ಕಲ್ಯಾಣ ಕರ್ನಾಟಕ ಪ್ರಿಂಟರ್ಸ್ ಅಸೋಷಿಯೇಷನ್ ಸಂಘಟನೆ
ಕೊಪ್ಪಳ: ರಾಜ್ಯದ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ 371ಜೆ ಇದ್ದರೂ ಸಹ ಇಲ್ಲಿನ ಜನರಿಗೆ, ಸಂಸ್ಥೆಗಳಿಗೆ ಉದ್ಯಮಿಗಳಿಗೆ ಸಹಾಯ ಸಿಗುತ್ತಿಲ್ಲ ಬದಲಾಗಿ ಅದರ ಲಾಭವೂ ಸಹ ಕೈತಪ್ಪಿ ಹೋಗುತ್ತಿರುವದರಿಂದ ಪ್ರಿಂಟರ್ಸ್ ಸಂಘಟನೆ ಮಾಡಲಾಗುತ್ತಿದೆ ಎಂದು ಪ್ರಿಂಟರ್ ಆಗಿರುವ ಸಂಸ್ಥಾಪಕ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಅನೇಕ ಮುದ್ರಣ ಸಂಸ್ಥೆ ಮಾಲೀಕರ ಜೊತೆಗೆ ಮೊದಲ ಹಂತದ ಮಾತುಕತೆ ಮಾಡಿದ್ದು ಶೀಘ್ರ ನೂತನ ಸಂಘಟನೆಯ ರೂಪುರೇಷೆ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡಲಾಗುವದು ಎಂದಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಸುಮಾರು ಸಾವಿರಕ್ಕೂ ಅಧಿಕ ಪ್ರಿಂಟಿಂಗ್ ಪ್ರೆಸ್‍ಗಳಿದ್ದು ಅವುಗಳಿಂದ ಸುಮಾರು ಐದಾರು ಸಾವಿರ ಕುಟುಂಬಗಳು ಜೀವನ ನಡೆಸುತ್ತಿದ್ದು ಅವರ ರಕ್ಷಣೆ ಬಹಳ ಮುಖ್ಯವಾಗಿದೆ. ಮುದ್ರಣಕಾರರಿಗೆ ಲೇಬರ್ ಕಾರ್ಡ್ ಕೊಡಿಸುವದು, ಗ್ರೂಪ್ ಇನ್ಶೂರೆನ್ಸ್, ಕೋ-ಆಪರೇಟಿವ್ ಸೊಸೈಟಿ ರಚನೆ, ಈ ಏಳು ಜಿಲ್ಲೆಗಳ ಮುದ್ರಣಕಾರರಿಗೆ ಸರಕಾರಿ ಕೆಲಸಗಳಲ್ಲಿ ಮೀಸಲು, ಕೆಕೆಆರ್‍ಡಿಬಿ ಮುದ್ರಣ ಮೂಲಕ ಜಾರಿಯಾಗುವ ಮುದ್ರಣ ಮತ್ತು ಸ್ಟೇಷನರಿ ಕೆಲಸಗಳು ಇಲ್ಲಿನವರಿಗೆ ಕೆಲಸ ಸಿಗುವ ಕುರಿತು ಸರಕಾರದ ಮೂಲಕ ಅವಕಾಶ ಕಲ್ಪಿಸುವದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಂಘಟನೆ ನಿರ್ಣಯ ತೆಗೆದುಕೊಳ್ಳಲಿದೆ, ಹೆಚ್ಚಿನ ಮಾಹಿತಿಗೆ ಮಂಜುನಾಥ ಜಿ. ಗೊಂಡಬಾಳ ಮೊ: 9448300070 ಅವರನ್ನು ಸಂಪರ್ಕಿಸಿರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಂಕುತಿಮ್ಮ
Comments are closed.