ಕವಿತೆ ಜೀವಂತ ಬದುಕಿನ ಮುಕ್ತಕ-ಅಂಜಲಿ ಬೆಳಗಲ್
ಗಂಗಾವತಿ- “ಬದುಕು-ಬರಹ ವ್ಯತಿರಿಕ್ತವಾದರೆ ಅಭಿವ್ಯಕ್ತಿಗೆ ಹೆಚ್ಚು ಮಹತ್ವ ದೊರೆಯಲಾರದು.ಬರಹ ಬದುಕಿನೊಂದಿಗೆ ಬೇಕು ಎಂಬ ತತ್ವವನ್ನು ಪಾಲಿಸುತ್ತಿರುವೆ.ಬದುಕಿನುದ್ದಕ್ಕೂ ಕಂಡುಂಡ ಅನುಭವಗಳೇ ಕವಿತೆಗಳಾಗಿವೆ.ಶೋಷಿತರ,ತುಳಿತಕ್ಕೊ ಳಗಾದವರ ಪರವಾಗಿ ಬರೆಯಬೇಕು.ಹೆಣ್ಣಿನ ತಲ್ಲಣಗಳು ನನ್ನ ಕವಿತೆಯ ಜೀವಾಳ. ಅಕ್ಷರ ವಂಚಿತ ಜನಾಂಗದ ಸಂಕಟಗಳು ಅಕ್ಷರದ ಮೂಲಕ ಅಭಿವ್ಯಕ್ತಿಯಾಗಬೇಕು.” ಎಂದು ವಿಜಯನಗರದ ಕವಯಿತ್ರಿ ಅಂಜಲಿ ಬೆಳಗಲ್ ಹೇಳಿದರು.ಅವರು ಇಂದು ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ನಡೆದ ಕವಿ-ಕಾವ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಜಲಿ ಬೆಳಗಲ್ ರವರ ‘ಬಂದೂಕು ಹಿಡಿದ ಕೈಗಳು’ ಕೃತಿಯ ಪರಿಚಯವನ್ನು ವಿದ್ಯಾರ್ಥಿ ವಿನಾಯಕ ನೆರವೇರಿಸಿದರು.
ಅಧ್ಯಕ್ಷತೆಯನ್ನು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕಿ ಡಾ.ಮುಮ್ತಾಜ್ ಬೇಗಂ ವಹಿಸಿ ಮಾತನಾಡಿದರು.
ಸಭೆಯಲ್ಲಿ ಅಂಜಲಿ ಅವರು ಕವಿತೆಗಳನ್ನು ವಿದ್ಯಾರ್ಥಿಗಳು, ಉಪನ್ಯಾಸಕರು ವಾಚಿಸಿದರು. ಅಂಜಲಿ ಬೆಳಗಲ್ ರವರನ್ನು ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಲೇಖಕ ವಸಂತಕುಮಾರ್, ಉಪನ್ಯಾಸಕರಾದ ಡಾ.ಬಸವರಾಜ ಗೌಡನ ಬಾವಿ, ಎ.ಕೆ.ಮಹೇಶಕುಮಾರ ಉಪಸ್ಥಿತರಿದ್ದರು.
ಪ್ರಾರ್ಥನೆ ಶಿವಪುತ್ರಮ್ಮ , ಸ್ವಾಗತ ಪ್ರಶಾಂತ, ಪ್ರಾಸ್ತಾವಿಕ ಉಪನ್ಯಾಸಕ ಗುಂಡೂರು ಪವನ್ ಕುಮಾರ್, ವಂದನಾರ್ಪಣೆ ಹೊನ್ನೂರು ಸಾಬ್, ನಿರೂಪಣೆ ಕುಮಾರಿ ಹೀನಾ ನೆರವೇರಿಸಿದರು.
ಅಂಜಲಿ ಬೆಳಗಲ್ ಮಾತನಾಡಿ,ಬರಹ ಬದುಕಿನಂತಿರಬೇಕು ಎನ್ನುವ ತತ್ವವನ್ನು ಪಾಲಿಸಿಕೊಂಡು ಬಂದಿದ್ದೇನೆ. ಬರಹ ಮತ್ತು ಬದುಕು ವ್ಯತಿರಿಕ್ತವಾದರೆ ಅಭಿವ್ಯಕ್ತಿಗೆ ಹೆಚ್ಚು ಮಹತ್ವ ದೊರೆಯಲಾರದು. ಬದುಕಿನ ಕಂಡುಂಡ ಅನುಭವಗಳನ್ನು ಕಾವ್ಯವಾಗಿಸಿದ್ದೇನೆ. ಕವಿತೆಗಳು ಜೀವಂತ ಬದುಕಿನ ಮುಕ್ತಕಗಳು ಎಂದರು
Comments are closed.