ವಿಜಯನಗರ ಕಾಲುವೆಗಳಿಗೆ ತುಂಗಭದ್ರಾ ನೀರು :;ಸಂಸದ ರಾಜಶೇಖರ ಹಿಟ್ನಾಳ  ಚಾಲನೆ

Get real time updates directly on you device, subscribe now.

ಕಾಲುವೆಗೆ ಹರಿದ ತುಂಗಭದ್ರೆ: ರೈತರ, ಗ್ರಾಮಸ್ಥರ ಮೊಗದಲ್ಲಿ ಸಂತಸ

ವಿಜಯನಗರ ಕಾಲುವೆಗಳಿಗೆ ತುಂಗಭದ್ರಾ ನೀರು :;ಸಂಸದ ರಾಜಶೇಖರ ಹಿಟ್ನಾಳ  ಚಾಲನೆ

: ವಿಜಯನಗರ ಕಾಲುವೆಗಳಿಗೆ ಜುಲೈ 19ರಿಂದ ತುಂಗಭದ್ರಾ ನೀರು ಹರಿಸುವುದಕ್ಕೆ ಸಂಸದರಾದ  ಕೆ.ರಾಜಶೇಖರ ಹಿಟ್ನಾಳ ಅವರು ಜು.19ರಂದು ಸ್ಟಾಟರ್ ಬಟನ್ ಒತ್ತುವುದರ ಮೂಲಕ ಚಾಲನೆ ನೀಡಿದರು.
ನೀರು ಬಿಡುಗಡೆ ಹಿನ್ನೆಲೆಯಲ್ಲಿ
ತುಂಗಭದ್ರಾ ಜಲಾಶಯದ ಆಣೆಕಟ್ಟಿನ ಮೇಲಿನ ಎಡದಂಡೆ ಮುಖ್ಯ ಕಾಲುವೆಯ 9 & 10 ನೀರಾವರಿ ಗೇಟಿನ ಸ್ಟಾಟರ್ ಬಳಿಯಲ್ಲಿ ಬೆಳಗ್ಗೆ ಹಬ್ಬದ ಸಂಭ್ರಮ ಕಂಡುಬಂದಿತು. ತಳಿರು ತೋರಣಗಳಿಂದ‌ ಯಂತ್ರವನ್ನು ಶೃಂಗರಿಸಲಾಗಿತ್ತು.
ಪಕ್ಷದ ಮುಖಂಡರು, ಮುನಿರಾಬಾದ್ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು, ಭಾರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳ ಸಮ್ಮುಖದಲ್ಲಿ ಸಂಸದರು, ಡ್ಯಾಮ್
ನೀರು ಬಿಡುಗಡೆಗೆ ವಿದ್ಯುಕ್ತ ಚಾಲನೆ ನೀಡುತ್ತಿದ್ದಂತೆ ‘ತುಂಗಭದ್ರಾ ತಾಯಿಗೆ ಜಯವಾಗಲಿ’ ಎನ್ನುವ ಘೋಷಣೆಗಳು ಮೊಳಗಿದವು.
ಉತ್ತಮ ಮಳೆಯಿಂದಾಗಿ ದಿನೇದಿನೆ ತುಂಬುತ್ತಿರುವ ತುಂಗಭದ್ರಾ ನೀರು ಕಾಲುವೆಗೆ ಹರಿಯುತ್ತಿದ್ದಂತೆ ಸೇರಿದ್ದ ರೈತರು  ಮತ್ತು ವಿವಿಧ ಗ್ರಾಮಸ್ಥರ ಮೊಗದಲ್ಲಿ ಸಂತಷ ಕಂಡುಬಂದಿತು. ನೆರೆದಿದ್ದ ಕೆಲವು ರೈತರು, ಗ್ರಾಮಸ್ಥರು ಕಾಲುವೆಗೆ ಹರಿಯುತ್ತಿದ್ದ ನೀರಿನ ಭೋರ್ಗರೆತದ ದೃಶ್ಯಗಳನ್ನು ಮೊಬೈಲನಲ್ಲಿ ಸೆರೆಹಿಡಿದುಕೊಂಡರು.
ಇದೇ ವೇಳೆ ಸಂಸದರು ಸುದ್ದಿಗಾರರೊಂದಿಗೆ ಮಾತನಾಡಿ, ಮುಂಗಾರು-ಹಂಗಾಮಿನಲ್ಲಿ ಮಳೆ ತೀವ್ರತೆ ಹೆಚ್ಚಾಗಿರುವುದರಿಂದ ಜಲಾನಯನ ಪ್ರದೇಶದಲ್ಲಿ ಒಳಹರಿವು ಹೆಚ್ಚಾಗುತ್ತಿದ್ದು, ಐದಾರು ದಿನಗಳಲ್ಲಿ ಡ್ಯಾಂ ತುಂಬುವ ಸಾಧ್ಯತೆಯಿದೆ. ಭಗವಂತನ ಕೃಪೆಯಿಂದ ಇದೇ ರೀತಿ ಮುಂದುವರಿದರೆ ರೈತರ ಎರಡೂ ಬೆಳೆಗಳಿಗೆ ನೀರು ಸಿಗಲಿದ್ದು, ಇದೊಂದು ಸಂತಸದ ಸಂಗತಿಯಾಗಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಹಾಗೂ ವಿವಿಧ ಕಾಲುವೆಗಳಿಗೆ ಜುಲೈ 19ರಿಂದ ನೀರು ಬಿಡಲಾಗಿದೆ. ಉಳಿದಂತೆ ಇತರ ಕಾಲುವೆಗಳಿಗೆ ನಿಗದಿತ ವೇಳಾಪಟ್ಟಿಯಂತೆ ನೀರು ಬಿಡಲಾಗುತ್ತಿದೆ. ಪಾಪಯ್ಯ ಟನಲ್ ಮೂಲಕ ರಾಯಚೂರಿಗೆ ನೀರು ಹೋಗುವ ಕಾಲುವೆ ಗಾತ್ರ ಹೆಚ್ಚಿಸುವ ಕುರಿತಂತೆ ಐಸಿಸಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುನಿರಾಬಾದ ತುಂಗಭದ್ರ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಿದ (ಕಾಡಾ) ಅಧ್ಯಕ್ಷರಾದ ಹಸನ್ ಸಾಬ್ ನಬೀಬ್ ಸಾಬ್ ದೋಟಿಹಾಳ, ಕೊಪ್ಪಳ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಮುಖಂಡರಾದ ಜನಾರ್ಧನ ಹುಲಗಿ, ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಬಾರಿ ನೀರಾವರಿ ನಿಗಮ ನಿಯಮಿತದ  ಅಧೀಕ್ಷಕ ಅಭಿಯಂತರರಾದ
ಎಲ್ ಬಸವರಾಜ್, ತಾಂತ್ರಿಕ ಸಹಾಯಕರಾದ ಬಸಪ್ಪ ಜಾನಕರ, ವಡ್ಡರಹಟ್ಟಿಯ ಅಭಿಯಂತರರಾದ ಎಂ.ಎಸ್.ಗೋಡೇಕರ, ಮುನಿರಾಬಾದ್ ಅಭಿಯಂತರ ಗಿರೀಶ್, ಅಗಳಕೇರಾ ಅಭಿಯಂತರರಾದ ಅಮರೇಶ
ಸೇರಿದಂತೆ ಇನ್ನೀತರ ಅಧಿಕಾರಿಗಳು, ಹಲವು ಗಣ್ಯರು, ಜನಪ್ರತಿನಿಧಿಗಳು, ರೈತ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!