ಬದುಕಿನ ದಿಕ್ಸೂಚಿಯೇ ಶಿಕ್ಷಣ: ವಿಠ್ಠಲಕುಮಾರ್
ಅಳವಂಡಿ/ಕೊಪ್ಪಳ: ಮುಂದುವರಿದ ಇಂದಿನ ದಿನಗಳಲ್ಲಿ ಶಿಕ್ಷಣ ಬಹಳ ಮುಖ್ಯ. ಬದುಕನ್ನು ರೂಪಿಸಲು ಶಿಕ್ಷಣ ದಿಕ್ಸೂಚಿಯಾಗಿದೆ ಎಂದು ಯೋಜನಾ ಅಭಿಯಂತರ ವಿಠ್ಠಲಕುಮಾರ್ ಅಭಿಪ್ರಾಯಪಟ್ಟರು.
ಕೊಪ್ಪಳ ತಾಲೂಕಿನ ಅಳವಂಡಿಯ ಶ್ರೀ ಶಿವಮೂರ್ತಿಸ್ವಾಮಿ ಇನಾಂದಾರ ಕಟ್ಟಿಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜುಲೈ 8ರ ಶನಿವಾರ ವಾಣಿಜ್ಯ ವಿಭಾಗದಿಂದ ನಡೆದ ವಿದ್ಯಾರ್ಥಿಗಳಿಗೆ ಪ್ರೇರಣೆ, ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣವಿದ್ದರೆ ಯಾವ ಗುರಿಯನ್ನಾದರೂ ಸಾಧಿಸಬಹುದು. ಇವತ್ತಿನ ಸಮಾಜ ಶಿಕ್ಷಣ ಇಲ್ಲದಿದ್ದರೆ ನೋಡುವ ದೃಷ್ಟಿಕೋನ ಬೇರೆಯಾಗಿರುತ್ತದೆ. ಶಿಕ್ಷಣ ಪಡೆಯುವ ಕಾಲಘಟ್ಟದಲ್ಲಿ ಮನಸ್ಸನ್ನು ಬೇರೆಡೆ ಹರಿ ಬಿಡಬಾರದು ಎಂದು ಕಿವಿಮಾತು ಹೇಳಿದರು.
ಆನ್‍ಲೈನ್ ಮೂಲಕ ಅಮೇರಿಕಾದಿಂದ ಡ್ಯಾನಿಲ್, ಆಂಧ್ರಪ್ರದೇಶದಿಂದ ಮೋನಿಕಾ ಮತ್ತು ಉಮಾಪತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪದವಿಯ ನಂತರ ವಿದೇಶದಲ್ಲಿ ಶಿಕ್ಷಣ ಪಡೆಯುವ ಆಸಕ್ತರಿಗೆ ಮುಕ್ತ ಆಹ್ವಾನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಗವಿಸಿದ್ದಪ್ಪ ಮುತ್ತಾಳ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರಿಗೂ ಗುರಿ ಮುಖ್ಯ. ವಿದ್ಯಾರ್ಥಿ ಹಂತದಲ್ಲೇ ಗುರಿ ಇಟ್ಟುಕೊಂಡರೆ ಅದನ್ನು ಸಾಧಿಸಲು ಮನಸ್ಸು ಸದಾ ತುಡಿತದಲ್ಲಿರುತ್ತದೆ. ಆಗ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ನಾಗೇಂದ್ರಪ್ಪ ಬಿ., ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಫಕ ಇಮಾಮ್ ಸಾಬ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಹಾಗೂ ಸಹಾಯಕ ಪ್ರಾಧ್ಯಾಪಕ ಮಲ್ಲಿಕಾರ್ಜುನ ಬ್ಯಾಲಹುಣಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ವೆಂಕಟೇಶ, ಗೋಣಿಬಸಪ್ಪ, ಪೀರಾವಲಿ, ಮಹೇಶ, ವೀರಭದ್ರಪ್ಪ ಹುಂಬಿ, ಮಲ್ಲೇಶಪ್ಪ, ಹಸೀನಾಭಾನು, ಗ್ರಂಥಪಾಲಕಿ ಗೌತಮಿ ಹಾಗೂ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಇದ್ದರು.
ಬಸವರಾಜ ಕರುಗಲ್ ನಿರೂಪಿಸಿದರು. ಭಾರ್ಗವಿ, ಭೀಮಾಂಬಿಕಾ, ಅಂಜುಮಾ ಹಾಗೂ ದೀಪಾ ಪ್ರಾರ್ಥಿಸಿದರು. ಪ್ರದೀಪ್ ಪಲ್ಲೇದ ಪ್ರಾಸ್ತಾವಿಕ ಮಾತನಾಡಿದರು. ರವಿ ಹಿರೇಮಠ ಅತಿಥಿ ಪರಿಚಯ ಮಾಡಿಕೊಟ್ಟರು. ಸಿದ್ದಾಚಾರಿ.ಬಿ, ಸ್ವಾಗತಿಸಿದರು. ಈಶಪ್ಪ ಮೇಟಿ ವಂದಿಸಿದರು.
Comments are closed.