ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಾದ್ಯಮ ಹಬ್ಬ-ಕೊಪಣ ಮೀಡಿಯಾ ಫೆಸ್ಟ್-2024

Get real time updates directly on you device, subscribe now.

ನಾಳೆಯಿಂದ ಕೊಪಣ ಮೀಡಿಯಾ ಫೆಸ್ಟ್-2024
ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಮಾದ್ಯಮ ಹಬ್ಬ

ಕೊಪ್ಪಳ : ಬಹುತ್ವ ಮೀಡಿಯಾ ಹೌಸ್, ಬಹುತ್ವ ಬಳಗ ಕೊಪ್ಪಳ ನೇತೃತ್ವದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಕೊಪ್ಪಳ ವಿಶ್ವವಿದ್ಯಾಲಯ, ಸಮೂಹನ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ವಿವಿಧ ಕಾಲೇಜುಗಳ ಸಹಯೋಗದಲ್ಲಿ  ಕಿರ್ಲೋಸ್ಕರ್  ಪೆರಸ್  ಇಂಡಸ್ಟ್ರಿ ಯವರ ಸಹಕಾರದೊಂದಿಗೆ   ಮೊದಲ ಬಾರಿಗೆ ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗಾಗಿ ಕೊಪಣ ಮೀಡಿಯಾ ಫೆಸ್ಟ್ ಎನ್ನುವ ಮಾಧ್ಯಮ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಿ.೨೪ ಮತ್ತು ೨೫ರಂದು ಕಾರ್ಯಕ್ರಮಗಳು ನಡೆಯಲಿವೆ.
ಮೊದಲನೆ ದಿನದ ಸ್ಪರ್ದೆಯ ಕಾರ್ಯಕ್ರಮ ಬುಧವಾರ ೨೪ರಂದು ಬೆಳ್ಳಗ್ಗೆ ೧೧.೦೦ ಗಂಟೆಗೆ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉಧ್ಘಾಟನೆಯನ್ನು ಕೊಪ್ಪಳ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಅವರು ನೆರವೇರಿಸುವರು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಡೇಯ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮ್ ಎಲ್.ಅರಸಿದ್ದಿ ಭಾಗವಹಿಸಲಿದ್ದಾರೆ.


ಕಾರ್ಯಕ್ರಮದ ಅತಿಥಿಗಳಾಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಮೀಡಿಯಾ ಕ್ಲಬ್ ಅಧ್ಯಕ್ಷರಾದ ರವೀಂದ್ರ ಬಿ.ಕೆ ಹಾಗೂ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಸವರಾಜ್ ಗುಡ್ಲಾನೂರರವರು ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ.ಗಣಪತಿ ಲಮಾಣಿ ವಹಿಸುವರು.
ಮೊದಲನೇ ದಿನದಂದು ವಿದ್ಯಾರ್ಥಿಗಳಿಗೆ ಸುದ್ದಿ ನಿರೂಪಣೆ, ವರದಿಗಾರಿಕೆ, ನುಡಿಚಿತ್ರ, ಕೊಲ್ಯಾಜ್, ಫೋಟೋಗ್ರಾಫಿ, ಕ್ರೀಯಾಶೀಲ ನಟನೆ ಮತ್ತು ಕ್ವಿಜ್ ಸ್ವರ್ಧೇಗಳು ನಡೆಯಲಿವೆ. ಸ್ಪರ್ಧೆಗಳ ತೀರ್ಪುಗಾರರಾಗಿ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಛಾಯಾಗ್ರಾಹಕರು, ನಿರ್ದೇಶಕರು ಭಾಗವಹಿಸಲಿದ್ದಾರೆ.
ಎರಡನೇಯ ದಿನದ ವೇದಿಕೆಯ ಕಾರ್ಯಕ್ರಮವು ನಗರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ದಿ.೨೫ ಗುರವಾರದಂದು ನಡೆಯಲಿದ್ದು, ಕಾರ್ಯಕ್ರಮದ ಉಧ್ಘಾಟನೆಯನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಕೆ ರವಿ ರವರು ನರೆವೇರಿಸುವರು. ವಿಧ್ಯಾರ್ಥಿಗಳ ಛಾಯಚಿತ್ರ ಪ್ರದರ್ಶನವನ್ನು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ರವರು, ಜಿಲ್ಲಾ ಪತ್ರಿಕೆಗಳ ಪ್ರದರ್ಶನದವನ ಕರ್ನಾಟಕ ಮಾದ್ಯಮ ಅಕಾಡಮಿಯ ಅಧ್ಯಕ್ಷರಾದ ಆಯಿಷಾ ಖಾನಂ ಅವರು ಉದ್ಘಾಟನೆ ಮಾಡುವರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷರಾದ ಶಿವಾನಂದ ತಗಡೂರವರು ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿನಿರ್ದೇಶಕರಾದ ಮಂಜುನಾಥ ಡೊಳ್ಳಿನ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾರ್ಚಾರ್ಯರಾದ ತಿಮ್ಮಾರಡ್ಡಿ ಮೇಟಿ, ಅಳವಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾರ್ಚಾರ್ಯ ಗವಿಸಿದ್ದಪ್ಪ ಮುತ್ತಾಳ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಾಳರವರು ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಬಹುತ್ವ ಮೀಡಿಯಾ ಹೌಸ್‌ನ ಹೆಚ್.ವಿ. ರಾಜಾಬಕ್ಷಿ ರವರು ವಹಿಸಿಕೊಳ್ಳುವರು. ಕಾರ್ಯಕ್ರಮದಲ್ಲಿ ಎರಡು ಗೋಷ್ಠಿಗಳು ನಡೆಯಲಿದ್ದು ಮೊದಲನೆಯ ಗೋಷ್ಠಿಯಲ್ಲಿ ನವ್ಯ ಮಾದ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿವೃದ್ದಿ ಕಲ್ಪನೆ ಕುರಿತು ಜಿ.ಎನ್.ಮೋಹನರವರು ಮಾತನಾಡಲಿದ್ದಾರೆ. ಗೋಷ್ಠಿಯಲ್ಲಿ ಪ್ರಾಚಾರ್ಯರಾದ ಡಾ. ಜಾಜಿ ದೇವೇಂದ್ರಪ್ಪ, ಪ್ರಾದ್ಯಾಪಕರಾದ ಡಾ.ನರಸಿಂಹ ಗುಂಜಳ್ಳಿ, ಅತಿಥಿ ಉಪನ್ಯಾಸಕರಾದ ತಾಯಪ್ಪ ಮರ್ಚಡ್, ಬಸವರಾಜ್ ಕರುಗಲ್, ಮುರಳಿ, ರಾಘವೇಂದ್ರ ಜಂಗಲಿ ಭಾಗವಹಿಸಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ ಎಐ ಪ್ರಸ್ತುತ ಆಯಾಮಗಳು ಕುರಿತು ಶ್ರೀಮತಿ ಆಯಿಷಾ ಖಾನುಂ ಅಧ್ಯಕ್ಷರು ಕರ್ನಾಟಕ ಮಾದ್ಯಮ ಅಕಾಡೆಮಿ ಬೆಂಗಳೂರು ಮಾತನಾಡಲಿದ್ದಾರೆ. ಗೋಷ್ಠಿಯಲ್ಲಿ ಪ್ರಾಚಾರ್ಯರಾದ ಭಜರಂಗಬಲಿ, ಪ್ರಾದ್ಯಾಪಕರಾದ ರಾಕೇಶ್ ತಾಳಿಕೋಟಿ, ಕರಿಗೋಳಿ, ಅತಿಥಿ ಉಪನ್ಯಾಸಕರಾದ ರಂಗನಾಥ ಕೋಳೂರು, ಲೋಕೇಶ್, ಕಲೀಮುಲ್ಲಾ ಖಾದ್ರಿ ಭಾಗವಹಿಸಲಿದ್ದಾರೆ.
ಸಂಜೆ ೪:೩೦ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕುಲಪತಿಗಳಾದ ಡಾ.ಬಿ.ಕೆ.ರವಿ, ಹಿರಿಯ ಪತ್ರಕರ್ತ ಜಿ.ಎನ್. ಮೋಹನ್, ಕರ್ನಾಟಕ ಮಾದ್ಯಮ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಆಯೀಷಾ ಖಾನುಂ , ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ , ಮಾನವ ಸಂಪನ್ಮೂಲ & ಸಾಮಾನ್ಯ ಆಡಳಿತ ವಿಭಾಗದ ಮುಖ್ಯಸ್ಥ ಪಿ.ನಾರಾಯಣ, ವಿದ್ಯಾನಿಕೇತನ ಸಮೂಹ ಸಂಸ್ಥೆಯ ಅಧ್ಯಕ್ಷರಾದ ನೆಕ್ಕಂಟಿ ಸೂರಿಬಾಬು ಹಾಗು ಉದ್ಯಮಿ ಶ್ರೀನಿವಾಸ ಗುಪ್ತಾ, ಮಾದ್ಯಮ ಅಕಾಡೆಮಿಯ ಸದಸ್ಯರಾದ ಕೆ.ನಿಂಗಜ್ಜ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಬಹುತ್ವ ಬಳಗದ ರಾಜು ಬಿ.ಆರ್ ವಹಿಸಿಕೊಳ್ಳಲಿದ್ದಾರೆ. ಸಮಾರಂಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಸಿಂಡಿಕೇಟ್ ಸದಸ್ಯರಿಗೆ ಮತ್ತು ಸಾಧಕ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರಾದ ಸಿರಾಜ್ ಬಿಸರಳ್ಳಿ, ರಾಜಾಬಕ್ಷಿ ಎಚ್.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!