ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಹಬ್ಬಗಳ ಪಾತ್ರ ಹಿರಿದು- ಡಾ.ರಹಮತ್ ತರೀಕೆರೆ

Get real time updates directly on you device, subscribe now.

ಭಾರತ ಅದರಲ್ಲೂ ಕರ್ನಾಟಕದಲ್ಲಿ ಮೊಹರಂ ಆಚರಣೆಯು ಧರ್ಮ, ರಾಜಕೀಯ ಎಲೆಗಳನ್ನು ಮೀರಿ ಬೆಳೆದು ನಿಂತು ಒಂದು ಜನತೆಯ ಧರ್ಮವಾಗಿ ಮಾರ್ಪಟ್ಟಿರುವುದು ಮನುಷ್ಯ ಸಂಬಂಧಗಳ ಬೆಸಿಗೆಯಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯ ಭಾವೈಕ್ಯತೆಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು, ಅವರು ಬಿನ್ನಾಳ ಗ್ರಾಮದ ಮೊಹರಂ ಸಾಂಸ್ಕೃತಿಕ ಸಂಭ್ರಮದ ಕತ್ತಲ್ ರಾತ್ರಿಯಂದು ಏರ್ಪಡಿಸಿದ್ದ ಗೀಗೀಪದಗಳ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಕೃತಿ ಚಿಂತಕರು, ವಿಮರ್ಶಕರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ ರಹಮತ್ ತರೀಕೆರೆ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀಯುತ ಕಳಕಪ್ಪ ಕಂಬಳಿ ,ವೇ ಮೂ ಚನ್ನಯ್ಯ ಹೀರೇಮಠ, ಮಲ್ಲಯ್ಯ ಪೂಜಾರ, ಸಿದ್ದಲಿಂಗಯ್ಯ ಹಿರೇಮಠ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ದ್ರಾಕ್ಷಾಯಿಣಿ ಸಂಗಪ್ಪ ತಹಶೀಲ್ದಾರ್. ಶ್ರೀಮತಿ ಚೆನ್ನವ್ವ ವೀರಪ್ಪ ಮುತ್ತಾಳ, ಶ್ರೀಮತಿ ಕಮಲಾಕ್ಷಿ ಪತ್ರೆಪ್ಪ ಕಂಬಳಿ,ಮಹ್ಮದಸಾಬ ಕರಿಮಸಾಬ ವಾಲಿಕಾರ, ಶಂಕರಪ್ಪ ಕಂಬಳಿ, ಶರಣಪ್ಪ ಹಾದಿಮನಿ, ಜಗದೀಶ್ ಚಟ್ಟಿ, ಖಾಸಿಂಸಾಬ ವಾಲಿಕಾರ, ಫಕೀರಸಾಬ ಮ್ಯಾಗಳಮನಿ,ಮಾಬುಸಾಬ ಕಡೆಮನಿ, ರಾಜಾಸಾಬ್ ಮ್ಯಾಗಳಮನಿ ಇತರರು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯರಾದ ಡಾ ಜೀವನಸಾಬ್ ವಾಲಿಕಾರ್ ಪ್ರಸ್ತವಿಕವಾಗಿ ಮಾತನಾಡಿದರು, ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀಮತಿ ಲಕ್ಷ್ಮೀಬಾಯಿ ಹಾಗೂ ಪರಶುರಾಮ್ ಬಡಿಗೇರ್ ಸಂಗಡಿಗರು ಗೀಗೀ ಪದಗಳ ಗಾಯನ ಹಾಗೂ ಕುಕನೂರು ತಾಲೂಕಿನ ಇಟಗಿಯ ಶ್ರೀ ಬಾಬುಸಾಬ್ ಮತ್ತು ಸಂಗಡಿಗರು ರಿವಾಯಿತಿ ಪದಗಳಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟಿದ್ದು ವಿಶೇಷವಾಗಿತ್ತು.

Get real time updates directly on you device, subscribe now.

Comments are closed.

error: Content is protected !!
%d bloggers like this: