ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಬೃಹತ್ ಕಟ್ಟಡವು ಲೋಕಾರ್ಪಣೆ

Get real time updates directly on you device, subscribe now.

ದಿ :01-07-2024 ಸೋಮುವಾರದಂದು ಬೆಳಿಗ್ಗೆ 10-00 ಗಂಟೆಗೆ ಶ್ರೀಮಠದ ಶೈಕ್ಷಣಿಕ ಸೇವೆಗೆ ಮುನ್ನುಡಿ ಬರೆದ ಶ್ರೀ ಮರಿಶಾಂತವೀರ ಮಹಾಶಿವಯೋಗಿಗಳವರ 57ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ  5000 ವಿದ್ಯಾರ್ಥಿಗಳಿಗಾಗಿ ನಿರ್ಮಾಣಗೊಂಡ “ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ” ಪೂರ್ಣಗೊಂಡ ಕಟ್ಟಡದ ಉದ್ಘಾಟನಾ ಸಮಾರಂಭ ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಬೃಹತ್ ಕಟ್ಟಡವು ಲೋಕಾರ್ಪಣೆಗೊಳ್ಳಲಿದೆ , 5000 ವಿದ್ಯಾರ್ಥಿಗಳಿಗಾಗಿ ನಿರ್ಮಾಣಗೊಂಡ “ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ” ಪೂರ್ಣಗೊಂಡ ಕಟ್ಟಡದ ಉದ್ಘಾಟನಾ ಸಮಾರಂಭ ಎಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.

ಬೆಳಿಗ್ಗೆ 9:45 ಗಂಟೆಯಿಂದ 10:30 ಗಂಟೆಯವರೆಗೆ ಸ್ಥಳ : ಶ್ರೀ ಗವಿಮಠದ ಆವರಣ

ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಸೌಲಭ್ಯಗಳು

1) ಸುಸಜ್ಜಿತ 130 ವಿದ್ಯಾರ್ಥಿ ಕೊಠಡಿಗಳು 2) 20 ಸುಂದರವಾದ ಡಾರ್ಮೆಟರಿಗಳು

3) ವಿಶಾಲವಾದ ಪ್ರಸಾದ ನಿಲಯ

4) ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ ಅಡುಗೆ ಕೋಣೆ

ತರಕಾರಿ ಕತ್ತರಿಸುವ ಯಂತ್ರ

> 1 ತಾಸಿಗೆ 1500 ಚಪಾತಿಗಳನ್ನು ತಯಾರಿಸುವ ಯಂತ್ರ

ಅನ್ನ, ಸಾಂಬಾರ, ಪಲ್ಯ, ಸಿಹಿಯನ್ನು ತಯಾರಿಸಲು 12 ಸ್ಟೀಮ್ ಕುಕ್ಕಿಂಗ್

> 10 ನಿಮಿಷದಲ್ಲಿ 2000 ಇಡ್ಲಿಗಳನ್ನು ತಯಾರಿಸುವ 4 ಸ್ಟೀಮ್ ಕುಕ್ಕಿಂಗ್

5) ಮಕ್ಕಳ ಆರೈಕೆಗಾಗಿ ಆಸ್ಪತ್ರೆ

6) ಕಂಪ್ಯೂಟರ್ ಲ್ಯಾಬ್

7) ಆಡಿಟೋರಿಯಮ್ ಹಾಲ್

8) ವಿಶಾಲವಾದ ಆಟದ ಮೈದಾನ

9) ಅತ್ಯಾಧುನಿಕ ಶೌಚಾಲಯ ಹಾಗೂ ಸ್ನಾನಗೃಹಗಳು

10) ಶುದ್ಧ ಕುಡಿಯುವ ನೀರು

 

 

ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಸಂಸ್ಥಾನ ಶ್ರೀ ಗವಿಸಿದ್ದೇಶ್ವರ ಮಠ, ಕೊಪ್ಪಳ.

ಅನ್ನ, ಅಕ್ಷರ, ಅರಿವು, ಆರೋಗ್ಯ, ಆಧ್ಯಾತ್ಮ ದಾಸೋಹದ ಪುಣ್ಯಕ್ಷೇತ್ರ ಶ್ರೀ ಗವಿಮಠ, ಶ್ರೀಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಶ್ರೀ ರುದ್ರಮುನಿ ಶಿವಯೋಗಿಗಳಿಂದ ಬೆಳಗಿದ ಶ್ರೀ ಗವಿಮಠದ ಜ್ಯೋತಿ 11ನೇ ಪೀಠಾಧಿಪತಿಗಳಾದ ಪರಮ ತಪಸ್ವಿ ಶ್ರೀ ಗವಿಸಿದ್ದೇಶ್ವರರ ಕಾಲಕ್ಕೆ ಪ್ರಜ್ವಲವಾಗಿ ಬೆಳಗತೊಡಗಿತು. 16ನೇ ಪೀಠಾಧಿಪತಿಗಳಾದ ಶ್ರೀ ಮರಿಶಾಂತವೀರ ಶಿವಯೋಗಿಗಳು ವಿದ್ಯಾಪ್ರೇಮಿಗಳು, ಸಂಸ್ಕೃತ ಪಂಡಿತರು. ಆಯುರ್ವೇದ ಪರಿಣಿತರು. ಶ್ರೀಗಳ ಮಾತೃಹೃದಯದ ಮಾತುಗಳು “ನಾನು ಕಾಶಿಯಲ್ಲಿ ಓದಿ ಸಂಸ್ಕೃತ ಪಂಡಿತನೆನೊ ಆದೆ. ಆದರೆ ನಾನು ಇರುವ ನಾಡು ಅಕ್ಷರದ ಬರದಿಂದ ಬಳಲುತ್ತಿದೆಯೆಲ್ಲಾ” ಆದ್ದರಿಂದ ಅಕ್ಷರ ಬರ ನೀಗಿಸುವ ಸತ್‌ಸಂಕಲ್ಪ ಮಾಡಿ 1951ರಲ್ಲಿ ಶ್ರೀ ಗವಿಸಿದ್ದೇಶ್ವರ ಸಂಯುಕ್ತ ಪ್ರೌಢಶಾಲೆಯ ಜೊತೆಗೆ ಮುಖ್ಯವಾಗಿ ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಶ್ರೀಮಠದ ಬಹು ಮೌಲ್ಯಯುತ ಆಸ್ತಿಯನ್ನೇ ಅಕ್ಷರ ಯಜ್ಞಕ್ಕೆ ಧಾರೆ ಎರೆಯುವುದರ ಮುಖಾಂತರ ಅನೇಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ನಂದಾದೀಪವಾದರು. ಸಾವಿರಾರು ಜನರಿಗೆ ಆಯುರ್ವೇದ ವಿದ್ಯೆಯನ್ನು ಕಲಿಸಿ ಅವರನ್ನು ಹಳ್ಳಿ-ಹಳ್ಳಿಗಳಿಗೆ ಹೋಗಿ ರೋಗಿಗಳ ಸೇವೆಯನ್ನು ಮಾಡಲು ಕಳುಹಿಸಿದರು. ಗುರು ಪರಂಪರೆಯನ್ನು ಮುಂದುವರೆಸಿಕೊಂಡು ಬಂದ 17ನೇ ಪೀಠಾಧಿಪತಿಗಳಾದ ಶ್ರೀ ಶಿವಶಾಂತವೀರ ಶಿವಯೋಗಿಗಳು ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ & ಆಸ್ಪತ್ರೆಯನ್ನು ಸ್ಥಾಪಿಸಿ ಆಧ್ಯಾತ್ಮ ಮತ್ತು ಆರೋಗ್ಯ ಸೇವೆಯನ್ನು ಗೈದರು. ಗುರುಗಳು ಕಂಡ ಕನಸನ್ನು ಸಾಕಾರಗೊಳಿಸಿದರು.

1951ರಲ್ಲಿ ಕೆಲವೇ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಶ್ರೀ ಗವಿಸಿದ್ದೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯಕ್ಕೆ ಕ್ರಮೇಣವಾಗಿ ವಿದ್ಯಾರ್ಥಿಗಳ ಸಂಖ್ಯೆ ವರುಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಯಿತು ಇದನ್ನು ಅರಿತು ಪೂಜ್ಯರು 2007ರಲ್ಲಿ ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ಅಮೃತ ಹಸ್ತದಿಂದ 2000ವಿದ್ಯಾರ್ಥಿಗಳಿಗಾಗಿ ಉಚಿತ ವಸತಿ ಹಾಗೂ ಪ್ರಸಾದ ನಿಲಯಯನ್ನು ಲೋಕಾರ್ಪಿತಗೊಳಿಸಿದರು. ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು 2022-23ರಲ್ಲಿ 3395 ವಿದ್ಯಾರ್ಥಿಗಳ ಪ್ರವೇಶ ಹೊಂದಿದಾಗ ಶ್ರೀ ಗವಿಮಠವು ಅವರಿಗೆ ಸ್ಥಳಾವಕಾಶದ ಕೊರತೆ ಇದೆ ಎಂದು ಹೇಳದೆ ಶ್ರೀಮಠದ ವೃದ್ಧಾಶ್ರಮ, ಇಂಡೋರ್ ಸ್ಟೇಡಿಯಂ ಇನ್ನಿತರ ಸ್ಥಳಗಳಲ್ಲಿ ವಸತಿ ಹಾಗೂ ಪ್ರಸಾದವನ್ನು ಕಲ್ಪಿಸಿ, ಸಾವಿರಾರು ವಿದ್ಯಾರ್ಥಿಗಳ ಹೃದಯದಲ್ಲಿ ಎಂದೂ ಆರದ ಅಕ್ಷರದೀಪವನ್ನು ಬೆಳಗಿಸುವ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ.

ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯವು ಈಗ ಭವ್ಯವಾದ ಕಟ್ಟಡ ನಿರ್ಮಾಣಗೊಂಡಿದೆ. ಇದು ಕೇವಲ ಕಲ್ಲು, ಇಟ್ಟಿಗೆಗಳ ಕಟ್ಟಡವಲ್ಲ, ಸದ್ವಿಚಾರ, ಸತ್ಕಾರ್ಯ, ಸದ್ಭಾವ ಎಂಬ ಬೀಜಗಳನ್ನು ಮಕ್ಕಳ ಹೃದಯ ಭೂಮಿಕೆಯಲ್ಲಿ ಬಿತ್ತುವ ಜ್ಞಾನದ ಹೂದೋಟ, ವಸತಿ ನಿಲಯದಲ್ಲಿ ಈ ಹಿಂದೆ ಅಭ್ಯಾಸಗೈದ ಬಹಳಷ್ಟು ವಿದ್ಯಾರ್ಥಿಗಳು ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. 4500-5000 ವಿದ್ಯಾರ್ಥಿಗಳು ಈಗ ಪ್ರವೇಶವನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಗೂ ಆಧುನಿಕತೆ ತಕ್ಕಂತೆ ಶ್ರೀ ಗವಿಮಠವು ಸೌಲಭ್ಯಗಳನ್ನು ಒದಗಿಸಲಾಗಿದೆ “ಬಡತನದ ಕಾರಣದಿಂದ ನಾಡಿನ ಯಾವೊಬ್ಬ ಮಗುವು ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವುದು ಶ್ರೀಗಳ ಕಳಕಳಿ”.

Get real time updates directly on you device, subscribe now.

Comments are closed.

error: Content is protected !!