ಮೊಹರಂ ಹುಲಿ ವೇಷಧಾರಿ ಆಕರ್ಷಕ ಕುಣಿತ
ಚಿಕ್ಕ ಜಂತಕಲ್ : ಮೊಹರಂ ಹಬ್ಬದ ಅಂಗವಾಗಿ ಹುಲಿ ವೇಷದಾರಿಗಳ ಕುಣಿತ ನೂಡುಗರನ್ನು ಆಕರ್ಷಿಸುತ್ತಿದೆ.
ಪ್ರತಿವರ್ಷ ಮೂಹರಂ ಹಬ್ಬದಲ್ಲಿಕೆಲವರು ತಮ್ಮ ದೇಹಕ್ಕೆ ಹುಲಿಯ ಹಾಗೆ ಬಣ್ಣ ಬಳಿದುಕೊಂಡು ಮೂರ್ನಾಲ್ಕು ದಿನಗಳ ಕಾಲ ಕುಣಿಯುತ್ತಾರೆ. ಹುಲಿವೇಷದಾರಿ ಹಾಗೂ ಹಲಗೆ ಬಾರಿಸುವ ಒಬ್ಬವ್ಯಕ್ತಿ ಹೀಗೆ ಇಬ್ಬರೂ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿಕುಣಿಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ.
ಈ ವೇಳೆ ಗೋಪಿ ಕಬ್ಬೇರ್ ಮಾತನಾಡಿ ವಂಶ ಪರಂಪರೆಯಿಂದ ಸುಮಾರು ವರ್ಷಗಳಿಂದ ಹುಲಿ ಕುಣಿತ ಸಾಂಪ್ರದಾಯ ಆಚರಿಸಿಕೊಂಡು ಬರುತ್ತಿದ್ದೇವೆ, ನಮ್ಮಣ್ಣ ಪರಶುರಾಮ್ ನನ್ನ ಮಗ ವಿನೋದ್ ಈ ವರ್ಷ ಹುಲಿ ವೇಷ ಧರಿಸಿದ್ದಾರೆ. ಕೆಲವರು ಮೂಹರಂ ಹಬ್ಬದಲ್ಲಿ ತಮ್ಮ ಬೇಡಿಕೆಗಳು ಈಡೇರಿದರೆ ಹುಲಿವೇಷ ಧರಿಸುತ್ತೇನೆ ಎಂದು ದೇವರಿಗೆ ಬೇಡಿಕೊಂಡಿರುತ್ತಾರೆ. ಬೇಡಿಕೆ ಈಡೇರಿದವರು ಹಬ್ಬದಲ್ಲಿಹುಲಿವೇಷ ಧರಿಸುತ್ತಾರೆ ಎನ್ನಲಾಗಿದೆ ಎಂದರು. ಒಟ್ಟಿನಲ್ಲಿಹುಲಿವೇಷದಾರಿಯ ಕುಣಿತ ನೂಡುವುದು ಒಂದು ಚಂದ ಎನ್ನುವ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
Comments are closed.