ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆ : ಮುಖ್ಯೋಪಾಧ್ಯಾಯರಾಗಿ ಅಮರೇಶ ಕರಡಿ
ಕೊಪ್ಪಳ : ನಗರದ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಗೆ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಶಾಲೆಯ ಹಿರಿಯ ಶಿಕ್ಷಕರಾದ ಅಮರೇಶ್ ಆದಪ್ಪ ಕರಡಿ ಅಧಿಕಾರ ಸ್ವೀಕರಿಸಿದರು.![]()

ಮುಖ್ಯೋಪಾಧ್ಯಾಯರಾದ ವೆಂಕಟೇಶ್ .ಕೆ ಬಂಡಿವಡ್ಡರ್ ಅವರು ಅಮರೇಶ್ ಕರಡಿಯವರಿಗೆ ಅಧಿಕಾರ ಹಸ್ತಾಂತರಿಸಿದರು.
ನಂತರ ನೂತನ ಪ್ರಭಾರಿ ಮುಖ್ಯೋಪಾಧ್ಯಾಯ ಅಮರೇಶ್ ಕರಡಿಯವರಿಗೆ ಗವಿಮಠದ ಶ್ರೀಗಳು,ಆಡಳಿತ ಮಂಡಳಿಯವರು,
ಹಿರಿಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಶುಭಕೋರಿದರು .
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಎಂ ಕಂಬಾಳಿಮಠ. ಹಿರಿಯ ಶಿಕ್ಷಕರಾದ ಎಂ ಎನ್ ಕಮ್ಮಾರ್ , ಎಸ್ ಗುಂಡನಗೌಡ್ರು,ಆರ್ ಬಿ ಬಾಳನ ಗೌಡ್ರು, ವಿ.ಜೆ ಹಿರೇಮಠ್ ಮರಿ ಶಾಂತವೀರ ಶೆಟ್ಟರ್, ರವಿ ರಂಜಣಗಿ, ಶ್ರೀನಿವಾಸ್ ವೀರಾಪುರ, ನಾಗರಾಜ್ ಬಹದ್ದೂರ್ ಬಂಡಿ, ಕವಿತಾ ಮನು, ಎಸ್ ಪಿ ರೆಡ್ಡಿಯರ್ , ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು
Comments are closed.