ಪತ್ರಕರ್ತ ಶರಣಪ್ಪ ಕುಂಬಾರ ನಿಧನಕ್ಕೆ ಕಂಬನಿಮಿಡಿದ ಪತ್ರಕರ್ತರು
ಕುಷ್ಟಗಿ ಜು ೬ ತಾಲ್ಲೂಕಿನ ಹನಮನಾಳ ಗ್ರಾಮದಲ್ಲಿ ವಾಸಿಸುವ ಕೃಷಿ ಪ್ರಿಯ ಪತ್ರಿಕೆಯ ಸಂಪಾದಕರಾಗಿದ್ದ ಯುವ ಪತ್ರಕರ್ತ ಶರಣಪ್ಪ ಕುಂಬಾರ (43) ನಿನ್ನೆ ರಾತ್ರಿ ಲೋ ಬಿಪಿ ಯಿಂದ ಮೃತರಾಗಿದ್ದು ಇಂದು ಅವರ ಸ್ವ ಗ್ರಾಮದಲ್ಲಿ ಅಂತಿಮ ಸಂಸ್ಕಾರ ನೆರವೇರಿತು.
ಕಂಬನಿ ಮಿಡಿದ ಪತ್ರಕರ್ತರು
ಕೃಷಿ ಪ್ರಿಯ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶರಣಪ್ಪ ಕುಂಬಾರ ಅವರು ಓರ್ವ ಪುತ್ರ ಹಾಗೂ ಪತ್ನಿ ಮತ್ತು ಸಹೋದರ ಸಹೋದರಿಯರನ್ನು ಮತ್ತು ಅಪಾರ ಬಂದು ಬಳಗ ಅಗಲಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ಪತ್ರಿಕಾ ಮಿತ್ರರು ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಪ್ಪಳದ ಬದಲಾವಣೆ ಪತ್ರಿಕೆಯ ಸಂಪಾದಕ ಮಂಜುನಾಥ ಗೊಂಡಬಾಳ ಮಾತನಾಡಿ ಶರಣಪ್ಪ ಕುಂಬಾರ ಇವರ ಕುಟುಂಬಕ್ಕೆ ನೈತಿಕ ಬೆಂಬಲ ನೀಡುವದು ಹಾಗೂ ಸರಕಾರದ ಮಟ್ಟದಲ್ಲಿ ಮತ್ತು ಸಂಘಟನೆಯ ಮಟ್ಟದಲ್ಲಿ ಆರ್ಥಿಕ ನೆರವು ಒದಗಿಸುವ ಪ್ರಮಾಣಿಕ ಪ್ರಯತ್ನ ಮಾಡುವ ಮುಖಾಂತರ ನಾವೆಲ್ಲರೂ ಶ್ರಮಿಸೋಣ ಎಂದು ನುಡಿದರು.
ನಂತರ ಮುಖೇಶ ನಿಲೋಗಲ್ ಮಾತನಾಡಿ ಅವರ ಅಗಲಿಕೆ ನಮಗೆಲ್ಲ ನೋವು ತಂದಿದೆ.ಅವರ ಸಮಾಜಮುಖಿ ಬರವಣಿಗೆಯಿಂದ ಹೆಸರಾಗಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಕಾ.ಪ.ಸ.ಕಾ.ಕಾ.ಸಮಿತಿಯ ರವಿಂದ್ರ ಬಾಕಳೆ ಮಾತನಾಡಿ ಪತ್ರಕರ್ತರು ತಮ್ಮ ಆರೋಗ್ಯ ಲೆಕ್ಕಿಸದೆ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಕಾರಣ ಮೊದಲು ಕುಟುಂಬಕ್ಕೆ ಆದ್ಯತೆ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವ ಅಗತ್ಯೆತೆ ಇದೆ ಎಂದು ಮೃತರ ಗುಣಗಾನ ಮಾಡಿದರು.
ಶರಣಯ್ಯ ಮುದಗಲ್ ಮಾತನಾಡಿ ಶರಣಪ್ಪ ಕುಂಬಾರ ಅವರ ಒಡನಾಟದ ಬಗ್ಗೆ ಮತ್ತು ಅವರ ಕ್ರೀಯಾಶಿಲತೆಯನ್ನು ಪ್ರಶಂಸೆ ಮಾಡಿದರು.
ಪತ್ರಕರ್ತ ಸೊಪ್ಪಿಮಠ, ಶರಣಪ್ಪ ಗುಮಗೇರಿ, ಸಂಘದ ಅಧ್ಯಕ್ಷ ಅನಿಲ್ ಆಲ್ ಮೇಲ್ .ಅನಿಲ್ ಕಮ್ಮಾರ ಮಾತನಾಡಿ ಕಂಬನಿ ಮಿಡಿದು ಮೃತರ ಕುಟುಂಬಕ್ಕೆ ನೆರವಿನ ಹಸ್ತ ಚಾಚಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಮೌನಾಚರಣೆ ಸಂಧರ್ಬದಲ್ಲಿ ಸಂಘದ ಕಾರ್ಯದರ್ಶಿ ಬಸವರಾಜ ಪಲ್ಲೇದ. ಪರಶಿವ ಮೂರ್ತಿ , ಸಂಗಮೇಶ ಲೂತಿಮಠ, ಸಂಗಮೇಶ ಮುಸಿಗೇರಿ, ಬೀಮನಗೌಡ ,ಶರಣಪ್ಪ ಲೈನದ, ಪವಾಡೆಪ್ಪ , ತಿರುಪತಿ , ಚಂದ್ರಶೇಖರ ಕಂಬಾರ, ಬಸವರಾಜ ಗಾಣಗೇರ.ಪ್ರಭುಜಹಗೀರದಾರ,ಶ್ಯಾಮೀದ್ ತಾವರಗೇರಿ, ಸೇರಿದಂತೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ಮೃತರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.
ವಾರ್ತಾಧಿಕಾರಿಗಳಿಂದ ಸಂತಾಪ
ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿಯವರು ಮೃತರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿ ತೀವ್ರ ಸಂತಾಪ ಸೂಚಿಸಿದ್ದಾರೆ.
Comments are closed.