ನ್ಯಾ.ಚಂದ್ರಶೇಖರ ಸಿ ಅವರ ನಿರ್ದೇಶನದಂತೆ ನ್ಯಾ. ಎಂ.ಆರ್.ಒಡೆಯರ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ
ನಿರ್ಗತಿಕ ಮಹಿಳೆಯರಿಗೆ ಕಾನೂನು ಸೇವಾ ಪ್ರಾಧಿಕಾರ, ಸಖಿ-ಒನ್ ಸ್ಟಾಫ್ ಘಟಕದಿಂದ ನೆರವು
ನಿರ್ಗತಿಕ ಮತ್ತು ಮಾನಸಿಕ ಅಸ್ವಸ್ಥ, ಅನಾರೋಗ್ಯಪೀಡಿತ ಇಬ್ಬರು ಮಹಿಳೆಯರಿಗೆ ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಸಖಿ–ಒನ್ ಸ್ಟಾಫ್ ಸೆಂಟರನಿAದ ನೆರವು ಸಿಕ್ಕಿದೆ.
ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಚಂದ್ರಶೇಖರ ಸಿ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆ ನಡೆಯಿತು.
ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಲಕಾರಿ ರಾಮಪ್ಪ ಒಡಯರ್ ಅವರು, ಜಿಲ್ಲಾ ನ್ಯಾಯಾಲಯದ ವ್ಯವಸ್ಥಾಪಕರಾದ ಬಸಪ್ಪ ಕಟ್ಟೆರ್, ಮಹಿಳಾ ಪೊಲೀಸ್ ಠಾಣೆ ಕೊಪ್ಪಳದ ಆರಕ್ಷಕ ನಿರೀಕ್ಷಕರಾದ ಆಂಜನೇಯ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಅನ್ನಪೂರ್ಣ, ಜಿಲ್ಲಾಸ್ಪತ್ರೆಯ ಮನೋತಜ್ಞರಾದ ಡಾ.ಓಂಕಾರ್, ಮಹಿಳಾ ಸಬಲೀಕರಣ ಘಟಕದ ಟೆಂಡರ್ ಸ್ಪೆಷಲಿಸ್ಟ್ ಫಾತಿಮಾ, ಸಖಿ ಘಟಕದ ಆಡಳಿತ ಅಧಿಕಾರಿಗಳಾದ ಯಮುನಾ ಅವರು ಜುಲೈ 18ರಂದು ವಿಶೇಷ ಕಾರ್ಯಾಚರಣೆ ನಡೆಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಕಾರ್ಯಾಚರಣೆಯ ತಂಡದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯು ಮೊದಲಿಗೆ ಹೊಸಪೇಟೆ ರೋಡಿನ ಬೇವಿನಾಳ ಅಂಡರ್ ಗ್ರೌಂಡ್ ಬ್ರಿಡ್ಜ್ ನ ಬಳಿಗೆ ತೆರಳಿ ಅಲ್ಲಿ ಸುಮಾರು ಎರಡು ತಿಂಗಳಿAದ ರಸ್ತೆಯ ಬದಿಯಲ್ಲಿ ವಾಸವಾಗಿದ್ದ ಸ್ಥಳದ ಪರಿಶೀಲನೆ ನಡೆಸಿದರು. ಈ ಸ್ಥಳದಿಂದ ಜುಲೈ 17ರಂದು ಆ ನಿರ್ಗತಿಕ ಮಾನಸಿಕ ಅಸ್ವಸ್ಥೆ ಮಹಿಳೆಯನ್ನು ಕರೆದೊಯ್ದು ರಕ್ಷಣೆ ಮಾಡಲಾಗುತ್ತಿದೆ ಎಂದು ಸಖಿ ಘಟಕದ ಅಧಿಕಾರಿಗಳು ತಿಳಿಸಿದರು. ಬಳಿಕ ತಂಡವು ಮಹಿಳೆ ಇರುವ ಸಖಿ ಘಟಕಕ್ಕೆ ಭೇಟಿ ನೀಡಿತು. ಈ ವೇಳೆ ನ್ಯಾಯಾಧೀಶರಾದ ವಡೆಯರ್ ಅವರು ಆ ಮಹಿಳೆಯ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದರು. ಸ್ಥಳಕ್ಕೆ ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞರನ್ನು ಕರೆಸಿದರು. ಈ ಮಹಿಳೆಯ ಆರೋಗ್ಯದ ಕುರಿತು ವರದಿ ಮಾಡುವಂತೆ ವೈದ್ಯಾಧಿಕಾರಿಗಳಿಗೆ ನ್ಯಾಯಾಧೀಶರು ಆದೇಶ ಮಾಡಿದರು. ಇದೆ ವೇಳೆ ನ್ಯಾಯಾಧೀಶರು ಸ್ಥಳಕ್ಕೆ ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಆರಕ್ಷಕ ನಿರೀಕ್ಷಕರಿಗೆ ಕರೆಯಿಸಿದರು. ನಿರ್ಗತಿಕ ಮಹಿಳೆಯರ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲೆ ಮಂಡನೆ ಮಾಡುವಂತೆ ನಿರ್ದೇಶನ ನೀಡಿದರು. ಬಳಿಕ ತಂಡದ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿ ಹಿಟ್ನಾಳ ಗ್ರಾಮದತ್ತ ತೆರಳಿದರು. ಹಿಟ್ನಾಳ ಕ್ರಾಸ್ ಹೈವೇ ರಸ್ತೆಯ ಬದಿಯಲ್ಲಿ ನಿರ್ಜನ ಪ್ರದೇಶದ ಕಸದ ತೊಟ್ಟಿಯ ಪಕ್ಕದಲ್ಲಿ ಸುತ್ತಲು ನಾಲ್ಕು ಕಟ್ಟಿಗೆಗಳಿಗೆ ಹರಿದ ಬಟ್ಟೆಯಿಂದ ಸುತ್ತಿ ಮಲಗಲು ಸಾಧ್ಯವಾಗದಂತಹ ಸ್ಥಳದಲ್ಲಿ ವಾಸಿಸುತ್ತಿದ್ದ ಭಾದಿತ ಮಹಿಳೆ ಇರುವ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಣೆ ಮಾಡಿದರು. ಸುತ್ತಲಿನ ಜನರು ಅವಳ ದುಸ್ಥಿತಿ ಕಂಡು ಮರುಗಿ ಆಕೆಗೆ ನೀರಿನ ಬಾಟಲ್, ಊಟ ನೀಡುತ್ತಾರೆ. ಮಳೆ ಬಂದಾಗ ಹತ್ತಿರದ ದೇವಸ್ಥಾನದ ಬಳಿ ಅಥವಾ ಗಿಡಗಳ ಕೆಳಗೆ ಹೋಗುತ್ತಾಳೆ. ಮೂಲತಂ ಈ ಮಹಿಳೆಯು ಪೂನಾ ಜಿಲ್ಲೆಯವಳು. ಪ್ರೇಮ ವಿವಾಹವಾಗಿದ್ದು ಗಂಡನು ತೀರಿಕೊಂಡು ಸುಮಾರು ವರ್ಷಗಳಾಗಿರುತ್ತದೆ. ಗಂಡನ ಅಕಾಲಿಕ ಮರಣದಿಂದಾಗಿ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ ನಾಲ್ಕು ಮಕ್ಕಳ ಪೋಷಣೆ ಆರೈಕೆ ಹಾಗೂ ಕುಟುಂಬಸ್ಥರ ಸಹಯೋಗ ಎಲ್ಲ ಮರೆತು ಡಿಮಿಟ್ರೇಷನ್ ಹಾಗೂ ಸೈಕೋ ಟ್ರೂಮಿಕ್ ನೂನ್ಯತೆಗೆ ಒಳಗಾಗಿರುತ್ತಾರೆ ಎಂಬುದು ಪರಿಶೀಲನೆ ವೇಳೆಯಲ್ಲಿ ತಿಳಿದುಬಂದಿತು.
ಭದ್ರತೆ: ಬಾಧಿತ ಮಹಿಳೆಯರಿಗೆಉಚಿತ ವೈದ್ಯಕೀಯ ತಪಾಸಣೆ, ಮನೋಚಿಕಿತ್ಸೆ, ಪೊಲೀಸ್ ಹಾಗೂ ಜಿಲ್ಲಾ ಆಸ್ಪತ್ರೆಯ ನೆರವಿನೊಂದಿಗೆ ಕೊಪ್ಪಳದ ಸಖಿ ಘಟಕದಲ್ಲಿ ಪೋಷಣೆ ಮತ್ತು ರಕ್ಷಣೆ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ.
ತಾತ್ಕಾಲಿಕ ಆಶ್ರಯ: ಸಖಿ ಘಟಕದ ಅಧಿಕಾರಿ ಯಮುನಾ ಮತ್ತು ತಂಡದವರು ಇಬ್ಬರು ಮಹಿಳೆಯರಿಗೆ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ತಾತ್ಕಾಲಿಕ ಆಶ್ರಯಕ್ಕೆ, ವೈಯಕ್ತಿಕ ಶುಚಿತ್ವದ ಅಡಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಕ್ರಮ ವಹಿಸಿದರು.

Comments are closed.