ವೈದ್ಯೆಯ ಅತ್ಯಾಚಾರ – ಹತ್ಯೆಯ ಪ್ರಕರಣ ಖಂಡಿಸಿ : ಕೊಪ್ಪಳದಲ್ಲಿ ವೈದ್ಯರ ಪ್ರತಿಭಟನೆ

Get real time updates directly on you device, subscribe now.


ಕೊಪ್ಪಳ : ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಇಂದು ಕೊಪ್ಪಳದ ಗಂಜ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು‌.
ಪ್ರತಿಭಟನೆಯ ನೇತೃತ್ವವಹಿಸಿದ ಡಾ. ಮಹೇಶ್ ಗೊವನಕೊಪ್ಪ
ಡಾ.ಮಹೇಂದ್ರ ಕಿಂದ್ರೆ ಮಾತನಾಡಿ,
ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಪ್ರಾಂಶುಪಾಲರ ವಜಾ ಆಗಬೇಕು ಮತ್ತು ಆಸ್ಪತ್ರೆಯ ಭದ್ರತಾ ಉಸ್ತುವಾರಿ, ವೈದ್ಯರಿಗೆ ಕೇಂದ್ರ ರಕ್ಷಣಾ ಕಾಯಿದೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ನೀಡಬೇಕು. ಜೊತೆಗೆ ಸಂಸ್ಥೆಯಲ್ಲಿ ಕಟ್ಟಡ ಅಥವಾ ಗ್ರಂಥಾಲಯಕ್ಕೆ ಸಂತ್ರಸ್ತೆಯ ಹೆಸರಿಡಬೇಕು ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಇಂತಹ ಬೆಳವಣಿಗೆಗಳು ವೈದ್ಯರಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಪರಿಸ್ಥಿತಿ ಬಂದಿದೆ ಸಂಬಂಧಪಟ್ಟ ಅಧಿಕಾರಿಗಳು ವೈದ್ಯರಿಗೆ ಭಯಮುಕ್ತವಾಗಿ ಅವರ ಕರ್ತವ್ಯವನ್ನು ನಿರ್ವಹಿಸಲು ವಾತಾವರಣವನ್ನು ಸೃಷ್ಟಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಡಾ.ಕೆಜಿ ಕುಲಕರ್ಣಿ, ಡಾ. ಮಹೇಶ್ ಭಗವತಿ, ಡಾ. ಪ್ರಸಾದ್ ಪೊಲೀಸ್ ಪಾಟೀಲ್, ಗಿರೀಶ್ ನವಲಿ ಹಿರೇಮಠ ಡಾ. ಸುಂಕದ, ಎಸ್ ಎಸ್ ಕಂಬಳಿಹಾಳ್ ಡಾ. ಚಂದ್ರಕಲಾ ಡಾ. ಶ್ರೀನಿವಾಸ್ ಡಾ. ಶೈಲಜಾ ಇನಮ್ದಾರ್, ಆಸ್ಪತ್ರೆಯ ವೈದ್ಯರು ಮುಷ್ಕರದಲ್ಲಿ ಭಾಗವಹಿದ್ದರು.

Get real time updates directly on you device, subscribe now.

Comments are closed.

error: Content is protected !!