ರಾಕೇಶ್ ಟಿಕಾಯತ್ ನೇತೃತ್ವದ ನಿಯೋಗ CM ಸಿದ್ದರಾಮಯ್ಯ ಭೇಟಿ : ಅಂತಾರಾಷ್ಟ್ರೀಯ ರೈತ ಸಮಾವೇಶವನ್ನು ಉದ್ಘಾಟಿಸುವಂತೆ ಮನವಿ
ರಾಕೇಶ್ ಟಿಕಾಯತ್ ನೇತೃತ್ವದ ರೈತ ಮುಖಂಡರ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ 2025 ರಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಆಹಾರ ಹಕ್ಕು ಮತ್ತು ಆಹಾರ ಸಾರ್ವಭೌಮತೆ ಕುರಿತ ಅಂತಾರಾಷ್ಟ್ರೀಯ ರೈತ ಸಮಾವೇಶವನ್ನು ಉದ್ಘಾಟಿಸುವಂತೆ ಮನವಿ ಮಾಡಿತು.
ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ನಡೆಯಲಿರುವ ಈ ಸಮಾವೇಷ ಮೂರನೆಯದ್ದಾಗಿದೆ. ಈ ಹಿಂದೆ ಯುರೋಪ್ ಮತ್ತು ಅಮೆರಿಕದಲ್ಲಿ ಈ ಸಮಾವೇಷಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಮೂರನೇ ಸಮಾವೇಶ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ನಡೆಸಲು ದೇಶದ ಸರ್ವ ರೈತ ಸಂಘಟನೆಗಳ, ರೈತ ಹೋರಾಟಗಳ ಸಮನ್ವಯ ಸಮಿತಿ ಒಮ್ಮತದಿಂದ ತೀರ್ಮಾನಿಸಿದೆ. ಈ ತೀರ್ಮಾನವನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿಗಳಿಗೆ ತಿಳಿಸಿತು.
ನಿಯೋಗದಲ್ಲಿ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಪ್ರೊ.ರವಿವರ್ಮಕುಮಾರ್ ಸೇರಿ ದಲಿತ ಸಂಘಟನೆಗಳ ಪರವಾಗಿ ಮಾವಳ್ಳಿ ಶಂಕರ್ ಸೇರಿ ಅಂಕಣಕಾರ, ನಾಟಕಕಾರ ಬಿ.ಚಂದ್ರೇಗೌಡ ಸೇರಿ 30 ಮಂದಿ ಇದ್ದರು.
Comments are closed.