ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೆ ಪ್ರಯತ್ನಿಸಲು ಮನವಿ

Get real time updates directly on you device, subscribe now.

ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಪ್ರಧಾನಿಗೆ  ಮನವಿ
ಕೊಪ್ಪಳ :  ಕರ್ನಾಟಕ ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ (ಎಐಟಿಯುಸಿ ಸಂಯೋಜಿತ)ಜಿಲ್ಲಾ ಸಮಿತಿಯ ಮುಖಂಡರು ಲೋಕಸಭಾ ಸದಸ್ಯ  ರಾಜಶೇಖರ ಹಿಟ್ನಾಳ ಅವರಿಗೆ ಅವರ ಆಪ್ತ ಸಹಾಯಕ ಅರುಣ್ ಕುಮಾರ್ ಅವರ ಮುಖಾಂತರ ಸೋಮವಾರ ಸಂಜೆ ಮನವಿ ಪತ್ರ ಅರ್ಪಿಸಿದರು.
             ಸಲ್ಲಿಸಿದ ಮನವಿಯಲ್ಲಿ ಶಾಲೆಗಳಲ್ಲಿ ಅಡುಗೆ ತಯಾರಿಸುವ ಬಿಸಿಯೂಟ ತಯಾರಕರಿಗೆ ವೇತನ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು.ದೇಶದಾದ್ಯಂತ ಮದ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಶಾಲೆಗಳಲ್ಲಿ ಸುಮಾರು 20.00 ಲಕ್ಷಕ್ಕೂ ಹೆಚ್ಚು ಮಹಿಳೆಯರು ಅಡಿಗೆ ಸಿಬ್ಬಂದಿಯವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಕರ್ನಾಟಕ ರಾಜ್ಯದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಶಾಲೆಗಳಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವ 1.20,000.00 ಸಾವಿರಕ್ಕೂ ಮೇಲಿದ್ದಾರೆ.ಶಾಲೆಗಳಲ್ಲಿ ಮದ್ಯಾಹ್ನ ಉಪಹಾರ ಯೋಜನೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರ ಮಹಿಳೆಯರಿಗೆ ಕೇಂದ್ರ ಸರ್ಕಾರ ಬಿಸಿಯೂಟ ತಯಾರಕರ ಯೋಜನೆಗೆ 60+40 ಅನುಪಾತದಲ್ಲಿ ರಾಜ್ಯ ಸರ್ಕಾರಕ್ಕೆ ಅನುದಾನ ನೀಡುತ್ತಿದೆ.ಈ ಅನುದಾನದಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಗೆ ತಲಾ ಒಬ್ಬರಿಗೆ ರೂ.600/-ಗಳನ್ನು ಮಾತ್ರ ಕೇಂದ್ರ ಸರ್ಕಾರ ಗೌರವ ಸಂಭಾವನೆಯಾಗಿ ನೀಡುತ್ತಿದೆ. ಈ ಸಂಭಾವನೆಯಲ್ಲಿ ಬಿಸಿಯೂಟ ತಯಾರಕರು ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ಆದ್ದರಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಂಸದರಾದ ತಾವು ಪ್ರಧಾನ ಮಂತ್ರಿಯವರ ಮೇಲೆ ಒತ್ತಾಯತಂದು ಬಿಸಿಯೂಟ ತಯಾರಕರ ಸಿಬ್ಬಂದಿಗೆ ಕನಿಷ್ಠ ವೇತನ ಜಾರಿಮಾಡಲು ಒತ್ತಾಯ ಮಾಡಬೇಕು. ಬಿಸಿಯೂಟ ತಯಾರಕರಿಗೆ ಕೆಲಸದ ಭದ್ರತೆ ಒದಗಿಸುವುದು ಸೇರಿದಂತೆ ಕಾರ್ಮಿಕ ಕಾಯ್ದೆ ಅಡಿಯಲ್ಲಿ ದೊರಕುವ ಇತರೇ ಸೌಲತ್ತುಗಳನ್ನು ಬಿಸಿಯೂಟ ತಯಾರಕರ ಮಹಿಳೆಯರಿಗೆ ಒದಗಿಸುವಂತೆ ಸದನದಲ್ಲಿ ಕೇಂದ್ರ ಸರ್ಕಾರಕ್ಕೆ ತಾವುಗಳು ಒತ್ತಾಯ ಮಾಡಬೇಕು ಎಂದು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್. ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ಜಿಲ್ಲಾ ಮುಖಂಡ ಏ.ಎಲ್. ತಿಮ್ಮಣ್ಣ.ಶ್ರೀಮತಿ ನೀಲಮ್ಮ ಕಾರಟಗಿ.ಸುನಂದ ಸಜ್ಜನ.ಪಾರ್ವತಮ್ಮಕನಕಗಿರಿ. ತಾಹೇರಾ ಬೇಗಂ. ಬಸಮ್ಮ ಪಾರ್ವತಿ. ಬಂದಮ್ಮ ಗಂಗಾವತಿ ಮುಂತಾದವರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!