ಗಾಂಜಾ ಮಾರಾಟ ಮಾಡುವ ವ್ಯಕ್ತಿಯ ಬಂದನ

Get real time updates directly on you device, subscribe now.

Koppal ಇತ್ತೀಚಿಗೆ ಮುನಿರಾಬಾದ್ ಪೊಲೀಸ್ ತಾಣಾ ವ್ಯಾಪ್ತಿಯ ಕನಕಾಪುರ ಸೀಮಾದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಂಚರ ಸಮಕ್ಷಮದಲ್ಲಿ ಆರೋಪಿತನಾದ ಸೋಮಶೇಖರ ನಾಯ್ಕ (ಆ) ಸೋಮಪ್ಪ ತಂದೆ ಶಂಕರನಾಯ್ಕ ಚವ್ಹಾಣ ವಯಾ: 27 ಸಾ: ಕನಕಾಪುರ ತಾಂಡಾ ತಾ: ಜಿ. ಕೊಪ್ಪಳ ಈತನ ಮೇಲೆ ದಾಳಿ ಮಾಡಿ ಆತನು ಮಾರಾಟ ಮಾಡುತ್ತಿದ್ದ. 549 ಗ್ರಾಂ ಗಾಂಜಾ ಮತ್ತು ನಗದು ಹಣ 530 ರೂಪಾಯಿಗಳನ್ನು ವಶಪಡಿಸಿಕೊಂಡು ಎನ್.ಡಿ.ಪಿ.ಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂದನಕ್ಕೆ ಕಳಿಸಲಾಗಿದೆ.

  • ಮೇಲ್ಕಂಡ ಎನ್.ಡಿ.ಪಿ.ಎಸ್ ಪ್ರಕರಣವನ್ನು ಬೇಧಿಸಲು  ಶ್ರೀಮತಿ ಯಶೋಧಾ ವಂಟಗೊಡಿ ಐ.ಪಿ.ಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ,  ಶರಣಬಸಪ್ಪ ಸುಬೇದಾರ್ ಡಿ.ಎಸ್.ಪಿ ಕೊಪ್ಪಳ ರವರ ಮಾರ್ಗದರ್ಶನದಲ್ಲಿ  ಮಹಾಂತೇಶ ಸಜ್ಜನ್ ವೃತ್ತ ನಿರೀಕ್ಷಕರು ಕೊಪ್ಪಳ ಗ್ರಾಮೀಣ ವೃತ್ತ ನೇತೃತ್ವದಲ್ಲಿ  ಅಮರೇಗೌಡ ಪಿ.ಎಸ್‌.ಐ (ಕಾ&ಸು) ಮುನಿರಾಬಾದ್,  ಶ್ರೀಶೈಲರಾವ್ ಕುಲಕರ್ಣಿ, ಪಿ.ಎಸ್.ಐ (ತನಿಖೆ), ಸಿಬ್ಬಂದಿಯವರಾದ ಮಹೇಶ ಸಜ್ಜನ್, ಅಶೋಕ, ಶಿವಕುಮಾರ, ಉದಯಾನಂದ, ಅಣ್ಣಪ್ಪ, ಮಹಮ್ಮದ್ ರಫಿ, ಶರಣಪ್ಪ ಮತ್ತು ಜೀಪ್ ಚಾಲಕರಾದ ವೆಂಕಟೇಶ, ಈರಪ್ಪರವರು ಸದರಿ ಪ್ರಕರಣವನ್ನು ಬೇದಿಸಲು ಶ್ರಮಿಸಿದ್ದು, ಗಾಂಜಾ ಪ್ರಕರಣವನ್ನು ಜೇವಿಸಿ ಆರೋಪಿಯನ್ನು ಬಂದನ ಮಾಡಿದ ಬಗ್ಗೆ  ಎಸ್.ಪಿ. ಕೊಪ್ಪಳರವರು ಶ್ಲಾಘನೆ ಮಾಡಿ ಅಧಿಕಾರಿ & ಸಿಬ್ಬಂದಿ ವರ್ಗದವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ‌

Get real time updates directly on you device, subscribe now.

Comments are closed.

error: Content is protected !!
%d bloggers like this: