ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಮತ್ತು ಶೀಘ್ರವೇ ಗೇಟ್ ರಿಪೇರಿ ಆಗಬೇಕು -ನವೀನಕುಮಾರ ಈ ಗುಳಗಣ್ಣವರ
Koppal ತಡರಾತ್ರಿ ತುಂಗಭದ್ರಾ ಅಣೆಕಟ್ಟಿನ ಗೇಟ್ ನಂಬರ್ 19 ನೇಯ ಚೈನ್ ಲಿಂಕ್ ಗೇಟ್ ಕಟ್ಟಾಗಿರುವುದು ನಿಜಕ್ಕೂ ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ, ಅವಧಿಕಿನ ಮುಂಚೆ ಡ್ಯಾಮ್ ನಲ್ಲಿ ನೀರು ತುಂಬಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು, ಈ ಭಾಗದ ಜೀವನಾಡಿ ಇರುವ ತುಂಗಭದ್ರಾ ಜಲಾಶಯ ಈ ಘಟನೆಯಿಂದ ಈ ಭಾಗದ ರೈತರಿಗೆ ನಷ್ಟ ಉಂಟು ಮಾಡಿದೆ.
ಅಧಿಕಾರಿಗಳ ನಿರ್ಲಕ್ಷ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಇಂತಹ ಘಟನೆಗಳಿಗೆ ಕಾರಣ ಬೇಸಿಗೆ ಸಂದರ್ಭದಲ್ಲಿ ನಿರ್ವಹಣೆಯನ್ನು ಹಾಗೂ ರಿಪೇರಿಗೆ ನೀಡಿದ ಹಣವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಂಡಿದ್ದರೆ ಬಹುಶ: ಇಂತಹ ಘಟನೆ ನಡೆಯುತ್ತಿರಲಿಲ್ಲ. ಜಲಾಶಯದ ನಿರ್ವಹಣಾಕ್ಕೆ, ನೀಡಿದ ಹಣದ ದುರ್ಬಳಿಕೆ ಇಂಥ ಘಟನೆಗಳಿಗೆ ಕಾರಣ. ಈ ಘಟನೆಗೆ ಸಂಬಂಧಪಟ್ಟಂತೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಮತ್ತು ಶೀಘ್ರವೇ ಗೇಟ್ ರಿಪೇರಿ ಆಗಬೇಕು ಆಗುವ ಅನಾಹುತಕ್ಕೆ ಕಡಿವಾಣ ಹಾಕಬೇಕೆಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನಕುಮಾರ ಈ ಗುಳಗಣ್ಣವರ
ಆಗ್ರಹಿಸಿದ್ದಾರೆ.
Comments are closed.