ಮಗುವಿಗೆ 6 ತಿಂಗಳವರೆಗೆ ತಾಯಿ ಎದೆಹಾಲನ್ನೆ ಕುಡಿಸಿ: ಡಾ.ರಾಮಾಂಜನೇಯ
ಶಿಶು ಸಂಪೂರ್ಣವಾಗಿ ವಿಕಾಸ ಹೊಂದಿ, ನ್ಯೂಮೋನಿಯಾ, ಅತಿಸಾರಭೇದಿ, ಅಪೌಷ್ಟಿಕತೆ ಇತ್ಯಾದಿ ತೊಂದೆಗಳಿಂದ ಮಗುವನ್ನು ರಕ್ಷೀಸಲು ಹುಟ್ಟಿದ ಅರ್ಧ ಗಂಟೆಯೊಳಗೆ ತಾಯಿ ಎದೆಹಾಲನ್ನು ಕುಡಿಸಬೇಕು. ಹೆರಿಗೆಯಾದ ಮೊದಲ 03 ದಿನದಲ್ಲಿ ಬರುವ ಹಾಲಿನಲ್ಲಿ ಕೋಲಾಸ್ಟ್ರಂ ಎಂಬ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಮಗುವಿಗೆ ಎದೆಹಾಲು ಕುಡಿಸುವುದರಿಂದ ತಾಯಿಗೆ ಸ್ತನಕ್ಯಾನ್ಸರ್ ಬರುವುದಿಲ್ಲ. ಇದು ಮಗುವಿಗೆ ಸರಳವಾಗಿ ಜೀರ್ಣವಾಗುವುದಲ್ಲದೇ ಇದರಿಂದ ತಾಯಿ ಮಗುವಿನ ಬಾಂದವ್ಯ ಹೆಚ್ಚಾಗುತ್ತದೆ. ಮಗುವಿನ ಬುದ್ದಿಮಟ್ಟ ಹೆಚ್ಚಾಗುತ್ತದೆ ಮತ್ತು ತಾಯಿ ಮಗುವಿನ ಪ್ರೀತಿ ವಾತ್ಸಲ್ಯ ಹೆಚ್ಚಾಗುತ್ತದೆ. ಪ್ರತಿದಿನ 08 ರಿಂದ 10 ಬಾರಿ ತಾಯಿಯ ಎದೆಹಾಲು ನೀಡಬೇಕು. ಎದೆಹಾಲು ತಾಯಂದಿರಲ್ಲಿ ಹೆಚ್ಚಾಗಬೇಕಾದರೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಹಾಗೂ ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡು ಇತರರಿಗೂ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಆ.01 ರಿಂದ ಆ.07 ರವರೆಗೆ “ಕೊರತೆಗಳನ್ನು ಕೊನೆಗೊಳಿಸಿ: ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷ “ವಿಶ್ವ ಸ್ತನ್ಯಪಾನ ಸಪ್ತಾಹ” ಕಾರ್ಯಕ್ರಮ ಆಚರಿಸಲಾಗುತ್ತದೆ. ಇದರ ಉದ್ದೇಶ ಪ್ರತಿ ಗರ್ಭೀಣಿ ಭಾಣಂತಿಯರಿಗೆ, ಶಿಶುವಿಗೆ ಎದೆಹಾಲು ಕುಡಿಸುವ ಕುರಿತು ಅರಿವು ಮೂಡಿಸುವುದಾಗಿದೆ. ಭಾರತ ಹಳ್ಳಿಗಳ ದೇಶ, ಹಳ್ಳಿಗಳು ಅಭಿವೃದ್ಧಿಯಾದರೇ ದೇಶ ಅಭಿವೃದ್ಧಿಯಾದಂತೆ, ಹಳ್ಳಿಯಲ್ಲಿ ವಾಸಮಾಡುವ ಪ್ರತ್ರಿಯೊಬ್ಬ ತಾಯಂದಿರು ಇದರ ಬಗ್ಗೆ ತಿಳಿದುಕೊಂಡು ಇತರರಿಗೂ ತಿಳಿಸಬೇಕೆಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಎನ್.ಎಫ್.ಹೆಚ್.ಎಸ್ ಪ್ರಕಾರ ತಾಯಿಯ ಎದೆಹಾಲು ಕುಡಿಸುವವರ ಸಂಖ್ಯೆ ಕಡಿಮೆ ಇರುವುದು ಸಮೀಕ್ಷೆಯಿಂದ ಕಂಡುಬಂದಿರುತ್ತದೆ. ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ “ವಿಶ್ವ ಸ್ತನ್ಯಪಾನ ಸಪ್ತಾಹ” ಕಾರ್ಯಕ್ರಮ ಆಚರಿಸಿ, ಅರಿವು ಮೂಡಿಸಲಾಗುತ್ತದೆ. ಸೌಲಭ್ಯಮಟ್ಟದ ಚಟುವಟಿಕೆಗಳು, ಸಮುದಾಯ ಮಟ್ಟದ ಚಟುವಟಿಕೆಗಳು, ಸಾಮೂಹಿಕ ಜಾಗೃತಿ ಮೂಡಿಸುವ ಚಟುವಟಿಕೆಗಳು ನಿರಂತರ ಮೇಲ್ವಿಚಾರಣೆ ಮಾಡುವುದರ ಮುಖಾಂತರ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ಕಾರ್ಯ ಕ್ಷೇತ್ರದ ಎಲ್ಲಾ ಆಶಾ, ಅಂಗನವಾಡಿ ಕಾರ್ಯಕರ್ತೆರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ, ಮಾಹಿತಿಯನ್ನು ನೀಡುತ್ತಾರೆ. ಎಲ್ಲಾ ತಾಯಂದಿರು ಈ ಮಾಹಿತಿಯನ್ನು ಚಾಚು ತಪ್ಪದೇ ಪಾಲಿಸಬೇಕೆಂದು ತಿಳಿಸಿದರು.
ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಮಹೇಶ ಉಮುಚಗಿ ಅವರ ಡೆಂಗ್ಯೂ ಖಾಯಿಲೆ ನಿಯಂತ್ರಣ, ಅಸಾಂಕ್ರಾಮಿಕ ರೋಗಗಳ ಕುರಿತು, ಆರ್.ಸಿ.ಹೆಚ್ ಕಾರ್ಯಕ್ರಮ ಹಾಗೂ ಕ್ಷಯರೋಗ ನಿರ್ಮೂಲನೆ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಗಂಗಮ್ಮ ಅವರು ಮಾತನಾಡಿ, ಎದೆಹಾಲು ಕುಡಿಸುವುದರಿಂದ ತಾಯಿಗೆ ಮತ್ತು ಮಗುವಿಗೆ ಆಗುವ ಅನುಕೂಲತೆ ಬಗ್ಗೆ ಹಾಗೂ ಎದೆಹಾಲು ನೀಡುವ ವಿಧಾನಗಳ ಬಗ್ಗೆ ಹಾಗೂ ಕುಷ್ಠರೋಗ ಪತ್ತೆಹಚ್ಚುವ ಅಭಿಯಾನ ಕುರಿತು ವಿವರವಾಗಿ ಮಾತನಾಡಿದರು.
*ಕಿರುನಾಟಕ ಮೂಲಕ ಜಾಗೃತಿ:* ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮದಲ್ಲಿ ಗವಿಸಿದ್ದೇಶ್ವರ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕಿರುನಾಟಕ ಮಾಡುವುದುರ ಮೂಲಕ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ನಮ್ಮ ಕ್ಲಿನಿಕ್‌ನ ವೈದ್ಯಾಧಿಕಾರಿಗಳಾದ ಡಾ.ನಿವೇದಿತಾ, ಶಾಲಾ ಶಿಕ್ಷಕರಾದ ಲಕ್ಷ್ಮೀಬಾಯಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಲ್.ವಿ.ಸಜ್ಜನ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಗರ್ಭೀಣಿಯರು, ಬಾಣಂತಿಯರು ಕಾರ್ಯಕ್ರದಲ್ಲಿ ಭಾಗವಹಿಸಿದ್ದರು.
****
Comments are closed.