ಅರ್ಚಕರಿಗೆ ಹಾಗೂ ಧಾರ್ಮಿಕ ಸಂಸ್ಥೆಗಳ ಅಧ್ಯಕ್ಷ, ಸದಸ್ಯರಿಗೆ ಕಾನೂನು ಅರಿವು ತರಬೇತಿ ಕಾರ್ಯಾಗಾರ
ಗಂಗಾವತಿ: ಸ್ನೇಹ ಸಂಸ್ಥೆಯಿಂದ ಅರ್ಚಕರಿಗೆ ಹಾಗೂ ಧಾರ್ಮಿಕ ಸಂಸ್ಥೆಗಳ ಅಧ್ಯಕ್ಷ ಸದಸ್ಯರಿಗೆ ಕಾನೂನು ಅರಿವು ತರಬೇತಿ ಗಂಗಾವತಿ ನಗರದ ಕನ್ನಡ ಸಾಹಿತ್ಯ ಪರಿ?ತ್ ಭವನದಲ್ಲಿ ಶುಕ್ರವಾರದಂದು ಸ್ನೇಹ ಸಂಸ್ಥೆ ನೇತ್ರತ್ವದಲ್ಲಿ ಸಾರ್ವಜನಿಕ ವಲಯದಲ್ಲಿರುವ ಅರ್ಚಕರಿಗೆ ಹಾಗೂ ಧಾರ್ಮಿಕ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ ಸದಸ್ಯರುಗಳಿಗೆ ಒಂದು ದಿನದ ಕಾನೂನು ತರಬೇತಿ ಕಾರ್ಯಗಾರ ಜರಗಿತು.
ಕಾರ್ಯಗಾರವನ್ನು ಉಪತಹಶೀಲ್ದಾರ್ ಮಹಾಂತೇಶ್‌ಗೌಡ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಅರ್ಚಕರು ಕಾನೂನು ಚೌಕಟ್ಟು ವ್ಯಾಪ್ತಿಯಲ್ಲಿ ತಮ್ಮ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಬೇಕು. ವಿಶೇ?ವಾಗಿ ಬಾಲ್ಯವಿವಾಹ ನಿ?ಧ ಕಾಯ್ದೆ ಕುರಿತಂತೆ, ದೇವದಾಸಿ ಪದ್ಧತಿ ನಿರ್ಮೂಲನೆ ಸಂಬಂಧಿಸಿದಂತೆ ಕಾನೂನಿನ ಅರಿವು ಬೆಳೆಸಿಕೊಳ್ಳಬೇಕು. ೧೮ ವ?ದ ಒಳಗಿನ ವಯೋಮಿತಿಯ ಯಾವುದೇ ವಿವಾಹ ಸಾಮೂಹಿಕ ವಿವಾಹಗಳಲ್ಲಿ ಕಂಡುಬಂದಲ್ಲಿ ಅರ್ಚಕರೆ ಹೊಣೆಗಾರಿಕೆ ಆಗುತ್ತಾರೆ ಎಂದು ತಿಳಿಸಿದರು.
ಅಂಗನವಾಡಿ ಸಂಸ್ಥೆಯ ಹಿರಿಯ ಮೇಲ್ವಿಚಾರಕಿ ಶರಣಮ್ಮ ಕೊಪ್ಪಳ ಜಿಲ್ಲೆಯಲ್ಲಿ ಹಿಂದೆ ಜರುಗಿದ ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚಕರು ಹಾಗೂ ಸಂಯೋಜಕರು ಇದುವರೆಗೆ ಕಾನೂನು ಹೋರಾಟ ನಡೆಸುವ ಪರಿಸ್ಥಿತಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದಂತೆ ವಧು ೧೮ ವ? ಮೇಲ್ಪಟ್ಟು ವರ ೨೧ ವ? ಮೇಲ್ಪಟ್ಟು ದೃಢೀಕರಣ ಪ್ರಮಾಣ ಪತ್ರದೊಂದಿಗೆ ವಿವಾಹ ಅವಕಾಶ ಕಲ್ಪಿಸಬಹುದು ಎಂದು ಕಾನೂನು ಕುರಿತು ಸಮಗ್ರ ಮಾಹಿತಿ ನೀಡಿದರು.
ಪತ್ರಕರ್ತ ಸುದರ್ಶನ ವೈದ್ಯ ಮಾತನಾಡಿ ದೇವಸ್ಥಾನಗಳಲ್ಲಿ ಕಾರ್ಯನಿರ್ವಹಿಸುವ ಅರ್ಚಕರು ದೇವರ ಸ್ವರೂಪವಾಗಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುತ್ತಾರೆ. ಅವರ ಮಾತನ್ನು ಪ್ರತಿಯೊಬ್ಬರು ನಂಬುತ್ತಾರೆ. ಇಂತಹ ಸಂದರ್ಭದಲ್ಲಿ ಯಾವುದೇ ಹಣ, ಇತರ ಆಸೆಗಳಿಗೆ ಅವಕಾಶ ನೀಡದೆ ಕಾನೂನು ಬದ್ಧವಾಗಿ ಸಾಮೂಹಿಕ ವಿವಾಹ ನಡೆಸುವಂತಾಗಬೇಕು. ದೇವದಾಸಿ ಪದ್ಧತಿ, ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾಗಿದ್ದು ಇದು ಕಾನೂನು ಬಾಹಿರವಾಗಿದೆ. ಇಂತಹ ಯಾವುದೇ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸದೆ ಕಾರ್ಯ ಪ್ರವೃತ್ತರಾಗಬೇಕೆಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಸ್ನೇಹ ಸಂಸ್ಥೆಯ ಅಧ್ಯಕ್ಷ ಟಿ. ರಾಮಾಂಜನೇಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥ ಕೆ.ವಿ ಜಯ ಉಪಸ್ಥಿತರಿದ್ದರು. ಪ್ರತಿಭಾ, ಜಯಶ್ರೀ ಸೇರಿದಂತೆ ಸದಸ್ಯರು ಪಾಲ್ಗೊಂಡಿದ್ದರು. ಗಂಗಾವತಿ ನಗರ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಅರ್ಚಕರು ದೇವಸ್ಥಾನದ ಸಮಿತಿಯ ಸದಸ್ಯರು ಸಂಯೋಜಕಿ ಪ್ರತಿಭಾ ಉಪಸ್ಥಿತರಿದ್ದರು.
Comments are closed.