ಗಂಗಾವತಿ: ಗಂಗಾವತಿಯ ಸರಕಾರಿ ಆಸ್ಪತ್ರೆಯ ಸುಪ್ರಸಿದ್ದ ವೈದ್ಯರಾದ ಡಾ|| ಈಶ್ವರ ಸವಡಿಯವರು ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ಸಂಸ್ಥೆವತಿಯಿಂದ ಪ್ರತಿವರ್ಷ ಕೊಡಮಾಡುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯಿಂದ ಡಾ. ಸವಡಿಯವರು ಭಾಜನರಾಗಿದ್ದಾರೆ. ಡಾ. ಸವಡಿಯವರ ಕಾರ್ಯತತ್ಪರತೆ, ಸೇವಾ ಮನೋಭಾವವನ್ನು ಗಮನಿಸಿ ಅತ್ಯಂತ ಪ್ರತಿಷ್ಠಿತ ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಸಿದ್ದಲಿಂಗೇಶ್ವರ ಪೂಲಬಾವಿ ತಿಳಿಸಿದ್ದಾರೆ.
ಸಂಸ್ಥೆಯ ಕೊಪ್ಪಳ ಜಿಲ್ಲೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷರಾದ ಲಿಂಗಾರೆಡ್ಡಿ ಆಲೂರ್, ಪ್ರಮುಖರಾದ ಲಿಂಗರಾಜ್ ಬೇವೂರ್, ಕೊಪ್ಪಳ ತಾಲೂಕು ಘಟಕದ ಅಧ್ಯಕ್ಷರಾದ ಕುಬೇರಪ್ಪ ಮಜ್ಜಿಗಿ, ಗಂಗಾವತಿ ತಾಲೂಕು ಘಟಕದ ಅಧ್ಯಕ್ಷರಾದ ಉಮೇಶ್ ಮಲ್ಲಾಪುರ್, ಗಂಗಾವತಿಯ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಸವರಾಜ್ ಸವಡಿ ಹಾಗೂ ಗಂಗಾವತಿ ಸಾರ್ವಜನಿಕ ಉಪವಿಭಾಗ ಆಸ್ಪತ್ರೆಯ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. ಜುಲೈ-೧೩ ರಂದು ಬೀದರನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Comments are closed.