ಎಲ್‌ಐಸಿ ಪ್ರಿಮಿಯಮ್ ಮೇಲಿನ ಜಿಎಸ್.ಟಿ. ಕೇಂದ್ರಕ್ಕೆ ಒತ್ತಡ ಹೇರಲು ಸಂಸದ ರಾಜಶೇಖರ ಹಿಟ್ನಾಳರಿಗೆ ಮನವಿ

Get real time updates directly on you device, subscribe now.


ಕೊಪ್ಪಳ : ಸಾರ್ವಜನಿಕರು ತುಂಬುವ ಎಲ್‌ಐಸಿ ಪ್ರಿಮಿಯಮ್ ಮೇಲೆ ಹಾಕಲಾಗಿರುವ ಜಿ.ಎಸ್.ಟಿ.ಯನ್ನುಕೂಡಲೇ ರದ್ದುಗೊಳಿಸಲು ಲೋಕಸಭೆಯಲ್ಲಿಧ್ವನಿ ಎತ್ತಬೇಕೆಂದು ಕೊಪ್ಪಳ ಲೋಕಸಭಾ ಸದಸ್ಯರಾದರಾಜಶೇಖರ ಹಿಟ್ನಾಳ ಅವರಿಗೆಇಂದು ಕೊಪ್ಪಳದಲ್ಲಿ ಭಾರತೀಯಜೀವ ವಿಮಾ ನಿಗಮದಉದ್ಯೋಗಿ ಮತ್ತು ಪ್ರತಿನಿಧಿಗಳ ಸಂಘದಿಂದ ಮನವಿ ಪತ್ರ ಸಲ್ಲಿಸಲಾಯಿತು.
ವಿಭಾಗೀಯ ಕಾರ್ಯದರ್ಶಿಯಾದ ಕಾ.ಎಂ.ರವಿ ಮಾತನಾಡುತ್ತಾ, ತಮ್ಮ ವೈಯಕ್ತಿಕಜೀವನ ಭದ್ರತೆಗಾಗಿತುಂಬುವ ಎಲ್‌ಐಸಿ ಪ್ರಿಮಿಯಮ್ ಮೇಲೆ ಜಿ.ಎಸ್.ಟಿ ಹೇರುವುದು ಎಷ್ಟು ಸಮಂಜಸಎಂದು ಪ್ರಶ್ನಿಸಿದರು.ಈಗಾಗಲೇ ಹಲವಾರು ಬಾರಿಉದ್ಯೋಗಿ ಮತ್ತು ಪ್ರತಿನಿಧಿಗಳ ಸಂಘದಿಂದ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ.ಲೋಕಸಭಾ ಸದನದಲ್ಲಿ ಕೊಪ್ಪಳ ಲೋಕಸಭಾ ಸ್ಥಾನಕ್ಕೆ ಪ್ರತಿನಿಧಿಸುತ್ತಿರುವ ತಾವುಗಳು ಸದನದಲ್ಲಿ ಈ ಕುರಿತುಧ್ವನಿ ಎತ್ತಬೇಕೆಂದು ಮನವಿ ಪತ್ರ ಸಲ್ಲಿಸಿದರು.ಇದರಿಂದಇಡೀದೇಶದಜನತೆಗೆ ಅನುಕೂಲವಾಗುತ್ತದೆಎಂದರು.ಇನ್ನುಆದಾಯತೆರಿಗೆ ಕಡಿತಗೊಳಿಸುವ ವಿಷಯದಲ್ಲಿಜನತೆಯ ಪರವಾಗಿಧ್ವನಿ ಎತ್ತಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಲ್.ಐ.ಸಿ ನೌಕರರರಾದ ಕಾಂ.ವೀರೇಶ, ಕಾಂ.ಸಂತೋಷ, ಕಾಂ.ಹೆಚ್.ವಿ.ಪೂಜಾ, ಕಾಂ.ಮಲ್ಲಿಕಾರ್ಜುನ, ಕಾಂ.ಶೇಖರಪ್ಪ,ಕಾಂ.ಸಾಗರ ಮತ್ತು ಪ್ರತಿನಿಧಿ ಮಿತ್ರರರು, ಅಭಿವೃದ್ಧಿ ಅಧಿಕಾರಿಗಳು, ಆಡಳಿತ ಸಿಬ್ಬಂದಿ ವರ್ಗದಎಲ್ಲಾ ನೌಕರರುಈ ಸಂದರ್ಭದಲ್ಲಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: