ಪತ್ರಕರ್ತ ಶರಣಪ್ಪ ಕುಂಬಾರ ನಿಧನ:ಸಚಿವ , ಸಂಸದ, ಶಾಸಕರ ಸಂತಾಪ

Get real time updates directly on you device, subscribe now.

*ಪತ್ರಕರ್ತ ಶರಣಪ್ಪ ಕುಂಬಾರ ನಿಧನ:ಸಚಿವ ತಂಗಡಗಿ ಸಂತಾಪ*

ಕೊಪ್ಪಳ :
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳದ ಹಿರಿಯ ಪತ್ರಕರ್ತ, ಕೃಷಿ ಪ್ರಿಯ ವೆಬ್ ಪತ್ರಿಕೆಯ ಸಂಪಾದಕ ಶರಣಪ್ಪ ಕುಂಬಾರ ಅವರ ಅಕಾಲಿಕ ಸಾವಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚವ ಶಿವರಾಜ್ ತಂಗಡಗಿ ಶೋಕ ವ್ಯಕ್ತಪಡಿಸಿದ್ದಾರೆ.
ಶರಣಪ್ಪ ಕುಂಬಾರ ಅವರು ಪ್ರತಿಭಾವಂತ ಪತ್ರಕರ್ತರಾಗಿ ನಾಡಿನ ವಿವಿಧ ದಿನಪತ್ರಿಕೆ, ಮಾಧ್ಯಮಗಳಲ್ಲಿ ಸೇವೆಗೈದಿದ್ದಾರೆ. ಅಕಾಲಿಕವಾಗಿ ನಿಧನ ಆಘಾತ ತಂದಿದೆ. ಯುವಕ ಶರಣಪ್ಪ ಕುಂಬಾರ ಅವರು ಅಕಾಲಿಕವಾಗಿ ನಮ್ಮನ್ನಗಲಿರುವುದು ಮಾಧ್ಯಮ ಲೋಕಕ್ಕೆ ನಷ್ಟವಾಗಿದೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರಾದ ತಂಗಡಗಿ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

 

ಪತ್ರಕರ್ತ ಶರಣಪ್ಪ ಕುಂಬಾರ ನಿಧನಕ್ಕೆ ಸಂಸದರಿಂದ ಸಂತಾಪ

ಕೊಪ್ಪಳ : ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದವರಾಗಿದ್ದ ಪತ್ರಕರ್ತ ಶರಣಪ್ಪ ಕುಂಬಾರ ಅವರ ಅಕಾಲಿಕ ನಿಧನದಿಂದಾಗಿ ಕೊಪ್ಪಳ ಜಿಲ್ಲಾ ಮಾಧ್ಯಮರಂಗಕ್ಕೆ ನಷ್ಟ ಉಂಟಾಗಿದೆ ಎಂದು ಸಂಸದರಾದ‌ ಕರಡಿ ಸಂಗಣ್ಣ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶರಣಪ್ಪ ಅವರು ಸ್ಥಿತಿವಂತರಲ್ಲದಿದ್ದರೂ ಮಾನವೀಯ ಸಿರಿವಂತ ಗುಣಗಳನ್ನು ಹೊಂದಿದ್ದರು. ಅದು ಅವರ ಕಾರ್ಯವೈಖರಿಯಲ್ಲಿಯೇ ಕಾಣುತ್ತಿತ್ತು. ಅಂತಹ ಪ್ರತಿಭಾನ್ವಿತ ಪತ್ರಕರ್ತ ಅಗಲಿದ್ದಕ್ಕೆ ಕೊಪ್ಪಳ ಜಿಲ್ಲಾ ಮಾಧ್ಯಮ ರಂಗಕ್ಕೆ ಬಹಳಷ್ಟು ನಷ್ಟ ಉಂಟಾಗಿದೆ. ದೇವರು, ಮೃತನ ಕುಟುಂಬ ವರ್ಗದವರಿಗೆ, ಬಂಧು ಬಳಗದವರಿಗೆ, ಪತ್ರಕರ್ತರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಸಂಸದರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

 

 

ಬೆಂಗಳೂರು ಜುಲೈ 06:

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಾಳದ ಹಿರಿಯ ಪತ್ರಕರ್ತ, ಕೃಷಿ ಪ್ರಿಯ ವೆಬ್ ಪತ್ರಿಕೆಯ ಸಂಪಾದಕ ಶರಣಪ್ಪ ಕುಂಬಾರ ಅವರ ಅಕಾಲಿಕ ಸಾವಿಗೆ ಮಾಜಿ ಸಚಿವ‌, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಮತ್ತು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಶೋಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ಮೂಲಕ ಸಂದೇಶ ತಿಳಿಸಿರುವ ಅವರು, ಶರಣಪ್ಪ ಕುಂಬಾರ ಅವರು ಪ್ರತಿಭಾವಂತ ಪತ್ರಕರ್ತರಾಗಿ ನಾಡಿನ ವಿವಿಧ ದಿನಪತ್ರಿಕೆ, ಮಾಧ್ಯಮಗಳಲ್ಲಿ ಸೇವೆಗೈದಿದ್ದಾರೆ. ಅಕಾಲಿಕವಾಗಿ ನಿಧನ ತೀವ್ರ ಬೇಸರ ತಂದಿದೆ. ಯುವಕ ಶರಣಪ್ಪ ಕುಂಬಾರ ಅವರು ಅಕಾಲಿಕವಾಗಿ ನಮ್ಮನ್ನಗಲಿರುವುದು, ಮಾಧ್ಯಮ ಲೋಕಕ್ಕೆ ನಷ್ಟವಾಗಿದೆ.
ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ, ಸರಕಾರದ ಸೌಲಭ್ಯಗಳನ್ನು ತುರ್ತಾಗಿ ಕೊಡಿಸಲು ಪ್ರಾಮಾಣಿಕವಾಗಿ ಸ್ಪಂದಿಸುವದಾಗಿ ಎಂದು ಶಾಸಕ ದ್ವಯರಾದ ಬಸವರಾಜ ರಾಯರಡ್ಡಿ ಮತ್ತು ಕೆ. ರಾಘವೇಂದ್ರ ಹಿಟ್ನಾಳ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

 

Get real time updates directly on you device, subscribe now.

Comments are closed.

error: Content is protected !!