ಕರ್ನಾಟಕ ಸರ್ವೋದಯ ಮಂಡಳದ ಜಿಲ್ಲಾ ಘಟಕದ ಪದಾಧಿಕಾರಿಗಳ ಅಯ್ಕೆ

Get real time updates directly on you device, subscribe now.

karnataka_sarvodaya_mandala_koppal

ಕೊಪ್ಪಳ
ನಗರದ ಪ್ರವಾಸಿ ಮಂದಿರದಲ್ಲಿ ಗಾಂಧೀಜಿ ಚಿಂತನೆಗಳ ಹೊತ್ತ ಅಖಿಲ ಭಾರತ ಸರ್ವೋದಯ ಮಂಡಳದ ಕರ್ನಾಟಕ ಸರ್ವೋದಯ ಮಂಡಳದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಸಭೆ ಜರುಗಿತು.
ಕರ್ನಾಟಕ ಸರ್ವೋದಯ ಮಂಡಳದ ರಾಜ್ಯಘಟಕದ ಕಾರ್ಯದರ್ಶಿಗಳಾದ ವೈ. ಸಿ. ದೊಡ್ಡಯ್ಯನವರು ಪ್ರಾಸ್ತಾವಿಕ ನಾತುಗಳನ್ನಾಡಿದರು. ಇದೇ ಸಮಯದಲ್ಲಿ ಕೊಪ್ಪಳ ಜಿಲ್ಲಾ ಘಟಕ ರಚನೆಯಾಯಿತು. ಸದಸ್ಯರೆಲ್ಲಾ ಅವಿರೋಧವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಕೊಪ್ಪಳ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿ ಡಾ.ಕೆ.ಬಿ.ಬ್ಯಾಳಿ ಅಧ್ಯಕ್ಷರಾಗಿ ಪ್ರೊ ಬಿ.ಸಿ.ಐಗೋಳ ಉಪಾಧ್ಯಕ್ಷರಾಗಿ ವೀರಣ್ಣ ನಿಂಗೋಜಿ, ಡಾ.ಬಸವರಾಜ ಅಯೋಧ್ಯ, ಸಂಚಾಲಕರಾಗಿ ಡಾ.ಶರಣಬಸಪ್ಪ ಕೋಲ್ಕಾರ, ಕೋಶಾಧ್ಯಕ್ಷರಾಗಿ ಸೋಮಪ್ಪ ಯಲಬುರ್ಗಾ, ಕಾರ್ಯದರ್ಶಿಯಾಗಿ ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್ , ಮಾಧ್ಯಮ ಪ್ರತಿನಿಧಿಗಳಾಗಿ ನಾಗರಾಜನಾಯಕ ಡೊಳ್ಳಿನ, ಪಂಪಾರೆಡ್ಡಿ ಅರಳಿಹಳ್ಳಿ ತಾಲೂಕುವಾರು ಸಹಕಾರ್ಯದರ್ಶಿಗಳಾಗಿ ರಾಮಣ್ಣ ಶ್ಯಾವಿ ಕೊಪ್ಪಳ ತಾಲೂಕು, ನಟರಾಜ್ ಸೋನಾರ್ ಕು?ಗಿ ತಾಲೂಕು, ಮಧುಸೂಧನ ಕನಕಗಿರಿ ತಾಲೂಕು, ಮೇಘರಾಜ ಕುಕನೂರು ತಾಲೂಕು, ಹನುಮಂತಪ್ಪ ಕುರಿ ಯಲಬುರ್ಗಾ ತಾಲೂಕು, ಶರಣೆಗೌಡ ಪಾಟೀಲ ಕಾರಟಗಿ ತಾಲೂಕು, ನಾಗರತ್ನ ಗಂಗಾವತಿ ತಾಲೂಕು, ಏಳು ತಾಲೂಕುಗಳಿಗೂ ಸಹಕಾರ್ಯದರ್ಶಿಗಳು. ಸದಸ್ಯರನ್ನಾಗಿ ಪ್ರಾಣೇಶ ಪೂಜಾರ, ಬಸವರಾಜ ಸವಡಿ, ಆನಂದರ್ತೀರ್ಥ ಪ್ಯಾಟಿ, ಪ್ರಕಾಶಗೌಡ ಎಸ್.ಯು, ದುರ್ಗಾದಾಸ ಯಾದವ, ಮಹಾಬಳೇಶ್ವರ ಸಜ್ಜನ, ಡಾ.ಕೆ,ಶರಣಪ್ಪ ನಿಡಶೇಸಿ, ಡಾ.ಜೀವನಸಾಬ್ ಬಿನ್ನಾಳ, ಹನುಮಂತಪ್ಪ ಕುರಿ, ಹೇಮಂತಪ್ಪ ಬಡಿಗೇರ, ದಯಾನಂದ ಸಾಗರ ಪಾಟೀಲ
ಈ ಸಂಧರ್ಭದಲ್ಲಿ ಸರ್ವೋದಯ ಮಂಡಳದ ಧೇಯೋದ್ದೇಶಗಳು, ಮಾಡಬೇಕಾದ ಕಾರ್ಯಕ್ರಮ, ಮತ್ತು ಸದಸ್ಯತ್ವದ ಕುರಿತು ಚರ್ಚಿಸಲಾಯಿತು. ಮಹಾತ್ಮಾ ಗಾಂಧೀಜಿಯವರ ಆದರ್ಶ, ಸರಳತೆ, ವಿಚಾರ ಧಾರೆಗಳನ್ನು ತಿಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು ಮಹಾತ್ಮ ಗಾಂಧೀಜಿಯವರ ಕುರಿತು ಕವಗಳನ್ನು ಡಾ.ಕೆ.ಬಿ.ಬ್ಯಾಳಿ, ಶೇಖರಗೌಡ ಮಾಲಿಪಾಟೀಲ ವಾಚನ ಮಾಡಿದರು. ಡಾ.ಶರಣಬಸಪ್ಪ ಕೋಲ್ಕಾರ ನಿರೂಪಿಸಿದರು, ನಾಗರಾಜನಾಯಕ ಡೊಳ್ಳಿನ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: