ಸುಲಿಗೆ ಮಾಡಿದ ಅಪರಾಧಕ್ಕಾಗಿ ಅಪರಾಧಿಗಳಿಗೆ ಕಠಿಣ ಜೈಲು ಶಿಕ್ಷೆ

Get real time updates directly on you device, subscribe now.

ಕೊಪ್ಪಳ ನಗರದಲ್ಲಿ ಸುಲಿಗೆ ಮಾಡಿದ ಅಪರಾಧಕ್ಕಾಗಿ ಅಪರಾಧಿಗಳಿಗೆ ಕಠಿಣ ಜೈಲು ಶಿಕ್ಷೆ ಪ್ರಕಟವಾಗಿದೆ.
2022ರ ಆಗಸ್ಟ್ 27ರಂದು ಬೆಳಿಗ್ಗೆ 8.20 ಗಂಟೆ ಸುಮಾರಿಗೆ ಕೊಪ್ಪಳ ನಗರದ ಪದಕಿ ಲೇಔಟ್ ಕಡೆಗೆ 1ನೇ ಆರೋಪಿ ನಭಿ ಅಲಿ ತಂದೆ ಗರಿಬ್ ಹುಸೇನ್ ಸಾ/ಅಕಲೋಸ್ ರಾಜ್ಯ ಮಹರಾಷ್ಟ್ರ ಇತನು ತನ್ನ ಮೋಟಾರ ಸೈಕಲ್ ಸಂ: ಕೆಎ-17/ಈಜಿ-7076 ನೇದರ ಮೇಲೆ 2ನೇ ಆರೋಪಿ ಜಹಾರ ಅಬ್ಬಾಸ್ ತಂದೆ ಮೋಶಿನ ಖಾನ್ ಸಾ/ ಟಿಪ್ಪುನಗರ ಹರಿಹರ ಜಿ/ದಾವಣೆಗೆರೆ ಕರ್ನಾಟಕ ಇತನನ್ನು ಹಿಂಬದಿ ಸವಾರನಾಗಿ ಕೂಡಿಸಿಕೊಂಡು ಪರ‍್ಯಾಧಿದಾರರಾದ ರಮಾಗಂಡ ಮೋಹನರಾವ ಅಣ್ಣಿಗೇರಿ ಸಾ: ಚಂದ್ರಪ್ಪ ಲೇಔಟ್ ಕೊಪ್ಪಳ ಇವರು ಆಂಜಿನೇಯ ಗುಡಿಗೆ ಹೋಗುತ್ತಿರುವಾಗ ಈ 1 ಮತ್ತು 2ನೇ ಆರೋಪಿತರು ಪರ‍್ಯಾಧಿದಾರರಿಗೆ ಜಡೆ ಹಿಡಿದು ಎಳೆದಾಡಿ 2ನೇ ಆರೋಪಿ ಜಹಾರ ಅಬ್ಬಾಸ ಇತನು ಮಹಿಳೆಯ ಕೊರಳಿನಲ್ಲಿದ್ದ 40 ಗ್ರಾಂತೂಕದ ಮಾಂಗಲ್ಯ ಸರವನ್ನು ಹಾಗೂ 50 ಗ್ರಾಂ ತೂಕದ ಚಪಲಾ ಸರ ಬಲವಂತವಾಗಿ ಕಿತ್ತುಕೊಂಡು ಮೋಟಾರ್ ಸೈಕಲ್ ಮೇಲೆ ಪರಾರಿಯಾಗಿ 3ನೇ ಆರೋಪಿ ಬಾಹರ ಎಂಬುವವರಿಗೆ ಸುಲಿಗೆ ಮಾಡಿದ ಬಂಗಾರವನ್ನು ಕೊಟ್ಟಿದ್ದಾಗ 3ನೇ ಆರೋಪಿ ಬಾಹರ ಇತಳು ಈ ಬಂಗಾರವನ್ನು ಮಧ್ಯಪ್ರದೇಶದ ಭೂಪಾಲಗೆ ತೆಗೆದುಕೊಂಡು ಹೋಗಿ ಬಂಗಾರದ ಆಭರಣದ ಅಂಗಡಿ ಮಾಲಿಕನಾದ ದೀಪಕ ಜೈನ್ ಇತನಿಗೆ ಮಾರಾಟ ಮಾಡಿ, ಈ ಸುಲಿಗೆ ಮಾಡಿದ ಬಂಗಾರದಲ್ಲಿ 40 ಗ್ರಾಂ ಮಾಂಗಲ್ಯ ಸರವನ್ನು ತನಿಖಾಧಿಕಾರಿಯಾದ ಕೊಪ್ಪಳ ನಗರ ಪೊಲೀಸ್ ಠಾಣೆಯ ಪಿಐ ಸಂತೋಷ ಹಳ್ಳೂರ ಮತ್ತು ಪಿಎಸ್‌ಐ ಉಮರಾಭಾನು ಅವರು ಜಪ್ತಿ ಮಾಡಿಕೊಂಡು ನ್ಯಾಯಾಲಯದಲ್ಲಿ ಪಿಐ ಮತ್ತು ಪಿಎಸ್‌ಐ ಅವರು 1 ಮತ್ತು 3ನೇ ಆರೋಪಿ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಮೇರೆಗೆ ಗೌರವಾನ್ವಿತ ನ್ಯಾಯಾಧೀಶರಾದ ಮಹಾಂತೇಶ ಎಸ್ ದರಗದ ಅವರು ಆರೋಪಿತರ ಮೇಲಿರುವ ಕಳ್ಳತನ ಮತ್ತು ಸುಲಿಗೆ ಆರೋಪಗಳು ಸಾಭೀತಾಗಿವೆ ಎಂದು 2024ರ ಜೂನ್ 26ರಂದು 03 ವರ್ಷ 06 ತಿಂಗಳು ಜೈಲು ಶಿಕ್ಷೆ ಮತ್ತು ರೂ. 10,000 ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಕೊಪ್ಪಳ ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ವಸಂತ ಅವರು ಸರ್ಕಾರದ ಪರವಾಗಿ ಪ್ರಕರಣ ನಡೆಸಿ ವಾದ ಮಂಡಿಸಿರುತ್ತಾರೆ ಎಂದು ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕರ ಕಚೇರಿಯ ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!