ಸುದ್ದಿ ಪತ್ರಿಕೆಗಳು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿವೆ-ಕೆ. ನಿಂಗಜ್ಜ

Get real time updates directly on you device, subscribe now.

ಕನಕಗಿರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಪತ್ರಿಕಾ ದಿನಾಚರಣೆ ಆಚರಿಸಲಾಯಿತು.  

ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮ ಅಕಾಡೆಮಿ ಸದಸ್ಯ  ಕೆ. ನಿಂಗಜ್ಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಿಜಿಟಲ್ ಯುಗದಲ್ಲಿರುವ ನಾವಿಂದು ಕೈಯಲ್ಲಿರುವ ಮೊಬೈಲ್, ಕಂಪ್ಯೂಟರ್ ಗಳಿಂದ ಸುದ್ದಿಯನ್ನು ಓದಬಹುದು. ಆದರೆ ಕೆಲವರು ದಿನ ಪತ್ರಿಕೆಗಳನ್ನು ಓದಿದರೇನೇ ಅವರ ದಿನ ಪೂರ್ಣವಾಗುವುದು. ಅಂತಹವರಿಗೆ ಮೊಬೈಲ್ ಅಥವಾ ಟಿವಿಯಲ್ಲಿ ಸುದ್ದಿಯನ್ನು ನೋಡುವುದು ರುಚಿಸುವುದಿಲ್ಲ. ಆಧುನಿಕ ಕಾಲ ಘಟ್ಟದಲ್ಲಿದ್ದರೂ ಮಾಹಿತಿಗಾಗಿ ಹೆಚ್ಚಿನವರು ದಿನ ಪತ್ರಿಕೆಗಳನ್ನೇ ಅವಲಂಬಿಸಿರುತ್ತಾರೆ. ಈ ಕಾರಣದಿಂದಲೇ ಈ ಸುದ್ದಿ ಪತ್ರಿಕೆಗಳು ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿವೆ. ಆದರೆ ಒಂದು ಕಾಲದಲ್ಲಿ ಈಗಿನಷ್ಟು ಪ್ರತಿಕೋದ್ಯಮವು ಬೆಳೆದಿರಲಿಲ್ಲ. ಕೆಲವೇ ಕೆಲವು ಪತ್ರಿಕೆಗಳಿದ್ದ ಸಮಯದಲ್ಲಿ ಪುಟಗಳು ಹೆಚ್ಚಿರಲಿಲ್ಲ. ಈ ಪತ್ರಿಕೆಗಳ ಮೂಲಕವೇ ಜನರು ದೇಶದ ಹಾಗುಹೋಗುಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿದ್ದರು. ಎಂದು ಹೇಳಿದರು. ಮತ್ತು ಪತ್ರಿಕಾ ದಿನಾಚರಣೆಯ ಧ್ಯೇಯ ವಾಕ್ಯವಾದ ಸಮಾಜದಲ್ಲಿ ಪತ್ರಿಕೋಧ್ಯಮದ ಪಾತ್ರದ ಕುರಿತು ವಿದ್ಯಾರ್ಥಿಗಳಿಗೆ ಹೇಳಿದರು.
ಬಳಿಕ ಪತ್ರಿಕೋದ್ಯಮದ ಅತಿಥಿ ಉಪನ್ಯಾಸಕರು ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಉಪ ಸಂಪಾದಕರಾದ ರವೀಂದ್ರ ಎಸ್. ತೆಳಗಡೆ ಮಾತನಾಡಿ, ಮಾಧ್ಯಮಗಳು ಸಮಾಜದ ಸ್ವಾಸ್ಥ್ಯ ಕಾಪಾಡುವವರು. ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಮಹತ್ವದ ಹೊಣೆಗಾರಿಕೆ. ಪತ್ರಕರ್ತರು ಒತ್ತಡಕ್ಕೆ ಒಳಗಾಗದೆ ಸಂಯಮವನ್ನು ಕಾಯ್ದುಕೊಳ್ಳಬೇಕು. ಪತ್ರಕರ್ತರು ಸ್ವಾಸ್ಥ್ಯ ಸಮಾಜದ ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಪತ್ರಕರ್ತರು ತಮ್ಮ ಬದುಕಿನಲ್ಲಿ ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳ ಬೇಕು. ಇದರಿಂದ ದೈನಂದಿನ ಬದುಕಿನ ಒತ್ತಡ ಕಡಿಮೆಯಾಗಿ ಆರೋಗ್ಯ ಕಾಪಾಡಿಕೊಳ್ಳಬಹುದು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಬಜರಂಗ ಬಲಿ ಅವರು ವಹಿಸಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡುವುದೇ ಪತ್ರಿಕೋದ್ಯಮದ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಇದೇ ವೇಳೆ ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಕೆ. ನಿಂಗಜ್ಜ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ.ವೀರೇಶ, ಮರ್ವಿನ್ ಡಿಸೋಜ್, ತಬ್ಬಸುಮ್ ಆರಾ, ಡಾ. ಆಶಿಕಾ ಎಚ್.ಸಿ, ಉಪನ್ಯಾಸಕರಾದ ಗೋಪಾಲರೆಡ್ಡಿ ಮಾದಿನಾಳ, ಎಸ್.ಕೆ ಖಾದ್ರಿ ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!