭಾರತದಾದ್ಯಂತ ಪ್ರಾರಂಭವಾಯಿತು. ಅದರಂತೆ ನಮ್ಮ ಕೊಪ್ಪಳ ಪ್ರದೇಶದಲ್ಲಿಯೂಸಹ ನಡೆಯುತ್ತದೆ. ಅದರಲ್ಲಿ ಬಹಳ ಪ್ರಮುಖವಾಗಿ ಮುಂಡರಗಿ ಭೀಮರಾಯ ನಾಡಗೌಡ ಮತ್ತು ಹಮ್ಮಿಗೆಕೆಂಚನಗೌಡದೇಸಾಯಿಯವರು ಭಾಗವಹಿಸಿದ್ದರು. ಮುಂಡರಗಿ ಭೀಮರಾಯರು ಬ್ರಿಟಿಷ್‌ರಅಧಿಕಾರದಅವಧಿಯಲ್ಲಿ ಮಾಮಲೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಂದರೆ ಇಂದಿನ ತಹಶೀಲ್ದಾರ ಹುದ್ದೆಗೆ ಸಮಾನವಾದ ಹುದ್ದೆಇದಾಗಿತ್ತೆಂದು ಹೇಳಲಾಗುತ್ತಿದೆ. ಅಂದಿನ ವ್ಯವಸ್ಥೆಯನ್ನು ಗಮನಿಸಿದ ಮುಂಡರಗಿ ಭೀಮರಾಯರುತಮ್ಮ ಹುದ್ದೆಗೆರಾಜೀನಾಮೆ ನೀಡಿ, ಸ್ವಾತಂತ್ರ್ಯ ಹೋರಾಟಕ್ಕೆಧುಮುಕಿದರು. ಅನೇಕ ಹೋರಾಟಗಾರರನ್ನು ಒಟ್ಟುಗೂಡಿಸಿ ಸ್ವಾತಂತ್ರ್ಯ ಹೋರಾಟದಕಿಚ್ಚನ್ನು ಈ ಕೊಪ್ಪಳ ಪ್ರದೇಶದಲ್ಲಿ ಹಚ್ಚಿದರು.
ಮುಂಡರಗಿ ಭೀಮರಾಯ ಮತ್ತು ಹಮ್ಮಗಿಕೆಂಚನಗೌಡದೇಸಾಯಿಯವರುಅನೇಕರೊಡಗೂಡಿಕೊಂಡು ಸ್ವಾತಂತ್ರ್ಯ ಪಡೆದೇತೀರಬೇಕೆಂಬ ಹಂಬಲದೊಂದಿಗೆ ರಣಕಹಳೆ ಊದಿದರು.ಬ್ರಿಟಿಷ್ ಅಧಿಕಾರಿಗಳಿಗೆ ಇದುಬಹಳ ತಲೆನೋವಾಗಿ ಪರಿಣಮಿಸಿತು. ವಿಶೇಷವಾಗಿ ಮುಂಡರಗಿ ಭೀಮರಾಯನ ಹೋರಾಟವನ್ನು ಮಟ್ಟಹಾಕಲು ಹವಣಿಸುತ್ತಿದ್ದರು. ಏನೇ ಪ್ರಯತ್ನ ಮಾಡಿದರೂ ಮುಂಡರಗಿ ಭೀಮರಾಯ ಬ್ರಿಟಿಷರಿಗೆ ಶರಣಗಾದಾದ. ಇದರಿಂದರೋಸಿಹೋದ ಬ್ರಿಟಿಷ್ ಅಧಿಕಾರಿಗಳು ಮುಂಡರಗಿ ಭೀಮರಾಯರನ್ನುಯಾರು ಹಿಡಿದುತಂದುನಮಗೆ ಒಪ್ಪಿಸುವರೋಅವರಿಗೆ ೫೦೦/- ರೂಪಾಯಿಗಳಬಹುಮಾನಕೊಡುವುದಾಗಿಘೋಷಿಸುತ್ತಾರೆ. ಆದರೂಮುಂಡರಗಿ ಭೀಮರಾಯಸಿಗುವುದಿಲ್ಲ. ಭೂಗತವಾಗಿಯೇ ಸ್ವಾತಂತ್ರ್ಯಚಳುವಳಿಯನ್ನು ರೂಪಿಸುತ್ತಿದ್ದರು. ಕೊನೆಗೆ ಕೊಪ್ಪಳ ತಹಶಿಲ್ದಾರರಾದ ಮಹ್ಮದ್ ಹನಿಫ್‌ರವರು ಮುಂಡರಗಿ ಭೀಮರಾಯರಇಬ್ಬರು ಹೆಂಡತಿಯರನ್ನು ಮತ್ತುಅವರ ೧೨ವರ್ಷದ ಮಗನನ್ನು ಬಂಧಿಸುತ್ತಾರೆ.ಇದು ಮುಂಡರಗಿ ಭೀಮರಾಯ ಮತ್ತವರತಂಡವುರೊಚ್ಚಿಗೇಳುವಂತೆ ಮಾಡಿತು. ಆಗ ಮುಂಡರಗಿ ಭೀಮರಾಯ, ಹಮ್ಮಗಿಕೆಂಚನಗೌಡದೇಸಾಯಿ ಮತ್ತವರತಂಡ ಕೊಪ್ಪಳದ ಕೋಟೆಯೊಳಗೆ ಅಡಗಿಕೊಳ್ಳುತ್ತಾರೆ. ಕೊಪ್ಪಳದಈ ಕೋಟೆ ಸ್ವಾತಂತ್ರ್ಯ ಹೋರಾಟಗಾರರಿಗೆಆಗ ಅಡಗುತಾಣವಾಗಿತ್ತು.ಈ ಕೋಟೆಮುಂಡರಗಿ ಭೀಮರಾಯರಿಗಿಂತ ಮೊದಲಿನಿಂದಲೂಸಹ ಸ್ವಾತಂತ್ರ್ಯ ಹೋರಾಟಗಾರರಿಗೆಅಡಗುತಾಣವಾಗಿತ್ತು. ಈ ಮೊದಲುಅಲ್ಲಿ ವೀರಪ್ಪದೇಸಾಯಿಯವರೂ ಸಹಇದೇಕೋಟೆಯಲ್ಲಿ ಹೋರಾಟ ಮಾಡಿದ್ದುಚರಿತ್ರೆಯಲ್ಲಿದಾಖಲಾಗಿದೆ.ಈ ಕೊಪ್ಪಳ ಕೋಟೆಯೊಳಗೆ ಅಡಗಿರುವಹೋರಾಟಗಾರರನ್ನು ನಿಗ್ರಹಿಸಲು ಬ್ರಿಟಿಷ್ ಅಧಿಕಾರಿಗಳು ಧಾರವಾಡ ಮತ್ತು ಬಳ್ಳಾರಿ ಡಿಸ್ಟ್ರಿಕ್ ಕಲೆಕ್ಟರ್‌ಗೆ ಪತ್ರ ಬರೆದು ನಿಗ್ರಹಿಸಲು ತಿಳಿಸಲಾಗುತ್ತದೆ. ಮುಂಡರಗಿ ಭೀಮರಾಯ ಮತ್ತು ಹಮ್ಮಗಿಕೆಂಚನಗೌಡದೇಸಾಯಿ ಮತ್ತವರತಂಡಈ ಕೋಟೆಯೊಳಗೆ ಅಡಗಿಕೊಂಡಿರುವ ಸುದ್ದಿ ಬ್ರಿಟಿಷ್ ಅಧಿಕಾರಿಗಳಿಗೆ ತಿಳಿಯುತ್ತದೆ. ಆಗ ಬ್ರಿಟಿಷ್ ಸೈನ್ಯಕೋಟೆಗೆ ಮುತ್ತಿಗೆ ಹಾಕುತ್ತದೆ. ಬ್ರಿಟಿಷ್ ಸೈನ್ಯದಅಧಿಕಾರಿ ಹ್ಯೂಜ್‌ಎನ್ನುವಅಧಿಕಾರಿಬ್ರಿಟಿಷ್ ಸೈನ್ಯದೊಂದಿಗೆಕೋಟೆಗೆ ದಾಳಿ ಮಾಡುತ್ತಾರೆ. ಅದು ಬಲಿಷ್ಠವಾದಕೋಟೆಯಾಗಿರುವುದರಿಂದಅಲ್ಲಿ ಹೋರಾಟಗಾರರನ್ನುತಲುಪಲು ಬ್ರಿಟಿಷ್ ಸೈನ್ಯಕ್ಕೆ ಸಾಧ್ಯವಾಗುವುದಿಲ್ಲ. ಆಗ ಅಲ್ಲಿನಬಾಗಿಲು ಕಾಯುವಕಾವಲುಗಾರರಲ್ಲಿ ಕೆಲವರು ಹಣದ ಆಸೆಗಾಗಿ ಕೋಟೆಯಬಾಗಿಲು ತೆಗೆಯುತ್ತಾರೆ. ಆಗ ಬ್ರಿಟಿಷ್‌ಸೈನ್ಯಕೋಟೆಯ ಒಳಗೆ ನುಗ್ಗಿ ಮುಂಡರಗಿ ಭೀಮರಾಯರತಂಡವನ್ನುತಲುಪುತ್ತದೆ. ಮುಂಡರಗಿ ಭೀಮರಾಯ ಮತ್ತು ಹಮ್ಮಗಿಕೆಂಚನಗೌಡದೇಸಾಯಿಯವರತಂಡದೊಂದಿಗೆಬ್ರಿಟಿಷ್ ಸೈನ್ಯವು೧೮೫೮ರ ಮೇ ೩೧ ಮತ್ತುಜೂನ್ ೧ರಎರಡು ದಿನಗಳ ಕಾಲ ಹೋರಾಟ ಮಾಡುತ್ತದೆ. ಮುಂಡರಗಿ ಭೀಮರಾಯರ ಹಾಗೂ ಬ್ರಿಟಿಷರ ಸೈನ್ಯದ ಮಧ್ಯೆಘನಘೋರವಾದಯುದ್ಧ ನಡೆಯಿತೆಂದುಚರಿತ್ರೆ ಹೇಳುತ್ತದೆ. ಆದರೆ ಬ್ರಿಟಿಷ್ ಸೈನ್ಯದ ಮದ್ದುಗುಂಡುಗಳ ಮುಂದೆಕೆಂಚನಗೌಡದೇಸಾಯಿ, ಮುಂಡರಗಿ ಭೀಮರಾಯರ ಮದ್ದುಗಳು ಸಾಲದಾದವು. ಬ್ರಿಟಿಷ್ ಸೈನ್ಯಅದು ಸರಕಾರವಾಗಿತ್ತು. ಅವರಲ್ಲಿ ಸಾಕಷ್ಟು ಸಿಡಿಮದ್ದುಗಳು, ಆಯುಧಗಳು, ಬಂದೂಕುಗಳು, ತುಬಾಕಿಗಳಿದ್ದವು. ಆದರೆಕೆಂಚನಗೌಡದೇಸಾಯಿ, ಮುಂಡರಗಿ ಭೀಮರಾಯರರು ಖಾಸಗಿ ವ್ಯಕ್ತಿಗಳು. ಅವರಲ್ಲಿಅತಂಹ ಸಿಡಿಮದ್ದುಗಳ ಸಂಗ್ರಹ ಬಹಳ ಕಡಿಮೆಇತ್ತು. ಅವರುಎಲ್ಲಿಂದಲೋಸಂಗ್ರಹಿಸಿಕೊಂಡು ತಂದಸಿಡಿಮದ್ದುಗಳು ಸಾಲದಾದವು. ಕೊನೆಗೆ೧೮೫೮ರ ಜೂನ್ ೧ರಂದು ಹಮ್ಮಗಿಕೆಂಚನಗೌಡದೇಸಾಯಿ ಮತ್ತುಮುಂಡರಗಿ ಭೀಮರಾಯರರು ಹೋರಾಡುತ್ತಲೇ ಹುತಾತ್ಮರಾದರು. ಒಂದುಚರಿತ್ರೆಯ ಪ್ರಕಾರಬ್ರಿಟಿಷರಕೈಯಲ್ಲಿ ನಾವು ಸಾಯಬಾರದೆಂದುಹಮ್ಮಗಿಕೆಂಚನಗೌಡದೇಸಾಯಿ ಮತ್ತು ಮುಂಡರಗಿ ಭೀಮರಾಯರರುಪರಸ್ಪರಒಬ್ಬರಿಗೊಬ್ಬರುತಮಗೆತಾವೇಗುಂಡು ಹಾರಿಸಿಕೊಂಡು ವೀರಮರಣ ಹೊಂದಿದರೆಂದುದಾಖಲಾಗಿದ್ದರೆ; ಮತ್ತೊಂದುದಾಖಲೆ ಪ್ರಕಾರಕೆಂಚನಗೌಡದೇಸಾಯಿ, ಮುಂಡರಗಿ ಭೀಮರಾಯರು ಬ್ರಿಟಿಷರ ವಿರುದ್ಧ ಹೋರಾಡುತ್ತಲೇಬ್ರಿಟಿಷ್ ಅಧಿಕಾರಿಗಳ ಕೈಯಿಂದಕೋಟೆಯಲ್ಲಿಹುತಾತ್ಮರಾದರೆಂದು ಹೇಳಲಾಗುತ್ತದೆ.ಇದರ ಬಗ್ಗೆ ಇನ್ನೂಹೆಚ್ಚಿನಅಧ್ಯಯನಗಳು ನಡೆಯಬೇಕಿದೆ.
ಭಾರತದಲ್ಲಿಸ್ವಾತಂತ್ರಕ್ಕಾಗಿಇಂತಹ ಅನೇಕ ಹೋರಾಟಗಳು ನಡೆದುಹೋದವು.ಅದಕ್ಕೆ ಕೊಪ್ಪಳವೇನೂ ಹೊರತಾಗಿರಲಿಲ್ಲ. ಕೊನೆಗೆ ೧೯೪೭ರ ಆಗಷ್ಟ್ ೧೫ರಂದು ಭಾರತಕ್ಕೆ ಸ್ವಾತಂತ್ರ್ಯದೊರಕಿತು. ಇದಾದ ನಂತರಕೆಂಚನಗೌಡದೇಸಾಯಿ, ಮುಂಡರಗಿ ಭೀಮರಾಯರವರು ಹುತಾತ್ಮರಾಗಿ ಬರೋಬ್ಬರಿಒಂದು ನೂರು ವರ್ಷಗಳು ಗತಿಸಿದ ನಂತರ,ಅಂದರೆ ೧೯೫೭ರಆಗಷ್ಟ್ ೧೫ರಂದು ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿಇವರ ಸ್ಮರಣಾರ್ಥವಾಗಿ ಕೊಪ್ಪಳದ ಹೃದಯ ಭಾಗದಒಂದು ವೃತ್ತದಲ್ಲಿವೀರಸ್ಥಂಭ ಸ್ಥಾಪಿಸುತ್ತಾರೆ. ಆ ಸ್ಥಂಭದ ಮೇಲೆ ನಾಲ್ಕು ಮುಖಗಳುಳ್ಳ ಸಿಂಹಗಳ ಕೆತ್ತನೆಯ ಶಿಲ್ಪವನ್ನು ಸ್ಥಾಪಿಸಲಾಗುತ್ತದೆ. ಈ ನಾಲ್ಕು ಸಿಂಹಗಳ ಶಿಲ್ಪವನ್ನು ಮೊದಲು ಸಾಮ್ರಾಟ ಅಶೋಕ ಚಕ್ರವರ್ತಿ ಉಪಯೋಗಿಸಿರುವುದರಿಂದ ಇದನ್ನು’ಅಶೋಕ ಸ್ಥಂಭ’ಎಂದು ಪ್ರಪಂಚದಾದ್ಯಂತಕರೆಯಲಾಗುತ್ತಿದೆ. ಹೀಗಾಗಿ ಕೊಪ್ಪಳದಲ್ಲಿಯೂ ಸಹ ಸ್ಥಾಪಿತವಾದಈ ಅಶೋಕ ವೀರಸ್ಥಂಭಕ್ಕೆ ಅಶೋಕ ವೃತ್ತ, ಅಶೋಕ ಸರ್ಕಲ್‌ಎಂದುಕರೆಯಲಾಗುತ್ತಿದೆ. ಅಂದುಈ ’ಅಶೋಕ ವೀರಸ್ಥಂಭ’ಸಂಸ್ಥಾಪನಾ ಕಾರ್ಯಕ್ಕೆ ನರಗುಂದಕ್ಷೇತ್ರದ ಶಾಸಕ ಮತ್ತುಆರೋಗ್ಯ ಮಂತ್ರಿಗಳಾಗಿದ್ದಶ್ರೀ ಆರ್.ಎಂ.ಪಾಟಿಲ್, ಸ್ವಾತಂತ್ರ ಹೋರಾಟಗಾರರಾದಶ್ರೀ ವೀರಭದ್ರಪ್ಪ ಶಿರೂರು, ಶ್ರೀ ಬಂಗಾರಶೆಟ್ಟಿ ಶಂಕ್ರಪ್ಪಮತ್ತು ಅನೇಕ ಸ್ವಾತಂತ್ರ ಹೋರಾಟಗಾರರು, ದೇಶಪ್ರೇಮಿಗಳು ಈ ಮಹತ್ವದಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೇಮುಂಡರಗಿ ಭೀಮರಾಯರ ವಂಶಸ್ಥರಾದಶ್ರೀ ವೆಂಕಟರಾವ್ ನಾಡಗೌಡರವರೂ ಸಹ ಭಾಗವಹಿಸಿದ್ದರು. ಎಲ್ಲರೂಒಟ್ಟುಗೂಡಿ ಮುಂಡರಗಿ ಭೀಮರಾಯ ಮತ್ತುಹಮ್ಮಗಿಕೆಂಚನಗೌಡದೇಸಾಯಿಇನ್ನೂ ಅನೇಕ ಸ್ವಾತಂತ್ರ ಹೋರಾಟಗಾರರು ವೀರಮರಣವನ್ನಪ್ಪಿದ ಸ್ಮರಣಾರ್ಥವಾಗಿ ನೂರು ವರ್ಷದ ನೆನಪಿನಲ್ಲಿ ಕೊಪ್ಪಳದ ಹೃದಯ ಭಾಗದಲ್ಲಿ ಈ ’ಅಶೋಕ ವೀರಸ್ಥಂಭ’ವನ್ನು ಸ್ಥಾಪಿಸಲಾಗಿದೆ.ಇಂತಹಅಭೂತಪೂರ್ವವಾದ ಮತ್ತು ಐತಿಹಾಸಿಕ ಹಿನ್ನೆಲೆ ಸಾರುವ ಸ್ಮಾರಕದ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿಇಲ್ಲದಿರುವುದು ನೋವಿನ ಸಂಗತಿಯಾದರೂಈ ಸ್ಥಂಭಸ್ಥಾಪಿತವಾದಹಿನ್ನೆಲೆಬಗ್ಗೆ ಮಾಹಿತಿಯನ್ನುನೀಡಿದಹಿರಿಯ ಸಾಹಿಗಳಾದ ಶ್ರೀ ಎಚ್.ಎಸ್.ಪಾಟಿಲ್‌ರವರಿಗೆಅನಂತಧನ್ಯವಾದಗಳು.
ಆಕರ ಗ್ರಂಥಗಳು;-
೧. ಸಂ,ಡಿ.ಎಸ್.ಅಶ್ವತ್ ಮತ್ತುಇತರರು, ವಿಮೋಚನೆ (ಕೊಪ್ಪಳ ಜಿಲ್ಲೆಯ ಹೈದರಾಬಾದ್ ವಿಮೋಚನಾ ಹೋರಾಟದಕಥೆ) ಜಿಲ್ಲಾಡಳಿತ, ಕೊಪ್ಪಳ-೧೯೯೯
೨. ರಾಮಣ್ಣ ಹವಳೆ, ಕೊಪ್ಪಳ ನಾಡಿನ ಸ್ವಾತಂತ್ರ್ಯ ಹೋರಾಟಗಾರರು, ಶ್ರೀ ಭೀಮಜ್ಜ ಮುರಡಿ ಪ್ರತಿಷ್ಟಾನ, ಕುಷ್ಟಗಿ-೨೦೨೧
೩. ಸಂ,ಡಾ.ಕೆ.ಶರಣಪ್ಪ ನಿಡಶೆಸಿ, ಸ್ವಾತಂತ್ರ್ಯಾಮೃತ(ಸ್ವಾತಂತ್ರ್ಯದಅಮೃತ ಮಹೋತ್ಸವ ಸಂದರ್ಭಗ್ರಂಥ)ರಾಘವಾರ್ಜುನ ಪ್ರಕಾಶನ, ಬಯ್ಯಾಪುರ-ಕುಷ್ಟಗಿ-೨೦೨೨
೪. ಡಾ.ಚನ್ನಬಸಪ್ಪಎಸ್.ಪಾಟೀಲ,ಕರ್ನಾಟಕ ಕೋಟೆಗಳು ಸಂಪುಟ-೧, ಕನ್ನಡ ವಿಶ್ವವಿದ್ಯಾಲಯ, ಹಂಪಿ-೧೯೯೯
೫. ಡಾ.ಸುಜಾತಎಸ್.ನೆಟೇಕಲ್, ಕರ್ನಾಟಕದಕೋಟೆ ಮತ್ತು ಕೊತ್ತಲಗಳು, ಸೋಮನಾಥ ಪ್ರಕಾಶನ, ಗೊರೇಬಾಳ-೨೦೨೨
೬. ಸಂ,ಡಾ.ದೇವರಕೊಂಡಾರೆಡ್ಡಿ, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ-೨, ಕೊಪ್ಪಳ ಜಿಲ್ಲೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೧೯೯೯
೭. ಸಂ,ಹನುಮಂತಪ್ಪಅಂಡಗಿ, ಕರ್ನಾಟಕದ ಹುಲಿ(ಅಳವಂಡಿ ಶಿವಮೂರ್ತಿಸ್ವಾಮಿಗಳ ಸಂಸ್ಮರಣಗ್ರಂಥ)ಕರ್ನಾಟಕ ವಿದ್ಯಾವರ್ದಕ ಸಮಿತಿ, ಅಳವಂಡಿ-೨೦೧೪
೮. ರಾಮಣ್ಣ ಹವಳೆ, ಹೈದರಾಬಾದ ಸಂಸ್ಥಾನ ವಿಮೋಚನೆಯಲ್ಲಿರಾಯಚೂರುಜಿಲ್ಲೆಯ ಹೋರಾಟ, ರಾಯಚೂರುಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘ, ರಾಯಚೂರು-೨೦೧೦
೯. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿಕಇತಿಹಾಸ(ಪರೀಷ್ಕೃತಎರಡನೆ ಮುದ್ರಣ),ಮೇಘನಾ ಪ್ರಕಾಶನ, ಕೊಪ್ಪಳ-೨೦೨೦
೧೦. ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ಕೊಪ್ಪಳ ಚರಿತ್ರೆ ಮತ್ತುಸಂಸ್ಕೃತಿಯ ಹುಡುಕಾಟ, ಮೇಘನಾ ಪ್ರಕಾಶನ, ಕೊಪ್ಪಳ-೨೦೨೩

ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿಕನ್ನಡಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊಬೈಲ್: ೯೪೪೮೫೭೦೩೪೦
ಇ-mಚಿiಟ: sಞoಣಟಿeಞಚಿಟ@gmಚಿiಟ.ಛಿom <mಚಿiಟಣo:sಞoಣಟಿeಞಚಿಟ@gmಚಿiಟ.ಛಿom>

Get real time updates directly on you device, subscribe now.

Comments are closed.

error: Content is protected !!
%d bloggers like this: