ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೇಕು – ಅಮರೇಶ ನುಗಡೋಣಿ
ಕೊಪ್ಪಳ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಅಭಿರುಚಿಯು ಕಡಿಮೆಯಾಗುತ್ತಿದ್ದು ವಿದ್ಯಾರ್ಥಿಗಳು ಕಥೆ ಕಾದಂಬರಿ ನಾಟಕ ಕವನ ಮುಂತಾದ ಸಾಹಿತ್ಯದ ಪ್ರಕಾರಗಳನ್ನು ಗಮನಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ. ಅಮರೇಶ ನುಗಡೋಣಿ ಹೇಳಿದರು.
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ಇತ್ತೀಚಿಗೆ ಪ್ರೌಢಶಾಲೆಯಲ್ಲಿ ಜರುಗಿದ ಸಾಹಿತಿಗಳೊಡನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅವರು ವಿದ್ಯಾರ್ಥಿ ಸಮುದಾಯ ಆಧುನಿಕ ಸಂವಹನ ಮಾಧ್ಯಮಗಳಾದ ವಾಟ್ಸಾಪ್ ಫೇಸ್ ಬುಕ್ ಮೊದಲಾದವುಗಳನ್ನು ತೊ ರೆಯುವುದರ ಮೂಲಕ ಭಾವನಾತ್ಮಕ ಸಂದೇಶ ಸಾರುವ ಕಥೆಗಳನ್ನು ಗಮನಿಸಬೇಕಾದ ಅಗತ್ಯವಿದೆ. ಆ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕೆಂದು ಸಲಹೆ ನೀಡಿದರು. ಸಾಹಿತ್ಯದ ರಚನೆಯೇ ಗ್ರಾಮೀಣ ಭಾಗದಲ್ಲಿ ಕನ್ನಡ ಶಾಲೆಯಲ್ಲಿ ಓದಿದವರಿಂದಲೇ ಆಗುತ್ತಿದ್ದು ಈ ಪ್ರಕ್ರಿಯೆಗೆ ಇತ್ತೀಚಿನವರ ಒಳಗೊಳ್ಳುವಿಕೆ ಕಡಿಮೆ ಯಾಗುತ್ತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು. ಸಮಾರಂಭದಲ್ಲಿ ಕನ್ನಡ ಉಪನ್ಯಾಸಕರಾದ ಡಾ. ತುಕಾರಾಮ್ ನಾಯಕ್ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದ್ಯೆಯಿಂದ ವಿಮುಖವಾಗದೆ ಸಾಗಬೇಕಾದ ಅಗತ್ಯವನ್ನು ವಿವರಿಸಿದರು. ಇತ್ತೀಚಿಗೆ ನಿವೃತ್ತರಾದ ಶ್ರೀ ಚಂದ್ರಕಾಂತಯ್ಯ ಕಲ್ಯಾಣ ಮಠ ಇವರು ಉಪಸ್ಥಿತ ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಪ್ರಾಂಶುಪಾಲರಾದ ಸುಭಾಷ್ ಚಂದ್ರ ಕೋಳೂರ ವಹಿಸಿದ್ದರು. ಅತಿಥಿಗಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಶ್ರೀ ಬಾಳಪ್ಪ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಸಮೂಹ ಬೋಧಕ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Comments are closed.