ತುಮಕೂರಿನಲ್ಲಿ ನಡೆದ ಮಾಧ್ಯಮ ಹಬ್ಬದಲ್ಲಿ ಸಾಧನೆ
ಕೊಪ್ಪಳ ಕಾಲೇಜಿನ ವಿದ್ಯಾರ್ಥಿಗಳಿಗೆ ಬಹುಮಾನ
ಕೊಪ್ಪಳ: ಈಚೆಗೆ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಮಾಧ್ಯಮ ಹಬ್ಬದ ವಿವಿಧ ಸ್ಪರ್ಧೆಗಳಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮೂರು ಬಹುಮಾನಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಮಾಧ್ಯಮ ಹಬ್ಬದಲ್ಲಿ ನಡೆದ ಪಿಟಿಸಿ ಸ್ಪರ್ಧೆಯಲ್ಲಿ ಕಾಲೇಜಿನ ಬಿಎ ನಾಲ್ಕನೇ ಸೆಮೆಸ್ಟರ್‌ನ ಸಚಿನ್ ಭಜಂತ್ರಿ ಪ್ರಥಮ ಸ್ಥಾನ, ಸುದ್ದಿ ಬರವಣಿಗೆ ಸ್ಪರ್ಧೆಯಲ್ಲಿ ಬಿಬಿಎ ಎರಡನೇ ಸೆಮೆಸ್ಟರ್‌ನ ಪ್ರಕಾಶ ಲ್ಯಾವಕ್ಕಿ ದ್ವಿತೀಯ ಸ್ಥಾನ ಹಾಗೂ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಿಎಸ್‌ಸಿ ಆರನೇ ಸೆಮೆಸ್ಟರ್‌ನ ಆನಂದ ಚಹ್ವಾಣ ತೃತೀಯ ಸ್ಥಾನ ಪಡೆದು ನಗದು ಬಹುಮಾನ, ಪಾರಿತೋಷಕ ಹಾಗೂ ಪ್ರಮಾಣಪತ್ರಗಳನ್ನು ಗಳಿಸಿದ್ದಾರೆ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಬಸವರಾಜ ಕರುಗಲ್ ಮಾರ್ಗದರ್ಶನ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ತಿಮ್ಮಾರಡ್ಡಿ ಮೇಟಿ ಶ್ಲಾಘಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿರ್ವಹಣಾಶಾಸ್ತ್ರದ ಮುಖ್ಯಸ್ಥ ಶಿವನಾಥ.ಇ.ಜಿ, ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಡಿ.ಎಚ್.ನಾಯಕ, ದೈಹಿಕ ನಿರ್ದೇಶಕ ಮಂಜುನಾಥ ಆರೆಂಟ್ನೂರು, ಅರ್ಥಶಾಸ್ತ್ರ ವಿಭಾಗದ ಹಿರಿಯ ಅತಿಥಿ ಉಪನ್ಯಾಸಕ ಡಾ.ಸಣ್ಣದೇವೇಂದ್ರಸ್ವಾಮಿ ಮತ್ತಿತರರು ಇದ್ದರು.
Comments are closed.