ಪತ್ರಕರ್ತರ ಮಾಸಾಶನ ಹೆಚ್ಚಿಸಿದ ಮುಖ್ಯಮಂತ್ರಿಗಳಿಗೆ ಕೆಯುಡಬ್ಲ್ಯೂಜೆ ಅಭಿನಂದನೆ

Get real time updates directly on you device, subscribe now.

ಬೆಂಗಳೂರು:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಪತ್ರಕರ್ತರ ಪಿಂಚಣಿಯನ್ನು ಹೆಚ್ಚಳ ಮಾಡಿರುವುದಕ್ಕೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಪತ್ರಕರದತರ ಮಾಸಾಶನವನ್ನು 10 ಸಾವಿರದಿಂದ 12 ಸಾವಿರಕ್ಕೆ,
ಪತ್ರಕರ್ತ ಮೃತಪಟ್ಟ ಸಂದರ್ಭದಲ್ಲಿ ಕುಟುಂಬಕ್ಕೆ ನೀಡಲಾಗುತ್ತಿದ್ದ ಪಿಂಚಣಿಯನ್ನು 3 ಸಾವಿರದಿಂದ 6 ಸಾವಿರಕ್ಕೆ ಹೆಚ್ಷಿಸಿರುವುದು ಸ್ವಾಗತಾರ್ಹ ಎಂದು ಕೆಯುಡಬ್ಲ್ಯೂಜೆ ಪ್ರತಿಕ್ರಿಯಿಸಿದೆ.
ಪತ್ರಕರ್ತರ ಮಾಸಾಶನ ತ್ವರಿತ ಗತಿಯಲ್ಲಿ ಅರ್ಹರಾದ ಪತ್ರಕರ್ತರಿಗೆ ಸಿಗುವಂತೆ ಮಾಡಬೇಕು ಎಂದು ಕೆಯುಡಬ್ಲ್ಯೂಜೆ ವಿನಂತಿಸುತ್ತದೆ.

ಪ್ರಭಾಕರ್ ಗೆ ಅಭಿನಂದನೆ:
ಪತ್ರಕರ್ತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಬೇಡಿಕೆ ಈಡೇರಿಸಲು ಶ್ರಮಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರಿಗೂ ಕೆಯುಡಬ್ಲ್ಯೂಜೆ ಅಭಿನಂದನೆಗಳು.

Get real time updates directly on you device, subscribe now.

Comments are closed.

error: Content is protected !!
%d bloggers like this: